Arun Alva   (Arun)
543 Followers · 422 Following

ಪ್ರಕೃತಿಯ ಆರಾಧಕ
ಆಂತರಿಕ ಅನ್ವೇಷಕ
ಸರ್ವಂ ಶ್ರೀಕೃಷ್ಣಾರ್ಪಣಮಸ್ತು..
Joined 30 October 2018


ಪ್ರಕೃತಿಯ ಆರಾಧಕ
ಆಂತರಿಕ ಅನ್ವೇಷಕ
ಸರ್ವಂ ಶ್ರೀಕೃಷ್ಣಾರ್ಪಣಮಸ್ತು..
Joined 30 October 2018
2 AUG AT 20:59

ಕಲ್ಲಲ್ಲಿ ಕಂಡಾಗ ವರಾಹ ಎಂದು ಹೆಸರಿಸಿ ಪೂಜಿಸುತ್ತಾರೆ,
ಕಾಡಲ್ಲಿ ಕಂಡಾಗ ಹಂದಿ ಎಂದು ಹೆಸರಿಸಿ ಭುಜಿಸುತ್ತಾರೆ..!
ತುಂಬಾ ವಿಚಿತ್ರ ಈ ಮನುಷ್ಯರು..

-


5 JUL AT 9:31

ಹಸಿವೇ ಆಗದ ವಿಗ್ರಹಕ್ಕೆ ಮೃಷ್ಟಾನ್ನ ನೀಡುವರು,
ಹಸಿದ ಜೀವಿಗಳಿಗೆ ಒಂದು ತುತ್ತನ್ನೂ ನೀಡರು..!

-


19 JUN AT 14:06

ದೇಶದಲ್ಲಿ ಯುದ್ಧಗಳು ನಿಲ್ಲಬೇಕು..
ಅದಕ್ಕೂ ಮೊದಲು,
ಮನೆಗಳಲ್ಲಿ ಯುದ್ಧಗಳು ನಿಲ್ಲಬೇಕು..
ಅದಕ್ಕೂ ಮೊದಲು,
ಮನಗಳಲ್ಲಿ ಯುದ್ಧಗಳು ನಿಲ್ಲಬೇಕು..!

-


15 JUN AT 19:05

ಪರಿಚಿತ: ಜಾತಿ ಪದ್ಧತಿ ನಿರ್ಮೂಲನೆಗೆ ಸಂಘಟನೆ ಕಟ್ಟುತ್ತಿದ್ದೇವೆ..
ನಾನು: ನಾನೂ ಸೇರಲೇ..?
ಪರಿಚಿತ: ಇಲ್ಲ, ಕೇವಲ ಒಂದು ಜಾತಿಯ ಜನರಿಗೆ ಮಾತ್ರ ಅವಕಾಶ..!

-


31 MAY AT 11:58

ಸತ್ತವರ ಆತ್ಮಕ್ಕೆ ಶಾಂತಿ ಕೋರಬೇಕಂತೆ ಗಾಲಿಬ್,
ಶಾಂತಿಯಿಂದ ಬದುಕಲು ಬಿಟ್ಟಿದ್ದರೆ ಸಾಕಿತ್ತು..!

-


26 MAY AT 20:50

ಸಜ್ಜನರೂ ಯಾರಿಗೂ ಬೇಕಿಲ್ಲ,
ದುರ್ಜನರೂ ಯಾರಿಗೂ ಬೇಕಿಲ್ಲ..
ಬಹುತೇಕರಿಗೆ ಬೇಕಿರುವುದು ಎಡಬಿಡಂಗಿಗಳೇ..!

-


15 MAR AT 22:20

ಮೇಲೇರುವುದನ್ನು ಕಲಿಯಬೇಕು ಗಾಲಿಬ್,
ಜಾತಿ,ಕುಲ,ಮತ,ಕಪ್ಪು-ಬಿಳುಪುಗಳನ್ನು ಕೆಳಗೆಯೇ ಬಿಟ್ಟು..

-


16 OCT 2024 AT 21:17

ಪರಿಚಿತರೊಬ್ಬರು ಕೇಳಿದರು "ಏನೆಲ್ಲಾ ಆಸ್ತಿ ಮಾಡಿದ್ದೀಯ?",
ನಾ ಹೇಳಿದೆ "ಆರೋಗ್ಯಕರ ದೇಹ, ಕೇಡು ಬಯಸದ ಮನಸ್ಸು, ಪ್ರೀತಿ ತುಂಬಿದ ಹೃದಯ ಮತ್ತು ಹೃದಯದಲ್ಲಿ ನನ್ನನ್ನು ತುಂಬಿಕೊಂಡ ಕೆಲವು ಜೀವಗಳು"..!

-


8 AUG 2024 AT 16:33

ಹೊಗೆಯಾಡುತ್ತಿದ್ದ ಸಂಬಂಧಗಳನ್ನು ಸುಟ್ಟು ಭಸ್ಮವಾಗಿಸಿದ್ದೇನೆ ಗಾಲಿಬ್,
ಹೊಗೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅರಿತು..

-


31 JUL 2024 AT 15:01

ನಮ್ಮಿಂದಲೇ ಜಗತ್ತು ನಡೆಯುತ್ತಿದೆ ಎಂದು ಬೀಗುವ ಮನುಜರಿದ್ದಾರೆ ಗಾಲಿಬ್,
ಅವರಿಗೇನು ಗೊತ್ತು ಮನುಷ್ಯರಿದ್ದರೂ ಇರದಿದ್ದರೂ
ಬೀಸುವ ಗಾಳಿ, ಹರಿಯುವ ನದಿ, ಬೆಳಗುವ ಸೂರ್ಯ, ತಿರುಗುವ ಭೂಮಿ.. ಎಂದಿನಂತೆಯೇ ಇರುತ್ತವೆ ಎಂದು..!

-


Fetching Arun Alva Quotes