ಸಂಸಾರ ಸಾಗರ
ಆನಂದದ ಆಗರ
ಪ್ರೀತಿ ವಾತ್ಸಲ್ಯಗಳು ಮಧುರ
(Read Caption)..
👇🏾👇🏾👇🏾👇🏾👇🏾👇🏾👇🏾-
ಸಂಸಾರ ಸಾಗರ
ಅದುವೆ ಜೀವನೋತ್ಸಹದ ಭ್ರಮರ
ಸಿಹಿ ಕಹಿಗಳ ಹೂರಣ
ನೋವು ನಲಿವುಗಳ ಮಿಶ್ರಣ
(Read Caption)👇🏾👇🏾👇🏾👇🏾👇🏾-
ಮಂದಿಯ ಮಾತು ಕೇಳಿ ತನ್ನ ಗಂಡನನ್ನು ಕುರೂಪಿಯಂತೆ ಕಾಣುವ ಹೆಣ್ಣು. ಹಾಗೂ ಕೇವಲ ಸೀಮಿತ ವಿಷಯಕ್ಕಾಗಿ ತನ್ನ ಹೆಂಡತಿಯನ್ನು ಬಳಸಿಕೊಳ್ಳುವ ಗಂಡು. ಇವರ ಸಂಸಾರ ದೇವರೇ ಕಾಪಾಡಬೇಕು..-
ಮನೆಗಳು ಒಡೆಯದೆ, ಎಲ್ಲಾ ಮನಗಳು ಸೇರಿ ಬದುಕಿನ ಬಂಡಿಯ ಸಾಗಿಸುವುದೆ ಸಂಸಾರ.
ಒಬ್ಬರನ್ನೊಬ್ಬರು ಅರಿತು, ಜೋಡಿಯಾಗಿ ಬೆರೆತು
ಕಷ್ಟ ಸುಖಗಳ ಜೊತೆ ಕಲೆತು ಜೀವನ ಸಾಗಿಸುವುದೆ ಸಂಸಾರ.
ಮನುಜನಾಗಿ ಮನುಷ್ಯತ್ವಕ್ಕೆ ಬೆಲೆಕೊಟ್ಟು ಪ್ರೀತಿಯಿಂದ
ಹಿರಿಯರು ಕಿರಿಯರು ಎಲ್ಲಾ ಸೇರಿ ಒಂದೆ ಮನೆಯಲ್ಲಿ ವಾಸಿಸುವ ಸುಂದರ ಚೌಕಟ್ಟೆ ಸಂಸಾರ..-
ಹೆಂಡಿರು-ಮಕ್ಕಳು ಭಾರವೆಂದು
ಸಂಸಾರವನ್ನು ತೊರೆದು
ದೇಶಾಂತರ ಹೋದ
ಅಲೆಮಾರಿ ಗಂಡುಗಳ ಮಧ್ಯೆ
ತನ್ನ ಕರುಳ ಬಳ್ಳಿಗಾಗಿ
ಜೀವ ತೇಯುತ್ತ
ಕುಟುಂಬವನ್ನು ಹಿಡಿದುಕೊಂಡು
ಕುಳಿತ ಅದೆಷ್ಟೋ ಹೆಣ್ಣುಗಳು
ಆರಾಧನೆಗೆ ಅರ್ಹರು...-
ನಾಡಿನೆಡೆಯಿಂ ಕಾನನದೆಡೆಗೆನ್ನ ಕೂಗಿಹುದು ದೇಹ
ಸಂಸಾರ ಮೋಹಕ್ಕಿಲ್ಲದಂತಿದೆ ಅಂತ್ಯ, ನನ್ನೋಳಗಿನ
ಮಾಯಾಜಿಂಕೆಯ ಸೋಲಿಸಬೇಕಿದೆ!-
ಸಂಸಾರವೆಂಬ
ಕಟ್ಟಡವ ನಿತ್ಯವೂ
ಕಟ್ಟುತ್ತಲಿರಿ
ಭದ್ರವಿರಲಿ ತಳ
ಬಿರುಕು ಮುಚ್ಚುತ್ತಿರಿ.-
*೨೧೧೧/೨೧೧೧/೨೧೧೧/೨೧೧೧*
*ಮಾತ್ರೆಯಾಧಾರಿತ ಸ್ವರ ಕಾಫಿಯಾ ಗಜಲ್*
ಹೆತ್ತವರೆ ಮಕ್ಕಳಿಗೆ ಶಾಂತಿಯುತ ದೀಪಗಳು
ಮೌಲ್ಯಗಳೆ ಪೋಷಕರ ಜೀವನದ ದೀಪಗಳು
ಪಾಪಿಗಳ ಆರ್ಭಟದಿ ಸಂತಸವು ಸಾಯುತಿದೆ
ಪಾಲಕರು ತಾಳ್ಮೆಯನು ಬಿಂಬಿಸುವ ದೀಪಗಳು
ವಂಚಕರ ವರ್ತುಲವು ಆಕ್ರಮಣ ಮಾಡುತಿದೆ
ಬೋಧಕರು ಆಗಿರಲಿ ಬದ್ಧತೆಯ ದೀಪಗಳು
ಹಂತಕರು ತುಂಬಿಹರು ಸಭ್ಯತೆಯ ಅಂಗಳದಿ
ನಮ್ಮವರು ಬಾಳಿನಲಿ ತಂಬೆಲರ ದೀಪಗಳು
ಶೋಧಿಸಲು ಕಂಡಿರುವೆ ಭಾನುವನು ಬಂಧದಲಿ
ಮಲ್ಲಿಯನು ಕೊಲ್ಲುತಿವೆ ಜಾಗತಿಕ ದೀಪಗಳು
-
ಸಿಕ್ಕ ಸಿಕ್ಕವರನೆಲ್ಲ
ತೆಕ್ಕೆಗೆ ತೆಗೆದುಕೊಂಡು
ಮೈ ಮಾರಿಕೊಂಡು ತುತ್ತು
ತಿನ್ನುತ್ತಿದ್ದವಳಿಗೆ ಗೃಹಸ್ಥೆಯರು
ಹಿಡಿ ಹಿಡಿ ಶಪಿಸುತ್ತಿದ್ದರೆ,
ದಿನದ ಕೂಳಿಗೆ ಎರವಾದವನ
ಸಂಸಾರ ತಣ್ಣಗಿರಲೆಂದು
ನಿತ್ಯ ಮುತ್ತೈದೆಯೊಬ್ಬಳು
ಹರಸುತ್ತಿದ್ದಳಂತೆ.-