QUOTES ON #ರಾಜ್ಯೋತ್ಸವ

#ರಾಜ್ಯೋತ್ಸವ quotes

Trending | Latest

ಶೂರರ ನಾಡು ಶಾಂತಿಯ ಬೀಡು
ಕಾವೇರಿಯ ತವರು ಕೃಷ್ಣೆಯ ಹರಿವು
ಸೌಹಾರ್ದತೆಯ ನೆಲೆ ಶ್ರೀಗಂಧದ ಇಳೆ
ಸೌಂದರ್ಯ ಸಂಕೇತ ಸಹ್ಯಾದ್ರಿ ಪರ್ವತ

ರನ್ನ ಪೊನ್ನ ಜನ್ನ ರ ಹಳೆಗನ್ನಡ
ಮನೋರಮೆ ಮುದ್ದಣ್ಣರ ಸರಸ ಕನ್ನಡ
ಕಾಳಿದಾಸನ ರತ್ನಸಿರಿ ಕಾವ್ಯ ಕನ್ನಡ
ಬಸವಣ್ಣ ಅಕ್ಕರ ವಚನ ಗೀತೆ ಕನ್ನಡ

ಭವ್ಯ ನಾಡು ಬೆಳಕ ಚೆಲ್ಲಿದ ಸಿರಿಯು
ಹಸಿರ ಮೈ ಹೊತ್ತ ಭೂರಮೆ ಕರುನಾಡು
ಮಲ್ಲೆ ನಾಡಿನ ಮದುಮಗಳ ತವರು
ರಾಷ್ಟ್ರಕವಿಯ ಕನ್ನಡಮ್ಮನ ಮಡಿಲು

ಗಂಡ ಭೇರುಂಡನ ಗಾಂಭೀರ್ಯದ ನಡೆ
ಯುಗಯುಗಗಳ ಗತವೈಭವದ ಕುಡಿ
ಕಿಷ್ಕಿಂದೆಯ ನಾಡಿದು ಹನುಮನ ಹುಟ್ಟೂರು
ಭುವನೇಶ್ವರಿ ತಾಯಿ ಕಾಯುವ ಭೂಸ್ವರ್ಗವು

ಕಂಪಿಸುತಿರಲಿ ತನು ಮನದಲ್ಲೂ ಕನ್ನಡ
ಝೆಂಕರಿಸುತಿರಲಿ ಉಸಿರುಸಿರಲ್ಲೂ ಕನ್ನಡ
ಚಿತ್ತದ ಚಿಂತನೆಯೊಳಗು ಮಾರ್ಧನಿಸಲಿ ಕನ್ನಡ
ಕನ್ನಡಮ್ಮನ ನುಡಿಯಿದು ಚಿರಕಾಲ ಕನ್ನಡ

-✍🏻 ಪ್ರಿಯಾಂಕಾ ಬಿಳ್ಳೂರ.


-



" ಕನ್ನಡ ಕಂಪು "

ಎಲ್ಲೆಲ್ಲೂ ಪಸರಿಸಲಿ ಕನ್ನಡದ ಕಂಪು ,
ಹೊಂದಿರುವುದು ಭಾವುಟ ಹಳದಿ ಕೆಂಪು ,
ಕನ್ನಡ ಪದಗಳು ನುಡಿಯಲು ಇಂಪು ,
ಗಂಧದ ಮರಗಳ ಸುಗಂಧ ತಂಪು ,
ನಮ್ಮ ರಾಷ್ಟ್ರಕವಿ ಕುವೆಂಪು ,
ಬರೆದ ನಾಡಗೀತೆ ಹಾಡಲು ಇಂಪು ,
ಒಂದಾಗಿರಲಿ 6 ಕೋಟಿ ಕನ್ನಡಿಗರ ಗುಂಪು,
ಕನ್ನಡ ವೆಂದರ ತಂಪು, ಕಂಪು, ಇಂಪು......!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-


1 NOV 2021 AT 17:39

ಕನ್ನಡೋತ್ಸವ



ಆಡಿ ಬರಹದಲ್ಲಿ ಓದಿರಿ👇👇

-


1 NOV 2019 AT 8:25

ಕನ್ನಡವದೆಂತೂ ಕಾರಂಜಿ
ಕನ್ನುಡಿದರೆನಿತಿನಿತು ಪ್ರಾಣಾಪರಂಜಿ
ಕವಿಪಂಪ ಕುವೆಂಪರ
ಕಾವ್ಯ ವರ ನೇರ ಗಿರಿಶಿಖರ
ಕರುನಾಡ ಆಸ್ತಿಯೆಂಬುವರ
ಕನ್ನುಡಿಯೊಳ್ ತೊದಲಗೀತ ರಚನಾಕಾರ
ಕತ್ತಲೆಂಬಾ ಜಾತಿ ಕಿತ್ತಿ
ಕಿರಣವಾಗಿಸಿಹರಲ್ಲಾ ಬಸವೇಶ್ವರ
ಕಲಾಕ್ಷೇತ್ರದ ರಾಜಕುಮಾರ
ಕರುನಾಡ ಸಿಂಹವರ..!
ಕರಿಕೇಸರಿಗಳ ಪುಣ್ಯಾಗರ,
ಕೆಚ್ಚೆದೆಯರೆಂಬ ಕದಂಬರಲವರ
ಕರುಣಾಸಾಗರ, ಪ್ರೇರಣಾಪ್ರಖರ
ಕರುನಾಡ ಸಡಗರವಿದು
ಕನ್ನುಡಿದಷ್ಟೂ ವಿಶಾಲವ್ಯಾಪ್ತಿನ್ನುಡಿವುದು
ಕನ್ನಡವ ಕನ್ನುಡಿಸು ಕನ್ನಡದ ಕವಿಪುಂಗ
ಕನ್ನಡವ ಕುಣಿದಾಡಿಸು ಕನ್ನಡದ ಕಲಾತ್ಮರಂಗ
ಕಸ್ತೂರಿಯ ಕಂಪರಗಲಿ ಕಾಮನ ಬಿಲ್ಲೇರಲಿ
ಕನ್ನಡಿಯ ಕಾವ್ಯ ತರಂಗ..!!

-



ಗರ್ಭದಲ್ಲಿ ಇರೊವಾಗ್ಲೆ ಗರ್ವದಿಂದ
ಕನ್ನಡದ ಭಾವ ತುಂಬಿದವಳು ಅವ್ವ.

-



ಹೆತ್ತ ಕಂದನ ಮನದಣಿಯೇ ಮುದ್ದಿಸಿ
ವರ್ಣಿಸಿದಳವ್ವ ಮನಸಾರೆ ಕನ್ನಡದಲ್ಲಿ
ಮುದ್ದಾದ ಕಂದನ ಕೂಸುಮರಿಯಾಗಿಸಿ
ಆಡಿಸಿ ಹೊಗಳಿದನಪ್ಪ ಹಿಗ್ಗಿ ಕನ್ನಡದಲ್ಲಿ.

-



ನನ್ಮನದಲ್ಲಿ ನಿತ್ಯ ಮಿಡಿಯುವ ಈ ಸಾಲುಗಳು
ಚೆಂದದ ಪದಗಳಲ್ಲಿ ಕಟ್ಟಿಹ ಕನ್ನಡದಾಳುಗಳು

ಮನುಷ್ಯ ಜಾತಿ ತಾನೊಂದೆ ವಲಂ ಎಂದರು
ಅರಿವೇ ಗುರು ನುಡಿ ಜೋತಿರ್ಲಿಂಗಗಳೆಂದರು
ಮಾನವ ಜನ್ಮ ದೊಡ್ಡದು, ಹಾನಿ ಬೇಡವೆಂದರು
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದರು

ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ,
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪವೆಂದರು
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡೆಂದರು

ಸದ್ವಿಕಾಸದ ತಾಯಿಗೆ ನಿತ್ಯೋತ್ಸವ ಎಂದರು
ವಿಶ್ವಭಾರತಿಗೆ ಕನ್ನಡದಾರುತಿ ಮಾಡಿದರು
ಸರ್ವ ಜನಾಂಗದ ಶಾಂತಿಯ ತೋಟವೆಂದರು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಂದರು.

ಕನ್ನಡದ ಕೋಗಿಲೆಗಳು ಉಲಿದ ಪದಗಳಿವು
ನಿತ್ಯ ಕೇಳುತಲೆನ್ನ ಬಾಳಿದು ಸಾಗುವುದು.

-



ಅವ್ವಾ ಎನ್ನುವ
ಹೃದಯ ಭಾವ ಭಾಷೆ
ಸರಳ್ಗನ್ನಡ.

-



ಕನ್ನಡಮ್ಮನಿಗೊಂದು ಕಂದನ ಪದ
👇

-


1 NOV 2020 AT 9:23

ದಿನ ಪ್ರಾರಂಭ ಕನ್ನಡದಿಂದ
ದಿನದ ಅಂತ್ಯವೂ ಕನ್ನಡದಿಂದ
ಕನ್ನಡವಿರದ ಜೀವನ ನನ್ನದಲ್ಲ
ಅಂತ್ಯಬರಲಿ ಎನಗೆ!
ಭುವನೇಶ್ವರಿಯ ಮಡಲಿನಲ್ಲಿ .

-