ಎಳ್ಳಿನ ಒಗರು, ಬೆಲ್ಲದ ಸಿಹಿಯನ್ನು ಅವಶ್ಯಕತೆಗನುಸಾರ ತನುವು ಸ್ವೀಕರಿಸಲಿ. ತನುವಿನಾರೋಗ್ಯವು ಮನಕ್ಕೆ ಮುದ ನೀಡಲಿ. ಸಂಕ್ರಾಂತಿಯಿಂದ ಬದುಕನ್ನು ಹಸನಾಗಿಸಿಕೊಳ್ಳಲು ಶಾಂತ ರೀತಿಯಲ್ಲಿ ಕ್ರಾಂತಿಗಳಾಗಲಿ. ಕೆಟ್ಟ ವಿಚಾರಗಳು ನಮ್ಮ ಮೇಲೆ ಆಕ್ರಮಣ ಆಗದಂತೆ ಎಚ್ಚರಿಕೆ ವಹಿಸುವುದೇ ಸಂಕ್ರಮಣ ಹಬ್ಬದಾಚರಣೆಯ ಧ್ಯೇಯ ವಿಚಾರವಾಗಲಿ. ಎಲ್ಲರಿಗೂ ಉತ್ತರಾಯಣ ಪರ್ವ ಕಾಲದ ಹಾರ್ದಿಕ ಶುಭಾಶಯಗಳು.
-
ಕಲಿಸಬೇಕು ನನ್ನಾಕೆಗೆ ನಡೆದುಕೊಳ್ಳಲು ತಗ್ಗಿ ಬಗ್ಗಿ
ಆರ್ಡರ್ ಮಾಡಿ ತರಿಸಲು ಇಟ್ಟುಕೊಂಡಿದ್ದಾಳೆ ಸ್ವಿಗ್ಗಿ
ಅಪರೂಪಕ್ಕೆ ಮಾಡಿದ್ದಳು ಅವತ್ತು ಗೋಧಿ ಹುಗ್ಗಿ
ಅದನ್ನು ತಿಂದು ಮಾರನೆಯ ದಿನ ಆಯಿತು ಬೇಧಿ ಹುಗ್ಗಿ..!!-
ನಮ್ಮ ಅತ್ತೆ ಹೊಲದಲ್ಲಿ ನಡದಿತ್ತು ಬಿಳಿ ಜೋಳ ಸುಗ್ಗಿ.
ಅತ್ತೆ ಮಗಳು ಸುಂದ್ರಿ ಮಾಡಿದ್ಲು ಸುಡು ಸುಡುಹುಗ್ಗಿ.
ಹಿತ್ಲ ಬಾಗಿಲಿನಿಂದ ತಿನ್ನಲು ನಾ ಹೋದೆ ಒಳ ನುಗ್ಗಿ.
ಹಾಲ್ಹುಗ್ಗಿ ತಿಂದ ಯಾರ್ಗ್ಯೂ ಕಾಣದೇ ಬಂದೆ ನಾ ಬಗ್ಗಿ.
😂😂😂-
ಒಲಿಮೇಲ ಹುಗ್ಗಿ ಇಟ್ಟ ಬೆಲ್ಲಾ ತರಸಾಕ ಕಳಸಬೇಕ ಹುಗ್ಗಿ ಅನ್ನೊದ ಕರಿಕಾಡಸಿ ಹೋಗಿರತದ ಅವರದ ಇನ್ನು ಮಾತಾಡೊದ ಮುಗದಿರೊಲ್ಲಾ ಎಂತಾ ಮಾತಡಾತಾರ ಜನಾ 😂😆😆😁🙄😲
-
ಪುಸ್ತ್ಕ-ಮಸ್ತ್ಕ.
ವಿದ್ಯ ಕಲಿಬೇಕಂದ್ರ ಪುಸ್ತ್ಕ ಓದ್ಬೇಕ್ರೀಪಾ,
ಬದುಕಾದ ಕಲಿಬೇಕಂದ್ರ ಮಸ್ತ್ಕ ಓದ್ಬೇಕ್ರೀಪಾ.
ಈ ಎರ್ಡು ಇದ್ದಿತಂದ್ರ, ಬಾಳ್ ಗೋಧಿ ಹುಗ್ಗಿ ಉಂಡಂಗಾಗ್ದದ್ರಿಪಾ.!-
ಹುಗ್ಗಿ
ಲೋಕ್ ಡೌನ್
ಕೂಡಾ
ಶ್ರೀಮಂತನಿಗೆ
ಸುಗ್ಗಿ
ಬಡವನಿಗೆ
ಒಂದು ಹೊತ್ತು
ತಿನ್ನುವುದಕ್ಕೂ
ಇಲ್ಲ ಹುಗ್ಗಿ-
ಸಂಕ್ರಮಣ,ಸಂತಸ ಮಣಮಣ
..........................................
ಒಡಲು ತುಂಬಿ ನಿಂತಿಹಳು ಭೂಮಾತೆ!,
ನೀಗಿಸುತ ಹಸಿವು, ಇರುವಂತೆ ಜನ್ಮದಾತೆ!.
ರೈತರ ಮನದಿ ತೃಪ್ತಿ, ನೋಡಿ ಅನ್ನ ನೀಡಿದ ನೆಲ,
ಸುಗ್ಗಿಗಿದು ಖುಷಿಯ ಹಿಗ್ಗಿಸುವ ಉತ್ತರಾಯಣ ಪರ್ವಕಾಲ!.1
ಇದೋ ಬಂತು ಸಂಕ್ರಮಣ
ಮಕರಕ್ಕೆ ರವಿಯ ಆರೋಹಣ
ಹುಗ್ಗಿಯ ಹಿಗ್ಗಿ ನಿಂದ ಆಸ್ವಾದಿಸುವ,
ಸುಗ್ಗಿಯ ಸಂಕ್ರಾಂತಿಯ ಆಚರಿಸುವ. 2
ಚಿನ್ನದ ಬೆಳಕನ್ನು ಚೆಲ್ಲುತ ಬರುವನು ರವಿ,
ಪ್ರಭೆಯಡಿ ನಿಂತು ಪತಂಗ ಹಾರಿಸುವ ಸವಿ!.
ಏರಿತು ಹಾರಿತು ಗಾಳಿಪಟ ಬಾನಿನೆಡೆ,
ರಶ್ಮಿಯ ಪಡೆಯುತ ಹಾಕುವಾನಡೆ,ಆರೋಗ್ಯದೆಡೆ!.3
ಹೇಮಂತನ ಚಳಿ ಕಾಯಿಸಲು ರವಿ ಏರಿದ ಮಕರರಥ!,
ಕುಬ್ಜ ಮನಸ್ಸಿನಿಂದ ತೆರೆದಭಾವದೆಡೆ ನಮ್ಮದಾಗಲಿ ಪಥ.
ಮರೆತು ಭೇದ, ಪಂಥ, ಜಾತಿ, ಮತ ,ಕುಲ,
ಎಲ್ಲರೂ ಸಂತಸದಿಂದ ಹಂಚಿ ತಿನ್ನುವ ತಿಲ!.4
ಮಾನವ-ಪ್ರಕೃತಿಯ ಬಿಡದ ಬೆಸುಗೆ!,
ಸಂಕ್ರಮಣ ಸಂಭ್ರಮದಿ ರಂಗೇರಿತು ಅಂಗಳದ ಹಸೆಗೆ!.
ಸೂರ್ಯ ಕ್ರಮಿಸುವ Sunಕ್ರಮಣ,Sunಕ್ರಾಂತಿಗೆ!,
Sunನಡೆಯ ಜೊತೆ ಹಾಕುವಾ ನಾವೂ ಸನ್ನಡಿಗೆ!.5-