ಟಂಕಾ
********
ಪಚ್ಚೆ ಹಸಿರು
ಪ್ರಕೃತಿ ಒಡಲಲ್ಲಿ
ವಸಂತಲೀಲೆ.
ಮತ್ತೆ ಕೋಗಿಲೆಗಾನ
ಅದೇ ಮಾಮರ ಮೇಲೆ.
-
ಮುಕ್ತಾಯವೆಂದರೆ ಮುಕ್ತಾಯವಲ್ಲ,
ಹೊಸದೊಂದು ಹೊಸತನದ ಆರಂಭ,
ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ,
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ,
ಎಲ್ಲರ ಬಾಳ ಅಂಧಕಾರ ಕಳೆಯಲಿ,
ನವ ವಸಂತವು ಸರ್ವರ ಬಾಳು ಬೆಳಗಲಿ...
-
ಒಂದು ವಸಂತದ ಪಯಣ ಈ yq ಬಳಗದೊಂದಿಗೆ.
ನಾ ನನ್ನ ಜೀವನದಲ್ಲಿ ಕಳೆದ ಅತೀ ಸಿಹಿ ಕ್ಷಣಗಳಲ್ಲಿ ಈ ಬಳಗದ ಪಾಲು ಬಹಳಷ್ಟಿದೆ. ಒಂದಷ್ಟು ಒಳ್ಳೆಯ ಜನರ ಪ್ರೀತಿ, ವಿಶ್ವಾಸ, ಹಾರೈಕೆ ನೀಡಿದ ಈ ಬಳಗ ನನ್ನ ಬದುಕಿನ ಒಂದು ಭಾಗ...ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಪ್ರೋತ್ಸಾಹಿಸಿ ಗೌರವ ನೀಡುವ ಎಲ್ಲ ಮನಸ್ಸುಗಳಿಗು ನನ್ನ ಮನದಾಳದ ಧನ್ಯವಾದಗಳು😊. ಹೀಗೆಯೇ ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆ ಎಂದಿಗೂ ನನ್ನ ಮೇಲಿರಲಿ. ನಿಮ್ಮೆಲ್ಲರ ಪ್ರೀತಿಗೆ ನಾ ಆಭಾರಿಯಾಗಿರುವೆ☺...-
ತಂಕಾ....
ಕಾಣುತಿರುವೆ
ಸೃಷ್ಟಿಯ ಸೊಬಗನು
ನಿನ್ನಲ್ಲಿ ; ಕಾಲ
ನೋಡಿ ಕೂಗುವ ಪಿಕ
ಹುಡುಕಲಾರೆ ನಾನು..
-
ಚೈತ್ರದ ಕೋಗಿಲೆಗೆ
ಮತ್ತೆ ಹಾಡುವ
ಮನಸ್ಸಾಗಿದೆ,
ವಸಂತನಾಗಮನಕ್ಕೆ
ಮಾಮರದ ಚಿಗುರಿಗೆ
ತಲೆ ಮರೆಸಿಕೊಂಡ ಭಾವ
ಚಿಲುಮೆಯಂತೆ ಚಿಮ್ಮಿದೆ..-
ಹ್ಯಾಪಿ ಬರ್ತ್ಡೇ ಬಾಸೂ...
🌼🌹🎂🌹🌼
ಬದುಕು ಎಂದಮೇಲೆ
ನೋವು ಇದ್ದದ್ದೇ
ಎಲ್ಲಾ ನೋವ ನುಂಗಿ
ನಮ್ಮ ಗುರುತರ
ನಗುವುದನ್ನು
ಕಲಿತುಬಿಡಿ.-
ಶುಭ್ರತನದಿ
ಕಂಗೊಳಿಸುತಿಹಳು
ಮೈಸಿರಿ ತುಂಬಿ
ನಿತ್ಯ ಜವ್ವನೆಯಂತೆ
ನಮ್ಮವ್ವ ವಸುಂಧರಾ.-
Life is full of
ಬೇಜಾರಿನ ಮೋಡ,
waiting for
ನಿನ್ನೊಲವಿನ ಮಳೆ,
ನೀನೆದುರು ಬಂದರೆ,
ಹಸಿರಾದಂತೆ ನನ್ಮನದ ಇಳೆ,
ವಸಂತ ಬರೆದನಂತೆ
ಒಲವಿನ ಓಲೆ,
ನಮ್ಮ ಅದೆ ಹಳೆ
gramaphone ಗಾನ
ಕೇಳಿದಮೇಲೆ.-