ಆಮಂತ್ರಿಸದೇ ಬರುವ
ಆಕಸ್ಮಿಕ ಘಟನೆಗಳು
ನೀಡುವುದು ಮರೆಯಲಾಗದ
ನೆನಪುಗಳು
ಕಹಿ ಸಿಹಿ ಕಬ್ಬು
ಸವಿಯಲು,
ಸವಿದು ಪಡೆದ ರುಚಿಯ
ಅನುಭಿಸಲು
ಆಮಂತ್ರಿಸದೇ ಬರುವವು
ಕೆಲ ಆಕಸ್ಮಿಕ ಘಟನೆಗಳು.-
ಚೈತ್ರ
(ಹಿಮೀಶತನಯೆ)
575 Followers · 214 Following
ಮೌನ ಪದವಾಗಿ ಹೊರಬಂದಾಗ ಕವಿಯ ಜನನ.
ತೋಚಿದ್ದು ಗೀಚಿದರೂ ಅದೆಲ್ಲವೂ ನನ್ನ ಭಾವನೆಗಳ ಪ್ರತಿಬಿಂಬ. ಎನ್ನ ಆಲೋಚ... read more
ತೋಚಿದ್ದು ಗೀಚಿದರೂ ಅದೆಲ್ಲವೂ ನನ್ನ ಭಾವನೆಗಳ ಪ್ರತಿಬಿಂಬ. ಎನ್ನ ಆಲೋಚ... read more
Joined 6 November 2019
11 JUN 2023 AT 10:26
1 JAN 2022 AT 18:29
ದಿನಗಳು ಹೊಸದಾಗಿದೆ,
ಮನಸು ತಿಳಿಯಾಗಿದೆ
ಬದುಕು ಹಸನಾಗಿದೆ, .
ಕನಸು ಸೊಗಸಾಗಿದೆ,
ನಲಿವು ಹೆಚ್ಚಾಗಿದೆ.
ಮುನಿಸು ದೂರಾಗಿದೆ.-
17 DEC 2021 AT 19:22
ಕೆಲ ವ್ಯಕ್ತಿಗಳ ಸ್ನೇಹ ಅವಶ್ಯಕತೆ ಎಂಬ ಕಿಂಡಿಯಿದ್ದಂತೆ. ಅವಶ್ಯಕತೆ ಇದ್ದಾಗ, ಆ ಕಿಂಡಿಯಿಂದ ಸ್ನೇಹ ಎಂಬ ತಂಗಾಳಿ ಬೀಸುತ್ತದೆ. ಮಿಕ್ಕ ಸಮಯದಲ್ಲಿ ಅದು ಮುಚ್ಚಿ ಅದು ಗೋಡೆಯಂತೇ ಆಗಿಬಿಡುತ್ತದೆ.
-
17 DEC 2021 AT 7:09
ಜೀವನದಲ್ಲಿ ನಂಬಿಕೆ ಮತ್ತು ಭರವಸೆ ಕಳೆದುಹೋದಾಗ ಸಿಗುವುದೊಂದೇ ; ಉತ್ತರವಿಲ್ಲದ ಸಾವಿರ ಪ್ರಶ್ನೆಗಳು.
-
16 DEC 2021 AT 11:23
ಸಾವಿರಕ್ಕೂ ಹೆಚ್ಚು ವಿವಿಧ ರಂಗೋಲಿ ಬಿಡುವವಳಿಗೆ,
ನೂರಾರು ಬಗೆಬಗೆಯ ಅಡುಗೆ ಮಾಡುವವಳಿಗೆ,
ಲೆಕ್ಕವಿಲ್ಲದಷ್ಟು ದೇವರ ಹಾಡ ಸ್ಮೃತಿಯಲ್ಲಿಟ್ಟಿರುವವಳಿಗೆ,
ಪದವಿ, ಪಿ.ಎಚ್‌ಡಿ ಸರ್ಟಿಫಿಕೇಟುಗಳೆಲ್ಲಾ ಅವಳ ತಕ್ಕಡಿಯ ಇನ್ನೊಂದು ಬದೀಗೆ.-