ಗಂಡನ ನೆಮ್ಮದಿ ಕಿತ್ತುಕೊಳ್ಳೋದು ಹೆಂಡತಿಯ ಆಜನ್ಮಸಿದ್ಧ ಹಕ್ಕು ಅಂತ ನನ್ನ ಸ್ನೇಹಿತೆ ಹೇಳಿದ್ಲು ಮರ್ರೆ🙄. ನಾ ಹಂಗೆಲ್ಲ ಮಾಡಂಗಿಲ್ಲ, ಸ್ಯಾನೆ ಒಳ್ಳೇವಳು ನಾ ಅಂದೆ😌. ಮದುವೆ ಆದಮೇಲೆ ನಿಂಗು ಗೊತ್ತಾಗ್ತದ ಬಿಡು ಅಂತ ಬೈದುಬಿಟ್ಲು ಮರ್ರೆ😒.
-
ರಾಷ್ಟ್ರೀಯ ಶಿಕ್ಷಣ ದಿನ
_ _ _ _ _ _ _ _ _ _ _ _ _
ಎಲ್ಲೆಡೆಯೂ ಶಿಕ್ಷಣದ ಜ್ಯೋತಿ ಬೆಳಗಿಸಿ,
ಅಜ್ಞಾನದ ಅಂಧಕಾರವ ತೊಲಗಿಸಿ.
-
ಯಾರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹಕ್ಕು ನಮಗಿಲ್ಲ ಹಾಗೇ ಹಾರುವ ಹಕ್ಕಿಗಳನ್ನು ಗೂಡಲ್ಲಿ ಕಟ್ಟಿ ಹಾಕುವ ಹಕ್ಕು ನಮಗಿಲ್ಲ ಎಲ್ಲಾ ಜೀವಿಗಳಿಗೂ ಅದರದ್ದೇ ಆದ ಸ್ವಾತಂತ್ರ್ಯ ಇದ್ದೇ ಇದೆ ಮನಸ್ಸಿನ ಭಾವನೆಗಳನ್ನ ಕಟ್ಟಿಹಾಕಲು ನಾವು ಯಾರು ಅಲ್ಲವೇ...
-
ಮುಪ್ಪಿನೆದಿರು
ಹರೆಯದ ಸೊಕ್ಕು,
ಅದಕ್ಕೂ ಕಾದಿದೆ
ಚಲಾಯಿಸಲೇಬೇಕಾದ
ಮುಪ್ಪೆಂಬ ಹಕ್ಕು,
ಹರೆಯ ಹಾಳಾಗೋ ಮೊದಲು
ಅರ್ಥೈಸಿಕೋ
ಬದುಕಿನಾಳಕ್ಕೆ ಹೊಕ್ಕು.-
ಭೂಮಿಗೆ ತಲೆಬಾಗಿ ಬದುಕು, ನಿನ್ನ ವ್ಯಕ್ತಿತ್ವ ಆಕಾಶದಷ್ಟೆತ್ತರಕ್ಕೇರುತ್ತದೆ. ಎಲ್ಲರ ಮನದಲ್ಲು ಇದೆ ಕೊಳಕು, ಹುಡುಕುತ್ತಾ ಕೂರಬೇಡ ನೀ ಅವರ ಹುಳುಕು, ನಿನ್ನ ಬದುಕಷ್ಟೇ ನೀ ಬದುಕು, ಇದು ನಿನ್ನ ಏಕಮಾತ್ರ ಹಕ್ಕು...
-
ನಾಳೆಯ ಬಗೆಗೆ ಕನಸು ಕಾಣುವ ನಮ್ಮ ಹಕ್ಕಿಗೆ ಅಭದ್ರತೆಯ ಭಾವ ಕಾಡುತಿದೆ
ಸಾವಿನ ಸರ್ವಾಧಿಕಾರದೆದುರು.-
ಹಕ್ಕು ಚಲಾಯಿಸಿ ಎಲ್ಲವನ್ನು ಗಳಿಸುವಂತಿದ್ದರೆ
ನ್ಯಾಯಕ್ಕೆ ಜಾಗವೇ ಇರ್ತಿಲ್ಲಿಲ್ಲಾ ಈ ಪ್ರಪಂಚದಲ್ಲಿ...
-
-ಗಜ಼ಲ್-
ಬದುಕಲೆಂದೇ ಜಗದಿ ಹುಟ್ಟಿರುವುದೀ ದೇಹ
ಅವಮಾನಿಸಲು ಆಗ ಅಳುವುದೀ ದೇಹ (೧)
ಬದುಕುವುದು ಅವರವರು ಪಡೆದಂಥ ಹಕ್ಕು
ನೋವ ನೀಡಲಾಗ ದುಃಖಿಸುವುದೀ ದೇಹ (೨)
ನೆಮ್ಮದಿಯ ನೀಡಲು ಆಗದೆಂದು ನಿನ್ನಿಂದ
ಕಸಿದುಕೊಂಡರದನು ನರಳುವುದೀ ದೇಹ (೩)
ಮದದಿಂದ ಪಡೆದದ್ದು ಅದ್ಹೇಗೆ ಉಳಿದೀತು
ಅಂತ್ಯದಲಿ ಚಿಂತನೆಯ ಮಾಡುವುದೀ ದೇಹ (೪)
ಶಾಂತಸುತನಿಗೆ ಇಲ್ಲವೋ ಯಾವುದೇ ಮೋಹ
ಅಳುವನ್ನು ಸರಿಸುತ್ತ ಬದುಕುವುದೀ ದೇಹ (೫)
-
ಸಂಬಂಧಗಳಲಿ ಹಕ್ಕು ಚಲಾಯಿಸುವವರೆ ಹೆಚ್ಚು ಗಾಲಿಬ್
ಕರ್ತವ್ಯ ಪಾಲಿಸುವವರನು ಅರಸುತಿರುವೆ ಯಾರೂ ಸಿಗುತ್ತಿಲ್ಲ-
ನಿನ್ನನ್ನು ನೇರ ನೋಡುವ ಹಕ್ಕಿಲ್ಲ
ಆದರೆ
ಕದ್ದು ಮುಚ್ಚಿ ನೋಡುವ ಹಕ್ಕಿದೆ,,
ನಿನ್ನೊಂದಿಗೆ ನೇರ ಮಾತಾಡುವ ಹಕ್ಕಿಲ್ಲ
ಆದರೆ
ಮನಸಿನೊಂದಿಗೆ ಮಾತಾಡುವ ಹಕ್ಕಿದೆ,,
ನಿನ್ನನ್ನ ತಬ್ಬಿ ಮುತ್ತಿಡುವ ಹಕ್ಕಿಲ್ಲ
ಆದರೆ
ಫೋಟೋ ನೋಡಿ ಮುತ್ತಿಡುವ ಹಕ್ಕಿದೆ,,
ನಿನ್ನನ್ನು ಮದುವೆಯಾಗುವ ಹಕ್ಕಿಲ್ಲ
ಆದರೆ
ಕೊನೆಯವರೆಗೂ ಪ್ರೀತಿಸುವ ಹಕ್ಕಿದೆ..!!-