QUOTES ON #ಮೊದಲರಾತ್ರಿ

#ಮೊದಲರಾತ್ರಿ quotes

Trending | Latest
25 JAN 2020 AT 12:38

ಮೊದಲ ರಾತ್ರಿ ,

-



ಹೊಸ ದಾರಿಯಲಿ ಏಳು
ಹೆಜ್ಜೆಗಳು ಮೂಡಿದವು
ಮೂಡಿದ ಪ್ರೀತಿ
ಸಾಲುಗಳು
ಎದೆತುಂಬಿ ಗೀತೆ
ಹಾಡಿದವು
ಮೊದಲ ರಾತ್ರಿಯ
ಈ ಪಯಣ
ಮಧುರವಾದ
ಕ್ಷಣಗಳ ಸಂಕಲನ
ನನ್ನೆದೆಯಲಿ
ನವಿಲೊಂದು
ಕುಣಿದಾಡಿ
ನಿನ್ನೆದೆ ಗೂಡಲ್ಲಿ
ಗರಿಬಿಚ್ಚಿ ಹಾರಿತು
ನನ್ನದೊಂದು ಸಿಹಿಯಾದ
ಸ್ಪರ್ಶಕ್ಕೆ ನಿನ್ನುಸಿರು
ಕೂಡ ನಾಚಿ ನೀರಾಯಿತು

-


29 MAY 2019 AT 23:22

"ಮಧುರ ಮಿಲನ"
ಯಾಕೊ ಏನೊ ನಾಚಿಕೆ ಜಾಸ್ತಿ ಆಯ್ತು ಏತಕೊ
ನಡೆದರು ಜಾರುತಿಹುದು ಹಾಸಿಗೆ ಮೇಲೆ ಕಾಲು ಎಲ್ಲಿಗೊ
ತಿಳಿದು ಹಿಡಿದೆ ನನ್ನವನ ಕೈಯ ಕಿರು ಬೆರಳನ್ನು
ಏನು ಹೇಳದೆ ಬಾಚಿ ತಬ್ಬಿದನು ನನ್ನ ಹಸಿ ಮೈಯನ್ನು

ಮಲ್ಲಿಗೆ ಪರಿಮಳದಲ್ಲಿ ಸೋಲುತಿಹುದು ಮನಸು
ಸೋರಿಗೆ ಆಗುತಿಹುದು ಅವನ ಕಾಮ ಪ್ರೀತಿಯಲ್ಲಿ ವಯಸ್ಸು
ಮತ್ತೆ ಮತ್ತೆ ಜಾಸ್ತಿಯಾಯ್ತು ಇಲ್ಲ ಜೊತೆ ಸಲ್ಲುವ ಸಲಿಗೆ
ನೆರಳಿಗೂ ನಾಚದ ಹುಡುಗಿ ಸ್ಪರ್ಶಕೆ ಸೋತಿಹೆನು
ಮುದ್ದಾಡ ಮನಸಿದ್ದರೂ ಸುಮ್ಮನೇ ನೇರ ಮಲಗಿಹೆನು

ಹಣೆಯ ಬೊಟ್ಟು ಜಾರುವ ಹೊತ್ತು
ತಂಡಿಯ ಚಳಿಯು ಜಾಸ್ತಿ ಆಯ್ತು
ಸುಮ್ಮನೆ ಸರಿದರು ಸೆಳೆದು ಹಿಡಿಯುತಿಹನು
ದೇಹ ಕಷ್ಟ ಅಂದರೂ ಮನಸು ಇಷ್ಟಪಡುತಿಹುದು
ಬೇಡ ಅನ್ನೊ ಮನಸಿಲ್ಲ
ಸಾಕು ಅಂದರೂ ಮುತ್ತು ನಿಲ್ಲುತ್ತಿಲ್ಲ
ಇರಬೇಕು ಇಂತಹ ಹೊತ್ತು ಪ್ರತಿ ಇರುಳಲ್ಲು
ಈ ಕೋರಿಕೆ ಇಟ್ಟಿರುವೆ ಇಂದು ದೇವರಲ್ಲು

ಕೈ ಬೆರಳುಗಳ ಒದ್ದಾಟದಲಿ
ಮನಸುಗಳು ಮುದ್ದಾಡಿಹುದು
ಮುಸುಕಿದ ಹೊತ್ತಿನಲ್ಲೂ ಚೈತನ್ಯ ಹೊಮ್ಮುತಿಹುದು
ಏಳಲು ಹೊರಟರೆ ಹಾಗೇಯೆ ತಬ್ಬಿದನು
ಮಲ್ಲಿಗೆಯು ಸೊರಗುತಿರಲು
ಕಾಲ್ಗೆಜ್ಜೆ ಬೀಳುತಿರಲು
ಎದೆಯ ಭಾರ ಏರು ಪೇರು
ಹುಡುಗನ ಹುಡುಗಾಟ ಜೋರು...
ಮುಂದೆ ನಾ ಹೇಳೆನು
ಮತ್ತಲ್ಲಿ ಮುತ್ತು ನೀಡಿ ಜಗವ ಮರೆತೆನು ಶಿವಸೂರ್ಯ 🌟

-


10 SEP 2020 AT 11:39

ಹಾಸ್ಯಗವನ: ಮೊದಲ ರಾತ್ರಿ

ಮಲ್ಲಿಗೆಯ ಮನಸವಳು
ಮೆಲುದನಿಯಲಿ ನುಡಿಯುವಳು
ಮುದ್ದಾದ ಗುಂಡು ಮುಖದವಳು

ಮದುವೆಯ ಮೊದಲು
ಹೆಣ್ಣು ನೋಡುವ ಶಾಸ್ತ್ರದಲಿ
ಕಾಫಿಯ‌ ನೀಡುತ ಮನಸ ಕದ್ದವಳು

ತಪ್ಪದೇ ಮುಂದೆ ಓದಿರಿ :

-


29 JAN 2021 AT 17:48

ಮೊದಲ ರಾತ್ರಿ
(Read full caption ✍️)

-


16 MAY 2021 AT 11:02

ಒಲವಿನಾ ಪುಟದಿಂದ ಆಯ್ದ ಭಾಗ ಒಂದು
ಮುದದ ರಾತ್ರಿ, ಮೊದಲ ರಾತ್ರಿಯೂ :

ಆದರ್ಶಗಳ ಹೊತ್ತು ಓದುವುದರಲ್ಲಿ
ಮುಳುಗಿತ್ತು ಮನ 24ರ ವರೆಗೆ
ಕೆಲಸದ ಆಯ್ಕೆ ಅಧಿಕಾರಗಳ ನೆನೆದು 30ನು ದಾಟಿಸಿತ್ತು
ಬರೆಯಲಾಗಿರಲಿಲ್ಲ ಒಲವಿನಾ ಕವಿತೆಯ
ಸಂಜೆಯಾದೆಡೆ ಮೈ ಮನಗಳು ಭಾರವಾಗುತಿದ್ದವು
ಅಂದೊಂದು ಸಂಜೆ ಅದು ಹೇಗೆ ಬಂದಳೋ
ನಾ ನಡೆವ ಹಾದಿಯಲಿ ಅವಳೂ ಸಹ
ಇಬ್ಬರೂ ಸಂಧಿಸಿದೆವು ಮೌನದಲೀ
ಚಂದ್ರ ಬೆಳಕ ಚೆಲ್ಲಿದ ಅವಳ ಮೊಗದ ಮೇಲೆ
ಇಡೀ ರಾತ್ರಿ ಹಸ್ತಗಳ ಬೆಸೆದು ಹೊಸೆದು ಹಗಲು ಹರಿಸಿದೆವು
ಬೆಳಕು ಹರಿದು ರವಿ ಮೂಡಿ ಅವಳ ಕೆನ್ನೆಗೆ ಮುತ್ತಿಟ್ಟಾಗಾ
ನಾ ತುಂಟಾಟ ಮಾಡಿದ್ದೆ, ನನ್ನವಳಾ ಕೆನ್ನೆಗೆ ಇವನೇಕೆ
ಮುತ್ತಿಟ್ಟನೆಂದು, ಅದಕವಳು ನಾಚಿ ನೀರಾಗಿ
ಕೈ ಕೊಸರಿ ಎದ್ದು ಓಡಿದ್ದಳು ಅಡಿಗೆ ಮನೆಗೆ
ತುಂಬಾ ಕೆಲಸ ಬಾಕಿ ಇದೆ ಎಂದು
( ಮುಂದುವರಿಯುವುದು ಎರಡನೇ ಭಾಗದಲ್ಲಿ )

-


4 JUN 2021 AT 18:28

Single line.. Single meaning

ಅಪ್ಪಿ ಬಿಡು ಒಮ್ಮೆ
ನಿನ್ನಲ್ಲಿ ಬಿಸಿ ಇರೊ ತನಕ....
 ¤¤¤¤¤¤¤¤¤¤¤¤¤¤

ರಾತ್ರಿಯ ಬೆಳಕಿಗು ತಿಳಿದಿದೆ
ಕತ್ತಲಲಿ ಬೆತ್ತಲಾಗುವ ಹೊತ್ತು....
¤¤¤¤¤¤¤¤¤¤¤¤¤¤¤

ಖಾಲಿ ಗೋಡೆಗು ನಾಚಿಕೆ
ಪಿಸು ಮಾತ ಧನಿ ಕೇಳಿ......
¤¤¤¤¤¤¤¤¤¤¤¤¤¤¤

ನಾಚುವ ಹೊತ್ತಲ್ಲ
ಸಹ್ಯಕೆ ಮುಖ ತೋರಿಸು......
¤¤¤¤¤¤¤¤¤¤¤¤¤¤¤

ತುಟಿ ತುಟಿಯ ಸೇರಿಸಿ
ಬೆರೆಸು ಸಿಹಿಯಾ.....
¤¤¤¤¤¤¤¤¤¤¤¤¤¤¤

ಕೇಳದ ಪದಕೆ, ಹಸಿ ಪಿಸು ಮಾತಿಗೆ
ಮ ತ್ತು   ತರಿಸಿದೆ ನೀನು.......
¤¤¤¤¤¤¤¤¤¤¤¤¤¤¤

-


27 MAY 2021 AT 5:59

ಮೊದಲ ರಾತ್ರಿ
"""""""""""""
ನವ ದಂಪತಿಗೆ
ಮೊದಲ ರಾತ್ರಿಯಾದರು
ಅರೆ ನಿದಿರೆಯಾಯಿತಲ್ಲ.

-