ಕ್ಷಮಿಸಿ,
ಅಡಿ ಬರಹದಲ್ಲೊಂದು ತಪ್ಪಾಗಿದೆ.
ಅದು ಮುನ್ನುಡಿಯನ್ನೇ ಮರೆತನ್ತಿದೆ.-
ನಿರೀಕ್ಷೆಯ ಪರೀಕ್ಷೆಯಲ್ಲಿ
ಗೆದ್ದು ಬಂದವರಿಗಿಂತ,
ಸಹನೆಯಿಂದ ಗುದ್ದಾಡದೆ
ಅರ್ಧಕ್ಕೆ ಎದ್ದು ಬಂದವರೇ
ಹೆಚ್ಚು ,-
ನಮೌವ್ವ ಬೈತಾಳಂತ
ಕಂಬಳಿ ಹೊದಕೊಂಡು
yq ನಲ್ಲಿ quote
ಬರಕೊಂಡು
ಯಾರಾದರೂ
like ಕೊಡ್ತಾರಅಂತ
ಕಾಯ್ತಿರ್ತಿನಿ.
ಇದೆ ಸತ್ಯ .-
ಜಿಹಾದ್ ನ ಶಹರ್ ನಲ್ಲಿ ಬಂಧಿಯಾದ
ಮೊಹಬ್ಬತನ್ನು ತಬ್ಬಿದ ಕಬರಸ್ತಾನದ
ಮಣ್ಣಿನಲ್ಲೂ ಯುದ್ಧದ ಅಲೆಯೊಂದು
ಎದ್ದಂತಿದೆ. ಉಸಿರನ್ನು ಉಳಿಸಲು
ತುಫಾನ್ ಗುದ್ದಾಡುತಿದೆ.-
ಎದೆಮೂಲೆಯಲ್ಲಿ ಗೆದ್ದಲಿಡಿದಿದ್ದ
ಕಾಪಾಟಿನಲ್ಲಿ ನಿನ್ನ ನೆನಪಿನ
ಘಮಲೊಂದೆ ಹಸಿಯಾದ
ಸ್ವಚ್ಛ ಅಲೆಯ ಹೊದ್ದು ಮಲಗಿದ್ದು,
ಈಗಲೂ ಆಘ್ರಾಣಿಯ ಅಮಲೇರಿಸುವ
ನಶೆಯಂತವನು ನೀನು,-
ಕಣ್ರೆಪ್ಪೆಯಿಂದ ಮುಗ್ಗರಿಸಿ ಕದಪಿನಂಚಿನಲ್ಲಿ
ಜೋತು ಬಿದ್ದ ಹನಿಗಳೆಲ್ಲವೂ ,
ಮಧುತುಂಬಿದ ಅಧರವ ನೋಡುತ್ತ
ನಗುತಿವೆ ಸಾಕಿ,
ಮಧುಹೀರಿದ ಮನ್ಮಥರೇಲ್ಲಾ
ತುಂಬಿಸಿಕೊಂಡರಷ್ಟೇ,
ಹೆಪ್ಪುಗಟ್ಟಿದ ಅಧರದ ಬಿರುಕಿನೆಡೆಗೆ
ಕಿರುನೋಟವನ್ನು ಬೀರದೆ ,
ಮತ್ತೇರಿಸಿಕೊಂಡ ಮಗ್ಗುಲಿಗೆ.
ಉಪ್ಪಿನ ಋಣಭಾರವಿರಿಸಿಹೋದರಂತೆ.-
ಇನ್ನಾದರು
ತುಸು ಧಾರಾಳವಾಗಿಬಿಡು
ಗೆಳೆಯ,
ಮೌನಗಟ್ಟಿದ ಕಡುಗೆಂಪು
ಲಜ್ಜೆಯನ್ನೂ ಬಿಡದೆ
ಬಾಚಿತಬ್ಬಿಬಿಡು,
ನಿನ್ನೋಳಗಿನ ಮಾತಿಗೆ ಮರುಜನ್ಮ
ನೀಡಲಿಕ್ಕಾದರೂ,,-
ನಿನ್ನ ಕಣ್ಣೀರಿನ ಗೋಳನ್ನು ಅನ್ಯರಲ್ಲಿ
ಹೇಳಿಕೊಳ್ಳದಿರು ಸಖೀ,
ಹುಳಿಹೆಂಡದ ದಾಸರಿವರು,
ನಾಲಿಗೆಯ ಚಪಲಕ್ಕೆ ಉಪ್ಪು
ಕಣ್ಣೀರನ್ನೂ ಉಪ್ಪಿನಕಾಯಿಯಂತೆ
ನೆಂಚಿ ತಿನ್ನುವರು.
ನಿನ್ನ ಸ್ವಾಭಿಮಾನವ ಅಡವಿಟ್ಟು ಅನ್ಯರಲ್ಲಿ
ಅಂಗಲಾಚದಿರು ಸಖೀ ,
ಜೂಜುಕೋರ ಕಾಮಾಂಧರಿವರು,
ನಿನ್ನನೇ ಪಗಡೆಯಾಗಿಸಿ,
ದಾಳದ ದಾಸಿಯೊಡನೆ
ಬೆತ್ತಲೆಯಾಟವಾಡುವರು.-
ಶಬ್ಧ ಗಳೆಲ್ಲ ಶಿಕಾರಿಗೆ ಹೋರಟಗಲೆಲ್ಲಾ
ಭಾರಿ ಬೇಟೆಯದ್ದೆ ಭೋಜನ,
ಕೆಲವು ಕಲ್ಲು ಹೃದಯಗಳಿಗೆ
ಊಳಿಪೆಟ್ಟು ಕೊಟ್ಟು,
ಮರಳುವವು ಬಲೆಯಲ್ಲಿ
ಹಲವು ಮನಸ್ಸುಗಳ ಹೊತ್ತು.
-