ನನ್ನ ಕಣ್ಣ ಮುಂದೆ
ನೀನಿರದಿದ್ದರು
ಅಂತರಾಳದಲ್ಲಿ
ಆವರಿಸಿರುವೆ..
ವಾಸ್ತವದ
ಬದುಕಿಗೆ ನೀನು
ದೂರವಿದ್ದರು
ನನ್ನ ಕಲ್ಪನೆಗೆ
ಸವಿಗನಸಾಗಿರುವೆ..-
Social Media ದಲ್ಲಿ ಒಂದು ಚಂದದ ಫೋಟೋ upload ಮಾಡಿದರೆ ತುಂಬಾ Like Comment Share ಗಳ ಮಹಾಪೂರವೇ ಹರಿದು ಬರುತ್ತದೆ
ಅದೇ ಅರ್ಥಪೂರ್ಣವಾದ ಬರಹವನ್ನು upload ಮಾಡಿದರೆ ಅಷ್ಟೊಂದು like Comment
Share ಗಳು ಬರುವುದಿಲ್ಲ.....
ಅಂದಚೆಂದಕೆ ಬೆಲೆ ಕೊಡುವವರೇ ಎಲ್ಲಾ
ಕಲೆಗೆ ಬೆಲೆ ಕೊಡುವವರೇ ಇಲ್ಲ
-
ನನ್ನಡೆಗೆ ಕೈ ತೋರುವುದೇ
ನಿನ್ನ ಕಾಯಕವಾಗಿಬಿಟ್ಟಾಗ,
ನನ್ನ ಮುಗುಳ್ನಗುವೂ ನಿನಗೆ
ಹೀಯಾಳಿಸಿದಂತೆ ಭಾಸವಾಗುತ್ತದೆ..-
ಸೂರ್ಯನಿಗೆ ಶಾಖ ಕೊಡುವುದುಂಟೇ?
ಚಂದ್ರನಿಗೆ ತಂಪು ನೀಡುವುದುಂಟೇ?
ಪ್ರಕೃತಿಗೆ ಪ್ರೀತಿಯ ಪಾಠ ಕಲಿಸುವುದುಂಟೇ?
..........................................................
ಸಾಗರದ ಅಲೆಗಳ ತಡೆ ಸಾಧ್ಯವೇ?
ಬಿರುಗಾಳಿಗೆ ಬಾಣ ತಾಕಲು ಸಾಧ್ಯವೇ?
ಅನ್ಯರ ಮನವನರಿಯಲು ಸಾಧ್ಯವೇ?
...................................................
ಅಸಾಧ್ಯ, ಅಸಾಧ್ಯ, ಅಸಾಧ್ಯವೇ ಸರಿ.
"ಸೃಷ್ಟಿಯ ಸೆಲೆಗಳಲ್ಲಿ ಸಿಲುಕಿದ ಮಾನವರು,
ತಾವು ಬೇಕಾಗಿರುವುದನೆಲ್ಲ ಮಾಡುತ್ತೇನೆಂದರೆ
ಅದು ಅವರ ಮೂರ್ಖತನವೇ ಸರಿ"-
ದೇವರೇ ಸೃಷ್ಟಿ
ಮಾಡಿ ಹೇಳಿದ್ದಾನೆ..
ನೀನು ಹೆಣ್ಣು, ಹೆಣ್ಣೆಂದು..
ನಿನಗೆ ನೋವು
ಸಹಿಸುವ ಶಕ್ತಿ,ತಾಳ್ಮೆ
ಕೊಟ್ಟಿದ್ದೇನೆ
ಹುಟ್ಟಿದ ಕ್ಷಣದಂದು..
ಕಾಮುಕರು ಹೆಣ್ಣನ್ನು
ಮುಕ್ಕಿ ತಿನ್ನುವಾಗ
ಎಲ್ಲಿ ಹೋದೆ ದೇವರೇ..
ಹೆಣ್ಣಿಗಾಗುವ ಯಾತನೆ
ನಿನಗದರ ಅರಿವು
ಇದಿಯೇ ನಿನಗಿಂದು..-
🌸ವಾಸ್ತವ 🌸
ನಿಸರ್ಗದ ನಿಯಮಗಳನ್ನು
ನಾವು ನಿರ್ಲಕ್ಷಿಸಿದರೆ,
ನಿಸರ್ಗ ನಮ್ಮನ್ನು ನಿರಾಕರಿಸಿ
ನೀತಿಯ ಪಾಠ ಕಲಿಸುವುದು.
ಹಾಗೆಯೇ,
ಬದುಕಿನ ಬಂಧಗಳನ್ನು
ನಾವು ಬೇಡವೆಂದರೆ,
ಬದುಕು ನಮ್ಮನ್ನು ಬಾಗಿಸಿ
ಭೋಗದ ಕರ್ಮಗಳ ತಿಳಿಸುವುದು.-
ಈ ಪ್ರಪಂಚದಲ್ಲಿ ಎಲ್ಲವನ್ನು ಬಲ್ಲವನು,ಎಲ್ಲವೂ ಇರುವವನು ಯಾರೂ ಇಲ್ಲ,ಅಪೂರ್ಣನಾಗಿದ್ದರು ಪರಿಪೂರ್ಣನೆಂದು ಬೀಗುವವನಷ್ಟೇ ಈ ಮನುಜ
-
ನನ್ನನ್ನು ಇಷ್ಟ ಪಡುವವರ ಖುಷಿಯೇ ನನ್ನ ಖುಷಿ ಹಾಗೆ ಹೇಳಿ
ನನ್ನ ದ್ವೇಷಿಸುವವರನ್ನು ಕೂಡ ಪ್ರೀತಿಸುವಷ್ಟು ಒಳ್ಳೆಯವಳು ನಾ ಅಲ್ವೇ ಅಲ್ಲ 🤭-