QUOTES ON #ರಾಧೆ

#ರಾಧೆ quotes

Trending | Latest
29 JAN 2020 AT 21:56

ನಿನ್ನ ಧ್ಯಾನದಲ್ಲೇ ಮಗ್ನಳಾಗಿ ಹೋಗಿರುವೆ
ಓ ವಿಭೋ
ವಂಶಿಯೊಂದಿಗೆ ಒಂದಾಗಿ ನಿನ್ನದೆ
ನೆನಪಿನಂಗಳದಿ ಕುಳಿತು ನುಡಿಸುತಿರುವೆ
ಓ ನೀಲಮೇಘ ಶ್ಯಾಮನೆ.!
ನನ್ನ ನಾನೇ ಮರೆತು ಭಾವಪರವಶಳಾಗಿರುವೆ
ಎಲ್ಲಿರುವ ನಂದಗೋಕುಲದ
ಮೋಹನ ಮುರುಳಿಯೆ.!
ಯಮುನಾ ನದಿ ತಟದೊಳು ಏಕಾಂಗಿಯಾಗಿ
ಕಾಯುತಿರುವೆ ನಿನ್ನೊಲುಮೆ ಆರಾಧಿಸುವಿಕೆಯ
ಆಲಾಪದ ಆನಂದವ ಸವಿಯಲು
ಓ ಗೋವಿಂದ ಮುಕುಂದನೆ.!

-



ನವಿರೆಳೆಯ ಮೇಲೆ
ನವೋದಿತ ಕಾವ್ಯ
ಈ ಅನಾಥ ಭಾವನೆಗಳೆಗೆ
ನಿವೇದಿಸುತಿದೆ
ನಿನ್ನ ಕೊಳಲ ರಿಂಗಣದ
ಮನೋಜ್ಞ ರಾಗ

ಪುಟಿದೇಳುತಿಹ ಸುಂದರ
ಸುಶ್ಯಾವ್ಯದಲಿ ಮರೆತಿಹ
ಮನದ ದಿವ್ಯಾ
ಭಕ್ತಿಯ ಭಾವ

ನಿನ್ನ ಸ್ಮರಿಸಿಹುದು
ರಾಧೆಯಂತೆ ನಂದನ
ಈ ನಲುಮೆಯ
ಅನಘ್ನ೯ ಸ್ಮೃತಿಯಲಿ
ಮಿಂದಿಹ ಭಾವಕೆ
ಬದುಕು ನೀ ಕೃಷ್ಣ...
✍Thilaka kulal







-


4 JUN 2020 AT 19:52

ರಾಧೆಯಂತವಳೆ ಶ್ರೀಕೃಷ್ಣನಿಗೆ ಸಿಗಲಿಲ್ಲ
ಇನ್ನು ಸೀತೆಯಂತೊಳು ಶ್ರೀಕೃಷ್ಣನಿಗೆ ಸಿಗುವಳೆ...

-


7 SEP 2020 AT 23:10

ಕೊರಳ ಇನಿದನಿ ಇಂದೇಕೆ ನಡುಗಿದೆಯೆಂದು ತಿಳಿಯದೆ
ನೆರಳ ನೋಡಿಯೇ ಎನಗೆ ಮಾಧವ ನೀನೇ ಎಂದರಿವಾಗದೆ
ಬೆರಳ ಹಿಡಿದು ನಡೆಸಬಾರದೆ,ಬೃಂದಾವನದಲ್ಲಿರಬಾರದೆ

-


13 MAY 2019 AT 2:26

ನೀನಿರದ ಬೃಂದಾವನದಲಿ
ಈಗ ಒಬ್ಬಂಟಿ ರಾಧೆ ನಾನು
ಕೊಳಲನಾದಕೆ ಕೊರಳಾಗಿ
ಪರಿತಪಿಸೊ ಮೂಗಿ ನಾನು

-



ಕನಸುಗಳ ಲತಾಕುಂಜದಲಿ
ಬಯಕೆಗಳ ತೋರಣ
ಹೃದಯದ ಭಾವನೆಗಳ
ಶೃಂಗರಿಸಿಹುದು ತನುಮನ

ಮಧುರ ಪ್ರೀತಿಯ ತಟದಲ್ಲಿ
ನಮ್ಮಿಬ್ಬರ ಸಮಾಗಮ
ಹಿಂದಿರುವ ದಾರಿಗೂ
ಮುಂದಿರುವ ಬಾಳಿಗೂ
ನೀನೇ ಎಂದಿಹುದು ನಂದನ

ಬಾಳ ಜೋಕಾಲಿಗೆ
ಜೊತೆಯಾಗಿ ಈ ಕ್ಷಣ
ಹೃದಯದ ಗೋಪುರದಲಿ
ನೆಲೆಸಿರುವ ಗೋಪಾಲನ
ಹೃದ್ಯವಾಗಿ ಆಲಂಗಿಸಿದೆ ಮನ
✍Thilaka kulal














-



ಯಮುನೆಯ ತೀರದಲ್ಲೇ
ನಡೆದಿತ್ತು ಅವರ ವಿವಾಹ..
ಉಸಿರುಸಿರ ಭಾವದಲಿ ,
ಮೌನದ ಭಾಷೆಯಲಿ ,
ಕಂಗಳ ನೋಟದಲಿ ,
ಕೋಪದ ಸಿಡಿಮಿಡಿಯಲೂ
ಒಂದಾಗಿತ್ತು ಮನಸ್ಸು
ಪ್ರೇಮದ ಪರಿಯಲಿ..
ದೂರ ಸರಿದು ಮತ್ತೆಷ್ಟೋ
ವಿವಾಹಗಳು ಮಾಧವನ
ಮನವನ್ನಾವರಿಸಿದ್ದರೂ ಅವನು
ಮಾತ್ರ ಹಾಗೆ ಉಳಿದಿದ್ದ
' ರಾಧಾಕೃಷ್ಣ ' ನಾಗಿ..

-



ಬರುವುದಾದರೆ
ಬಂದು ಬಿಡು
ಕೃಷ್ಣ
ತಡ ಮಾಡದೆ...
ನಿನಗಾಗಿಯೇ
ಕಾದಿಹಳು
ನಮ್ಮನೆಯ
ಪುಟ್ಟ ರಾಧೆ...

-


19 JUN 2019 AT 8:48

ಕೊಳಲನಾದವೂ ಝೇಂಕರಿಸುತಿದೆ ಮನದ ಮಂದಿರದ ಅಂಗಳವೆಲ್ಲಾ;
ನಾದಸ್ವರದ ಸೊಗಸಾದ ಓಂಕಾರಕೆ ತಲೆದೂಗಿದೆ ಹೃದಯದರಮನೆಯೆಲ್ಲಾ!

-



ಕೃಷ್ಣನ ಕೊಳಲ ನಾದಕೆ
ಸೋತಲೇ ರಾಧೆ..
ಅವನೊಲವ ಪುಷ್ಪದಲಿ
ಕುಸುಮವಾದಲೇ ರಾಧೆ..

ಮುರಾರಿಯ ತುಂಟಾಟಕೆ
ಸೋತಿತೆ ರಾಧಾಳ ಮನವು..
ಬೃಂದಾವನದ ಸೊಬಗಿನ ಪ್ರೀತಿಗೆ
ಅರಳಿತು ರಾಧೆಯ ಒಲವು..

ಮಾಧವನ ಸಿಹಿನುಡಿಗಳಿಗೆ
ಮಧುರಗೊಂಡಿತು ರಾಧೆಯ ತನು
ರಂಗನ ಕೊಳಲ ಮಾಧುರ್ಯಕೆ
ನಲಿದಾಡಿತು ರಾಧೆಯ ಹೃದಯ..

ಹುಸಿಮುನಿಸು ನಸುಗಂಪ
ಒಲವಿನಲಿ ಹೆಜ್ಜೆ ಹಾಕಿರಲು
ಬೆಳದಿಂಗಳ ಚಂದ್ರಮನು
ಹೂನಗೆಯ ಬೀರಿದಂತೆ
ಭಾಸವಾಗಿದೆ ಈ ಪರಿಯ
ಅನುರಾಗದ ಮೋಹವ ಕಂಡು..
✍️ನಯನ ಭಟ್.

-