ಈ ಸುಳ್ಳನ್ನೇ ಕಲಿಸುವುದು ಈ ಸಿಹಿ ಕನಸು
ಅದನ್ನೇ ಬಯಸುವದು ಹುಚ್ಚುಕೋಡಿ ಮನಸ್ಸು
ನಿನ್ನ ವಿರಹ ಏಕಾಂತದಲ್ಲಿ ಚಂದ ಮುನಿಸು
ವಿರಹ ಆಸ್ವಾದಿಸುವುದ್ರಲ್ಲಿ ಏನೋ ಒಂತರ ಸೊಗಸು
ತಿಳಿ ನಾಚಿಕೆಯಲ್ಲಿ ಮುತ್ತಿನ ಮತ್ತಲ್ಲಿ ವಿರಹ ಓಡಿಸು
ತುಟಿ ಕಚ್ಚಿ ಕಣ್ಣರಳಿಸಿ ಮುದ್ದಿಸು
ಒಲವ ಲಜ್ಜೆಯದಿ ತುಟಿಯಂಚಲ್ಲಿ ಮೈಮನವ ತಣಿಸು
ನನ್ನನ್ನೇ ನಾನು ಮರೆತು ಹೋಗುವ ಹಾಗೆ ತುಸು
ಅಚ್ಚಳಿಯದಂತೆ ಎದೆಯಲ್ಲಿ ನೆನಪುಗಳನ್ನು ಮುದ್ರಿಸು
ಇತಿಮಿತಿ ಇರದೆ ಅತಿಯಾಗಿ ಪ್ರೀತಿಸು
ಮುಗುಳುನಗಳಲ್ಲೇ ಹೃದಯದ ಭಾರವಿಳಿಸು
ಈ ಪ್ರೀತಿಯ ವಿನಂತಿ ಸ್ವೀಕರಿಸಿ ಸಮ್ಮತಿಸು
ಕಣ್ಣಲ್ಲಿ ಕಣ್ಣಿಟ್ಟು ಮೋಹಕ ನೋಟದಿ
ಎದೆ ಝಲ್ಲೆನ್ನುವಂತೆ ನಡುಗಿಸು
ಉಸಿರಿರುವ ಕೊನೆವರೆಗೂ ಕೈಹಿಡಿದು ನಡೆಸು
ನೋವು ನಲಿವಿನಲ್ಲಿ ಒಲವೇ ಬದುಕಿನಲ್ಲಿ ನಗಿಸು
ಹೃದಯದ ಸಾನ್ನಿಧ್ಯ ಅಲಂಕರಿಸಿ ನೀನಿರದ
ಕೊರತೆಯನ್ನು ನೀಗಿಸು..
☛✍ಸಿದ್ದರಾಜಗುರು ಎಸ್ ವಿ,ಹೆಸ್ಕಾಂ ಗದಗ☛✍
ಓಡಿಸು ಕೊಡಿಸು
ಪ್ರೇಮದ ಓಲೆ ಮುದ್ರಿಸು
ಮುದ್ದಿಸು ಅರಳಿಸು ಪ್ರೀತಿಸು ತುಸು ತಾಸು
ನಿನ್ನ ನೆನಪುಗಳನ್ನು ಮುದ್ರಿಸು ನಗಿಸು ನೀಗಿಸು ಸಲ್ಲಿಸು ಮನವೊಲಿಸು ಪೂರೈಸು ಈಡೇರಿಸು ನಮಸ್ಕರಿಸು ಅಲಂಕರಿಸು-
ಎದೆಯಲ್ಲಿ ನಿನ್ನ ನೆನಪುಗಳ ಕಾದಾಟ
ಅರೆಕ್ಷಣ ನಿಂತಂತಾಗುತ್ತಿದೆ ಉಸಿರಾಟ
ಸುಳಿವೇ ಇಲ್ಲ ಭಾವನೆಗಳ ಹಾರಾಟ
ಚೈತನ್ಯ ಕಳೆದುಕೊಂಡಿದೆ ನೀನಿರದೆ ಹೃದಯದ ಹೂದೋಟ
ನಿನ್ನೊಲವ ಸಾನಿಧ್ಯ ಬಯಸಿ ಹೃದಯ ಹಿಡಿದಿದೆ ಹಠ
ಗಣ ಘೋರವಾಗಿದೆ ಸಹಿಸದೆ ವಿರಹದಿ ಮನಸ್ಸಿನ ಚೀರಾಟ
ಮತ್ತೆ ಸೇರಲು ನಿನ್ನೊಳಗೆ ರಾಜಿಯಾಗುತಿದೆ ಆಂತರ್ಯ
ನಿನ್ನ ಮಧುರ ಬಾಂಧವ್ಯವೇ ಎನ್ನ ಬದುಕಿಗೆ ಮಾಧುರ್ಯ
ಬೆಳದಿಂಗಳ ರಾತ್ರಿಯಲಿ ನಿನ್ನ ಸಿಹಿ ಸ್ವಪ್ನಗಳ ಆರ್ಭಟ
ಕೆಣಕುತಿದೆ ಮತ್ತೆ ಮತ್ತೆ ನಿನ್ನ ಕಳ್ಳ ಕಿರುನೋಟ
ಆಲಿಸಬಲ್ಲೆಯಾ ಮನಸಿನ ಅಂತರಾಳದ ತೊಳಲಾಟ
ಸೋತು ಶರಣಾಗಿದೆ ನಿನ್ನ ಪ್ರೀತಿಗೆ ಕೇಳುತ್ತಿಲ್ಲವೇ ಹೃದಯದ ಗೋಳಾಟ
ಮತ್ತೆ ಸೇರುವಾಸೆ ನಿನ್ನಯ ಸನಿಹಕೆ
ನಿನ್ನ ಹೊರೆತು ಬೇರೆ ಯಾರು ಇಲ್ಲ ಈ ಜೀವಕೆ
ಪ್ರತಿ ಜನ್ಮ ಜನ್ಮಕ್ಕೂ ನೀನೆ ಎನ್ನ ಸಂಗಾತಿಯಾಗ ಬೇಕು ಎನ್ನುವುದೇ ಎನ್ನ ಬಯಕೆ
ಉಸಿರಿರುವ ಕೊನೆವರೆಗೂ ಕಣ್ಣು ರೆಪ್ಪೆಯಾಗಿ ಕಾವಲಾಗಿರುವೆ
ಈಡೇರಿಸು ಮನದಾಳದ ಹರಕೆ
☛✍ಸಿದ್ದರಾಜಗುರು ಎಸ್ ವಡ್ನವರ ಹೆಸ್ಕಾಂ ಗದಗ☛✍
-
ಆ ಸತ್ಯನ ಒಂದೊಮ್ಮೆ ನೀ ನನಗೆ ತಿಳಿಸು
ಅದರ ನಿರೀಕ್ಷೆಯಲ್ಲೆ ದಿನ ಕಳೆಯುವುದು ಮನಸ್ಸು
ನಿನ್ನ ಹಮ್ಮು-ಬಿಮ್ಮುಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸು
ಸೋಲುವುದರಲ್ಲಿಯೂ ಇದೆ ಕೆಲವೊಮ್ಮೆ ಯಶಸ್ಸು
ತುಸು ಮುದ್ದಾಡುತಲಿ ಪ್ರೇಮದ ಸುಧೆ ಸುರಿಸು
ಮತ್ತೊಮ್ಮೆ ಹೃದಯದ ಪಿಸುಮಾತುಗಳನ್ನು ಆಲಿಸು
ಪ್ರೀತಿಯ ಮಾತುಗಳಿಂದಲೆ ಒಲವ ತಂಪನೆರೆಸು
ಮಗದೊಮ್ಮೆ ಜಗವನ್ನೆ ಮರೆತು ಬಾನಂಗಳದಲ್ಲಿ
ತೇಲಿಸು
ನನ್ನ ಬಾಳಲ್ಲಿ ನಿನ್ನ ಪ್ರೇಮದ ಜ್ಯೋತಿಯನ್ನುರಿಸು
ಎಂದು ಆರದಂತೆ ಆ ವಾಯುವಿಗು ಆಜ್ಞಾಪಿಸು
ನಿನ್ನ ನಗುವಲ್ಲೆ ನನ್ನೆಲ್ಲಾ ನೋವುಗಳ ಮರೆಸು
ಆ ಪ್ರೀತಿಯ ಬಗೆಯನ್ನು ನನಗೂ ಸ್ವಲ್ಪ ಕಲಿಸು
ಕಣ್ಣಲ್ಲಿ ಕಣ್ಣಿಟ್ಟು ನನ್ನೆಲ್ಲಾ ಭಾವಗಳನ್ನು ಸ್ವೀಕರಿಸು
ಕೈಯಲ್ಲಿ ಕೈಹಿಡಿದು ಜೊತೆಯಲ್ಲಿ ಹೆಜ್ಜೆಗಳನ್ನಿರಿಸು
ಕಷ್ಟ-ಸುಖಗಳಲ್ಲಿ ಒಲವೇ.. ನೀ ನನ್ನ ಪ್ರೀತಿಸು
ಸಾಂಪ್ರದಾಯಿಕವಾಗಿ ನನ್ನೊಡಲ ಯಜಮಾನ
ಪಟ್ಟ ಅಲಂಕರಿಸು..
-ಶ್ರುತಿ ಕೆ.ಜಿ ( Shruthi K.G)-
ನಿನ್ನ ನೆನಪುಗಳೆ ಆಗಿದೆ ನನ್ನ ಜೀವಕೆ ಆಸರೆ
ನೀ ಜೊತೆ ಇದ್ದಿದ್ದರೆ ನಾ ಆಗುತ್ತಿದೆ ನಿನ್ನ ಕೈಸೆರೆ.-
ಮುತ್ತಿನಂತ
ಕನಸುಗಳನು
ಅಚ್ಚೊತ್ತಲು
ಸ್ವಚ್ಛ ಮನಸಿನ
ಹೃದಯದ
ಅಚ್ಚ ಬಿಳಿ
ಹಾಳೆಗಳನು
ನಿನಗೆಂದೆ
ತೆರೆದಿರುವೆ
ತುಂಬಿಕೊಡು-
ತನಿಯಲಾರದೆ
ಮೀಟುತಿರುವ
ಹೃದಯದ ತಂತಿ,
ನುಡಿಸುತಿದೆ
ಹೊರಹೊಮ್ಮದ
ಅದ್ಯಾವುದೊ
ತಿಳಿಯದ ಸಂಗತಿ..!-