ಕಿವಿಗೆ ಬಿದ್ದ ಮಾತಿನ ಅರ್ಥವನ್ನೆಗೆ ಹುಡುಕಲಿ
ಮನದೊಳಗೆ ಹುಟ್ಟಿದ ಮೌನವನ್ನೇ
ಅರಿಯದೆ ಕುಳಿತಿರುವಾಗ
ನಾನು-
ದಿನವೂ ಹುಟ್ಟುವ ಈ ಇರುಳನ್ನೇಕೆ ಶಪಿಸಲಿ
ಗಾಡನಿದ್ರೆಯಲ್ಲಿ ಹುಟ್ಟಿ ಸಾಯುವ
ಕನಸುಗಳ
ಅಂತ್ಯಕ್ರಿಯೆದ್ದೆ ಚಿಂತೆ
ನನಗೆ-
ಮತ್ತದೇ ಭಾವಗಳಿಂದ ಜೀವ
ಬೆದರಿಕೆ ಇದೆ, ಈಗೀಗ
ಬದುಕಿಸಿಕೊಳ್ಳುವ ಪ್ರಯತ್ನವೂ ನೆಡೆಯುತ್ತಿಲ್ಲ
ನನ್ನಿಂದ-
ನಿಶ್ಯಬ್ದ...
ಅಸಹನೀಯ ಮೌನ...
ಬಹುಷಃ...
ಭಾವಗಳೆಲ್ಲವು...
ಮಸಣದ ಹಾದಿ ಹಿಡಿದಿರಬೇಕೇನೋ
-
ಸೋತೆನೆಂದು
ಜಗದ ಮಾತಿಗೆ ದುಃಖಿಸುತ್ತಾ ಕುಂತರೆ
ಹೆತ್ತವರ ಜವಾಬ್ದಾರಿ
ಪೆಟ್ಟಿಗೆ
ಹೊರುವವರಾರಯ್ಯ..?-
ಮಾಸದ ಗಾಯಗಳ ಲೆಕ್ಕಾಚಾರದ ಉತ್ತರಕ್ಕೆ
ಕಾಯೋದು ಬಿಟ್ಟಿದ್ದೀನಿ
ಸುಮ್ಮನೆ ಖುಷಿ ಕೊಡುವ ಯಾರದ್ದೋ ಕಳವಳಕ್ಕೆ
ಕಾಯೋದು ಬಿಟ್ಟಿದ್ದೀನಿ
ಹೀಗೆ ಸಿಕ್ಕು ಹಾಗೆ ಜಾರಿಕೊಂಡವರ ಭೇಟಿಯ ಅರ್ಥಗಳಿಗೆ
ಕಾಯೋದು ಬಿಟ್ಟಿದ್ದೀನಿ
ಒಂದಿಷ್ಟು ನೆನಪುಗಳನ್ನಡವಿಟ್ಟು ನಾಪತ್ತೆಯಾದ ನೆಮ್ಮದಿಗಾಗಿ
ಕಾಯೋದು ಬಿಟ್ಟಿದ್ದೀನಿ
ಮನಸ್ಸಿನ ಮೂಲೆಯಲ್ಲಿ ಬಾಡಿಗೆಗಿದ್ದು ಸಿಂಗರಿಸಿ ಹೊರಟ ಭಾವನಗಳಿಗೆ
ಕಾಯೋದು ಬಿಟ್ಟಿದ್ದೀನಿ-
ಇನ್ಯಾರನ್ನೋ ದ್ವೇಷಿಸುವುದರಲ್ಲೇನಿದೆ
ನಾನೇ ಎಡವಿ ಬಿದ್ದಿರುವಾಗ
ಬದುಕಲ್ಲಿ-
Maturity is realising
ಎಲ್ಲ ಸ್ವಲ್ಪ ದಿನ ಅಷ್ಟೇ, ಎಲ್ಲರು ಸ್ವಲ್ಪದಿನವಷ್ಟೇ...-