ನಿನ್ನ್ಹೆಸರಿನ ಹೋಲಿ ನನ್ನದಾಗಲಿ
ನನ್ನುಸಿರ ಭಾವ ನಿನ್ನೊಂದಿಗೆ ಬೆರೆಯುತಿರಲಿ
ಒಂದೆ ಜೀವದುಸಿರ ಭಾವವಿದಾಗಲಿ
ನನ್ನೊಳಗೆ ನಿನ್ನೊಲವಿನ ದೀಪಾಂಜಲಿ
ಸರಿಗಮದ ಬಣ್ಣದೋಕುಳಿ ನೀ ನನ್ನ ಪ್ರಿಯಾವಳಿ
ತಂಪಾದ ಗಾಳಿಗೂ ಮೀರಿದ ನಮ್ಮಿಬ್ಬರ ಕಚಗುಳಿ
ಹಾಡುತ್ತ ನಲಿಯುತ್ತ ವರ್ಣಗಳ ಜೊತೆಗೂಡಿದ ಬಳಿ
ಕನಸುಗಳ ಹಂದರ ಮೆಚ್ಚಿದ ಮನದ ಭಾವದೋಕುಳಿ.!
ನಿನ್ನುಸಿರ ತಾಪದಲ್ಲಿ ಮಿಂದೆದೆದ ಮನಕೆ ನಿನ್ನಾಸರೆ
ಈ ಹೋಕುಳಿಯ ಹಬ್ಬದಲ್ಲಿ ಕೈಸೆರೆಯಾದ ದೊರೆ
ಏಳು ಬಣ್ಣಗಳು ಸೇರಿ ಹೊಳೆಯುವ ಪಿತಾಂಬರೆ
ರಗಡು ನಾನು ಟಗರು ನೀನು ಒಂದಾದ ಮನ ಸೇರುತಿರೆ.!
ತುಳುಕಿದೆ ಹೋಳಿಯ ಕೊಡ ಇನ್ನೇಕೆ ತಡ ಅಬ್ಬಬ್ಬಾ.!
ಎರಚುವೆ ನೋಡಾ ಬಣ್ಣ ಬಣ್ಣವ ಮೈತುಂಬ ಸುಬ್ಬ
ಒಲವಿಗಾಗಿ ಬಂದಂತಿದೆ ಈ ಹೋಳಿಯ ಹಬ್ಬ
ನಮ್ಮೆಲ್ಲ ಒಲವಿನ ಕನಸಿಗೆ ಬುನಾದಿ ಈ ದಿಬ್ಬ.!
ದಿಬ್ಬಣ ಹೊರಟಾಗಿದೆ ನಿನ್ನ ಜೊತೆ ಚೆಲ್ಲಾಟವಾಡಲು
ಜೋಡಿಸಿದ ಕೈಗಳೆರಡೂ ಅಪ್ಪುಗೆಗೆ ಹಾತೊರೆದಿರಲು
ಹೋಕುಳಿಯ ನೀರು ಸೋಕುತಿದೆ ನಿನ್ನ ಉಸಿರೊಂದಿಗೆ
ಹೊಳೆಯಾಗಿ ಹರಿದಂತಿದೆ ನಿನ್ನ ಜೊತೆಯೊಂದಿಗೆ.!
ನೀನೆಂದರೆ ನನ್ನೊಳಗೆ ಕೀಟಲೆ ಮಾಡುವ ಮಕರಂದ
ನಾ ಕಿಚಾಯಿಸಿದರು ಬೇಸರಿಸಿಕೊಳ್ಳದ ಪುಷ್ಪಗಂಧ
ಮಿಂದೆದ್ದ ಹೋಕುಳಿಯಲಿ ಕೊಡಬೇಕು ಮುತ್ತೊಂದ
ಮರೆಯದ ದಿನವಿದು ಮಾಸದ ನೆನಪುಗಳೆ ಚಂದ.!-
ಕೆಂಪು ಪ್ರೀತಿಯನ್ನು ಹೆಚ್ಚಿಸಲಿ
ಹಸಿರು ಗುರಿಯನ್ನು ಸಾಧಿಸಲಿ
ನೀಲಿ ನಂಬಿಕೆಯನ್ನು ರಕ್ಷಿಸಲಿ
ಕಿತ್ತಳೆ ಆರೋಗ್ಯವನ್ನು ಕಾಪಾಡಲಿ
ಹಳದಿ ಹರುಷವನ್ನು ಪರಿಚಯಿಸಲಿ
ಎಲ್ಲಾ ಬಣ್ಣಗಳ ಮಿಶ್ರಣ ಬಿಳಿ
ಸದಾ ಶಾಂತಿಯೊಂದಿಗೆ ನೆಲೆಸಲಿ..-
ಗಜ಼ಲ್
ಅವಳ ಕಣ್ಣಪಾಪೆಯಲಿ ಕರೆಯುವ ಬಣ್ಣ
ಚಿತ್ತಚಾಂಪಲ್ಯ ಇಣುಕುತ್ತ ಕುಣಿಯುವ ಬಣ್ಣ
ವಸಂತನಾಗಮನಕ್ಕೆ ತಯಾರಾಗಿ ನಿಂತಂತೆ
ಅವಳ ಸ್ಪರ್ಶದಿ ಜೀಕುತಾ ಮಣಿಯುವ ಬಣ್ಣ
ಮೊದಲಮಳೆಗೆ ಘಮ್ಮೆಂದ ಮಣ್ಣ ಪರಿಮಳ
ಅವಳಧರ ಮಧುವಲಿ ಬೆರೆಯುವ ಬಣ್ಣ
ಅವಳ ಮಧುರ ಸಲ್ಲಾಪದ ಬಿಸಿಕೂಟದಿ
ಮನದ ದುಗುಡ ಕರಗಿ ನಲಿಯುವ ಬಣ್ಣ
ಅವಳಾತ್ಮದ ಕಂಪಿಗೆ ಜೀವ ಸೋತಿದೆ ಸಾಕಿ
ಒಲವ'ಗೀತ'ವ ಶೃತಿಯಲಿ ಸವಿಯುವ ಬಣ್ಣ-
ನಿನ್ನ ಪ್ರೀತಿ ತುಂಬಿದ ಮಾತಲ್ಲಿ
ರಂಗೇರುವ ನನ್ನ ಕೆನ್ನೆಗಿಂತ
ಬೇರೆ ರಂಗು ಬೇಕೆ ನೀ ಹೇಳು
ಪ್ರೇಮದಾಟದಲಿ ನೀ ತುಸು
ಪೋಲಿಯಾದಾಗ ರಂಗೇರಿದ
ಅಧರದ ರಂಗನ್ನು
ನಿನಗೆ ಉಣಬಡಿಸಿ
ರಂಗೇರಿದ ವದನವ
ನಿನ್ನ ಕರಗಳಲಿ ಬಂಧಿಯಾಗಿಸುವ
ತವಕಗಿಂತಲೂ ಇಂದು ಹಾಕಿ
ತೊಳೆದೋಗುವ
ಬಣ್ಣವದು ಬೇಕೆ ನಿನಗೆ...!!??-
ಕ್ಷಣಕ್ಷಣವೂ
ಬದಲಾಯಿಸುತ್ತಲೇ
ಇದೆ ದುನಿಯಾ ತನ್ನ ಬಣ್ಣವನ್ನು..
ಆದರೂ ಜನರು ಕೇಳುತ್ತಾನೆ ಇದ್ದಾರೆ,
ಯಾವಾಗ 'ಹೋಳಿ' ಎಂದು..-
ವಸಂತ ಮಾಸವನ್ನು ಸಂಭ್ರಮದಿಂದ
ಬರಮಾಡಿಕೊಳ್ಳುವ ಹೋಳಿಹಬ್ಬವು
ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ,ಸ್ನೇಹ,
ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ!
ಹೋಳಿ ಹಬ್ಬದ ಶುಭಾಶಯಗಳು-
ಹಲವಾರು ಬಣ್ಣಗಳು
ಕಣ್ಣಿಗೆ ಸೊಗಸು ನೀಡುವ ಚಿತ್ರಲೇಖನಗಳು
ಅಲಂಕರಿಸಿ ಆವರಿಸಿರುವ ಅಚ್ಚರಿಯಗಳು
ಹೊಂಗಿರಣದಲಿ ಅರಳಿರುವ ಹೂವುಗಳು
ಕಲರವ ಬೀರುತಲಿವೆ ಹೊಸ ಜೀವನದಲ್ಲಿ
ಹಗೆತನ ಮರಿಸುವ ಹೊಸ ಬೆಳಕಿನ ಹೊಸ ಪ್ರೀತಿ ನಿಮ್ಮದಾಗಲಿ,
ಬಣ್ಣಗಳು ಹೇಗೇ ವಿಭಿನ್ನವಾಗಿವೆಯೋ
ಹಾಗೇ ಮನುಷ್ಯನ ಭಾವನೆಗಳು ಕೂಡಾ ವಿಭಿನ್ನ,
ಹೋಳಿ ಹಬ್ಬದಲ್ಲಿ ಎಲ್ಲಾ ಬಣ್ಣಗಳು ಒಂದಾಗುವಂತೆ
ನಿಮ್ಮ ಜೀವನದಲ್ಲಿರುವ ವೈಮನಸ್ಸುಗಳು ತೊರೆದು
ಒಮ್ಮನಸ್ಸಿನಿಂದ ಎಲ್ಲರೊಂದಿಗೆ ಒಂದಾಗಿ ಬಾಳುವಂತಾಗಲಿ.
"ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು"-
ಗಜಲ್
ಗಲ್ಲಿಗಳನ್ನೆಲ್ಲ ಬಣ್ಣದೋಕುಳಿಯು ತಂಪಾಗಿ ಮಾಡುತಿತ್ತು
ಇಂದು ಆ ಗೋಡೆಯು ರಂಗಿನಾಟಕ್ಕೆ ಬಿಕ್ಕಳಿಸುತಿತ್ತು
ರಂಗು ರಂಗಿನ ಬಣ್ಣ ಮುಖಕ್ಕೆ ಮಾತ್ರ ಬಳಿಯುತ್ತಿರಲಿಲ್ಲ
ಎಲ್ಲರ ಮೈ-ಮನಗಳನ್ನು ಆಪ್ತವಾಗಿ ಚುಂಬಿಸುತಿತ್ತು
ಬಣ್ಣಗಳಿಂದ ತಪ್ಪಿಸಿಕೊಳ್ಳಲು ತಲೆ ಮರೆಯಿಸಬೇಕಾಗಿತ್ತು
ಇಂದು ತಲೆ ಎತ್ತಿಕೊಂಡು ತಿರುಗಿದ್ರೂ ಮುಖ ಶುಭ್ರವಾಗಿತ್ತು
ಮನಸ್ಸುಗಳು ಓಡುತ್ತಿವೆ ವಿಮುಖವಾಗಿ ಎಲ್ಲರಿಂದಲು
ಓಕುಳಿಯು ವೈಮನಸ್ಸು ಮರೆಯಿಸುವ ಸಾಧನವಾಗಿತ್ತು
ಅಂದು ಸಮಾಜವನ್ನು ಬೆಸೆಯುತಿತ್ತು ಮೌಲ್ಯಗಳ ಅಡಿಯಲ್ಲಿ
ಇಂದು ಸಂಸಾರದಲ್ಲಿ ಬಿರುಕು ಮೂಡಿಸುತ ಕುಣಿಯುತಿತ್ತು-