QUOTES ON #ಸಂಸ್ಕಾರ

#ಸಂಸ್ಕಾರ quotes

Trending | Latest

"ನಮಸ್ಕಾರ"

'ನಮಸ್ಕಾರ'ದ ರೂಪ ಎಷ್ಟೊಂದು ವಿಸ್ತಾರ..
ಅದರೆದುರು ಅಡಗಿಕೊಳುತ್ತೆ ಅಹಂಕಾರ
ಎದ್ದು ನಿಲ್ಲುತ್ತೆ ಮನುಜನ ಸಂಸ್ಕಾರ

ಕಂಡೊಡನೆ ಮಾಡುವ ನಾಲ್ಕಕ್ಷರದ ನಮಸ್ಕಾರ
ಮಾಡುತ್ತೆ ಅದ್ಭುತ ಚಮತ್ಕಾರ
ಬಂಧು ಬಾಂಧವರಲ್ಲಿ ಇರಲ್ಲ 'ನಾನೆಂಬ' ಕಿರೀಟ ದ ಭಾರ

ಕರ ಜೋಡಿಸಿ ಮಾಡುವ ನಮಸ್ಕಾರ
ಅದರಲ್ಲಿರುವ ಭಕ್ತಿಭಾವ ಅಪಾರ
ಅದರೆದುರು ನಿಲ್ಲದು‌ ಹರನಿಗರ್ಪಿಸುವ ಹಾರ
ಆಡಂಬರಕ್ಕಿಂತ ವಿನಯದ ಆದರವನ್ನು ಮೆಚ್ಚುವನು ಆ ಹರ..

-



ಮನೆಯ ಸಂಸ್ಕೃತಿಯಲ್ಲಿಯೇ
ಮಕ್ಕಳ ಸಂಸ್ಕಾರ ಅಡಗಿರುತ್ತದೆ.

-



ಪುರುಷಾರ್ಥಗಳಲ್ಲಿ
ಕಾಮವೂ
ಒಂದು ಎಂದ್ಹೇಳುವ
ನಾವು ಅದಕ್ಕೆ
ಸಂಸ್ಕಾರ ಕೊಡುವಲ್ಲಿ
ಸೋತಿದ್ದೇವೆ.

-



ಊರ ಮುಂದಿನ ಹೊಲ, ತೋಟಗಳು
ಊರ ಸಂಸ್ಕಾರದ ಪ್ರತಿಬಿಂಬಗಳು...!!

-


25 OCT 2019 AT 9:14

ಸಹನೆ ನಿನ್ನಲ್ಲಿದ್ದರೆ
ಸಕಲವೂ ನಿನ್ನದೆ
ಸಂಸ್ಕೃತಿ ನಿನ್ನಲ್ಲಿದ್ದರೆ
ಸನ್ಮಾನವೂ ನಿನ್ನದೆ
ಸಂಸ್ಕಾರ ನೀ ಮರೆತರೆ
ಸಂಹಾರವೂ ನಿನ್ನದೆ

-



ವಿಚಾರಗಳಲ್ಲಿ ಸ್ವಾತಂತ್ರ್ವವಿರಲಿ
ಸಂಸ್ಕಾರದಲ್ಲಿ ಬಂಧನವಿರಲಿ..!!

-



ಸಭ್ಯತೆಗೆ
ಪ್ರತಿರೂಪ ಅವಳು,
ಸಂಸ್ಕಾರಕ್ಕೆ
ಇನ್ನೊಂದು ಹೆಸರು ಅವಳು.

-



ಹೈಕು
******
ಸಂಸ್ಕಾರ ಬೇಕು,
ಕಲಿತರೆ ಬರದು
ಪ್ರಮಾಣಿಕತೆ

-


17 DEC 2019 AT 18:08

ನಿದಿರೆ ಹತ್ತದ ಕಂಗಳು, ನಸುಕಿನವರೆಗೂ ಕಾಡುವ ಸ್ವಪ್ನಗಳು, ಆಗಾಗ ಹುಟ್ಟುವ ಭಾವನೆಗಳಿಗೆಲ್ಲ ಮನದೊಳಗೇ ಸಂಸ್ಕಾರ, ಹೇಳಿಯೂ ತೀರದ ಮಾತುಗಳಿಗೆ ಮೌನವೇ ಉತ್ತರ, ಜಗದೆದುರು ಸೋತು ಕೂತಾಗ ಸಂತೈಸಲು, ನನ್ನೆಲ್ಲಾ ಭಾವಗಳ ಹೇಳಿ ಬರಿದಾಗಿಸಲು, ಆಗೀಗ ಅನಿಸುವುದು...ಗೆಳೆಯನಿಗಿಂತ ಹತ್ತಿರ, ಸಂಗಾತಿಗಿಂತ ಎತ್ತರದ ವ್ಯಕ್ತಿತ್ವದ ಆಸರೆಯೊಂದು ಇರಬೇಕಿತ್ತೆಂದು...

-


17 MAY 2020 AT 22:14

'ಪಬ್ಜಿಯಂದ' ಮನೆಯ ಸಂಬಂಧ ಹಾಳು, ಸಂಸಾರವೂ ಹಾಳು...
'ಟಿಕ್ ಟಾಕ್' ನಿಂದ ದೇಶದ ಸಂಸ್ಕಾರ ಹಾಳು ಸಂಸ್ಕೃತಿಯೂ ಹಾಳು...
ಹೇಗೆ ಅಂತ ಮಾತ್ರ ಕೇಳ್ಬೇಡಿ,
ಆಡ್ಬೆಡಿ ಅಂತ ಮಾತ್ರ ಹೇಳುವುದಿಲ್ಲ.
ಅನುಭವಿಸಿದ ಮೇಲೆ ನಿಮ್ಮ ಅನುಭವ ಬೇರೆಯವರಿಗೆ (ಬುದ್ಧಿವಾದ) ಹೇಳಿ ಸಾಕು...😊

-