ನಸು ಬೆಳಕಿನ ಮುಂಜಾನೆಯ
ಮುಸುಕಿನಲ್ಲಿ ಮೈ ಮುರಿದು ಕಣ್ಣೊರಿಸಿ
ನನ್ನ quote ಓದುತ್ತಿರುವ ಎಲ್ಲರಿಗೂ
ಪ್ರೀತಿಯ ಶುಭೋದಯ...😍-
ಅಂಗೈಯೊಳಗಿನ
ಮುಂಜಾನೆಯ
ವಿಭಾಕರನ ಮೆರಗು
ಸಂಚಲಿಸುತಿದೆ ನವ
ಬೆರಗಿನೊಳಗೆ ಚೈತನ್ಯದ ಬುರಗು
ಕಾರಂಜಿಯಂತೆ
ಮನ ಮನೆಗಳಲಿರುವ
ಜಡತ್ವವ ತೊರೆದು
ಉಲ್ಲಾಸ ಉತ್ಸಾಹ ನೀಡುವ
ನಿಟ್ಟಿನಲಿ ಹೊಳೆಯುತ
ಅಂಗೈಯಲ್ಲೆ ಇಡೀ
ಬ್ರಹ್ಮಾಂಡವೇ ಸೃಷ್ಠಿಸುತಿದೆ..
ಇರುಳ ಮುಸುಕ ಸರಿಸಿ
ಬೆಳಕ ಕಿರಣ ಸುರಿದು
ತೇಜಸ್ಸನ್ನ ನೀಡುತಲೆ
ಶುಭೋದಯಕೆ ನವ
ಭರವಸೆಯನು ನೀಡುತಿದೆ....
ಅಭಿಜ್ಞಾ ಎಮ್ ಗೌಡ
-
ಹತ್ತು ರೂಪಾಯಿ
ಕಳಿತು ಅಂತ ಚಿಂತಿ ಮಾಡಬ್ಯಾಡ್ರಿ,
ಅದು ನೂರು ರೂಪಾಯಿ ಬರೋದನ್ನ
ಕಂಡು ನಾ ಇಲ್ಲಿ ಇರಾಕ ಯೋಗ್ಯ
ಅಲ್ಲ ಅಂತ ಹೋಗಿರ್ತದ...-
ಪ್ರಾತಃಕಾಲದ ಹಿತ ನುಡಿಯು
ಲೇಖನಿಯೊಂದಿಗೆ ಶಾಹಿಯ
ಜೊತೆಗೂಡಿ ಮುಂಜಾನೆಯ
ಸುಪ್ರಭಾತವ ಸಾರುತಿರಲು
ಅಂಬರದಿ ಮೇಘಗಳ ಉಗಿಬಂಡಿಯಾಟವೂ
ನನ್ನೀ ಕುಂಚದೊಳು ನರ್ತಿಸುತಿಹವು.!
ನೋಡಿಬನ್ನಿರೆಲ್ಲಾ ಎದ್ದೇಳಿ ಎದ್ದು
ನೇಸರನ ಆ ಹೊಂಬಣ್ಣದ ಬೆಳದಿಂಗಳಿಗೆ
ಮೈಯೊಡ್ಡಿ ಬಿಸಿಯೇರಿಸಿಕೊಳ್ಳಿರೆಲ್ಲ
ಮಾಯಾಲೋಕದಿಂದಾಚೆ ಬಂದು
ಈ ಸುಮಧುರ ಮುಸುಕು ಮುಂಜಾನೆ
ಸವಿಯಿರೇಳಿ ಓ ಮುಗ್ದ ಮನಗಳೆ..-
ನಾಗರಪಂಚಮಿ ಹಬ್ಬದ ಶುಭಾಶಯಗಳು🐍🐍
ಹಣವಿದ್ದರೆ ಗುಡಿಯಲಿರುವ ಮೂರ್ತಿಯಂತೆ ಪೂಜಿಸುವರು ನಿನ್ನ
ಅದೇ ನೀನು ಕಷ್ಟದಲ್ಲಿದ್ದರೆ ಮನೆಯ ಮೆಟ್ಟಲಿಗೆ ಹಾಕಿದ ಕಲ್ಲಿನಂತೆ ತುಳಿಯುವರು ನಿನ್ನ...-
ಎಲ್ಲರ ಬದುಕಿನಲ್ಲೂ 'ಸಂತೃಪ್ತಸುಖ'ದ ದಿನಗಳು ಬಂದೇ ಬರುತ್ತದೆ
ಹಾಗೆ 'ಸಂಕಟದ ದುಃಖ'ದ ದಿನಗಳೂ ಕೂಡ.-
ಈ
ಬಿಕಾರಿಯಾ ಪ್ರೇಮವನ್ನೇ
ಮೆಚ್ಚಿ
ಬಂದ ನಿನಗೆ
ಸುವಾಸನೆ ಬೀರುವ ಮಲ್ಲಿಗೆಯನ್ನ
ಬಿಟ್ಟು ಇನ್ನೇನೂ
ಉಡುಗೊರೆ ನೀಡುವುದೇಳು..-
ಮನೆಯಲ್ಲಿನ ಮನಸ್ತಾಪ, ಕಳುವಾದ ಹಣ, ಮನದಲ್ಲಿನ ದುಃಖ, ವಂಚನೆ ಹಾಗೂ ಅಪಮಾನದ ನೋವು ಇತರರಿಗೆ ತಿಳಿಸದಿರುವವನೇ ಜಾಣ.
-
ಆಸೆಗಳೆಂದರೆ
ರಥಕ್ಕೆ ಹೂಡಿದ ಕುದುರೆಗಳಂತೆ
ಲಗಾಮ್ ಕೈಯೊಳಗಿದ್ದರೂ
ಹಿಡಿತ ಮಾತ್ರ ಮನಸ್ಸಿಗೆ ಸಂಬಂಧಿಸಿದ್ದು!-
ಮುಂಜಾನೆಯ ಮಂಜಿನ್ಹನಿಗಳ
ಹೂರಣ
ಅವನಿಯೊಳಗೆ ಹಸಿಲೆಗಳಿಗೊಂದು
ಮುತ್ತಿನ ತೋರಣ
ನೋಡುವ ಕಂಗಳಿಗಂತು ಸೆಳೆಯುವ
ಈ ಇಬ್ಬನಿಯ ರಿಂಗಣ!-