ಅನಾಮಧೇಯ   (ಅನಾಮಧೇಯ)
122 Followers · 40 Following

read more
Joined 12 July 2018


read more
Joined 12 July 2018

State of non-ego :

ಅಹಂ ರಹಿತ ಕರ್ಮವೇ ಅಕರ್ಮ
ಕರ್ಮದಲ್ಲಿ ಅಕರ್ಮವನ್ನು
ಅಕರ್ಮದಲ್ಲಿ ಕರ್ಮವನ್ನು ಯಾರು
ನೋಡುತ್ತಾರೆಯೋ ಆ ವ್ಯಕ್ತಿ
ಎಲ್ಲಾ ಕರ್ಮಗಳನ್ನು ಮಾಡಿದವನಾಗುತ್ತಾನೆ

-



ಪ್ರತಿಯೂಬ್ಬ ವ್ಯಕ್ತಿಯ
ಇಡೀ ಜೀವನಾವಧಿಯಲ್ಲಿ
ಎಂದಿಗೂ ಋಣ ತೀರಿಸಲು
ಸಾಧ್ಯವಾಗದೇ ಇರುವ
ಇಬ್ಬರು ವ್ಯಕ್ತಿಗಳು ಇರುತ್ತಾರೆ
ಒಬ್ಬರು ತಾಯಿ
ಇನ್ನೊಬ್ಬರು ತಂದೆ

-


25 FEB AT 15:09

ಪ್ರತಿಯೊಂದು
ಕಷ್ಟಕರ
ಪರಿಸ್ಥಿತಿಯಲ್ಲೂ
ಸಂಭಾವ್ಯವಾದ
ಮೌಲ್ಯವಿರುತ್ತದೆ
ಕಂದಾ 🌱🌾⚘️

-


20 FEB AT 22:45

ಸ್ವತಂತ್ರತೆ - ಜವಾಬ್ದಾರಿ ಮತ್ತು ಶಿಸ್ತು

ಪ್ರತಿ ವ್ಯಕ್ತಿಯು ಸ್ವತಂತ್ರನೇ ನಿಜ
ಆದರೆ ಕುಟುಂಬದ ಮತ್ತು
ಸಮಾಜದ ಜವಾಬ್ದಾರಿಯ
ಚೌಕಟ್ಟಿನಲ್ಲಿ ನಿರ್ಧಾರಗಳನ್ನು
ತೆಗೆದು ಕೊಳ್ಳುವುದು ಆ ವ್ಯಕ್ತಿಯ
ಶಿಸ್ತು ಮತ್ತು ತಾಳ್ಮೆಯ ಮೇಲೆ
(ಸಹನೆ, ಸೈರಣೆ) ಅವಲಂಬಿಸಿರುತ್ತದೆ
ಹಾಗೂ ಅದು ಸಂಸ್ಕಾರವನ್ನು ಕೂಡ
ಪ್ರತಿ ಬಿಂಬಿಸುತ್ತದೆ ಕಣೇ

-


19 FEB AT 23:44

ಕಲಿಯುಗದ ಬಗ್ಗೆ
ಹೀಗೊಂದು
ಅವಲೋಕನ :

ಕಲಿಯುಗದಲ್ಲಿ,
ಸಾಮಾಜಿಕ ಮತ್ತು
ನೈತಿಕ ಮೌಲ್ಯಗಳು
ಕುಸಿಯುತ್ತವೆ,
ಹಾಗೂ ಅದು ಸಮಾಜದ
ವಿಘಟನೆಗೆ
ಕಾರಣವಾಗುತ್ತದೆ ಎಂದು
ಸ್ಕಂದ ಪುರಾಣದಲ್ಲಿ
ಉಲ್ಲೇಖಿಸಿ ಇರುವುದನ್ನು
ನೆನಪಿಸಿ ಕೊಂಡು
ನಾಲ್ಕು ಸಾಲು
ಗೀಚಿ ಇರುವೆ ಅಷ್ಟೇ ಕಣೇ

-



ನಕಾರಾತ್ಮಕವಾದ
ಸಂಸ್ಕಾರವಿರುವವರ ಒಡನಾಟ
ನಮ್ಮ ಸಕಾರಾತ್ಮಕ
ವಿಕಾಸಕ್ಕೆ ಅಡ್ಡಿಯಾಗುತ್ತವೆ

ನಕಾರಾತ್ಮಕವಾದ ಇನ್ನೊಬ್ಬರ
ಸಂಸ್ಕಾರಗಳು
ನಮ್ಮ ಸ್ವಾಭಿಮಾನಕ್ಕೆ
ಧಕ್ಕೆ ಮೂಡಿಸಿವುದರ ಜೊತೆಗೆ
ಸ್ವಯಂ-ವಿನಾಶಕಾರಕ್ಕೆ
ನಾಂದಿಯಾಗುವುದರಿಂದ
ನಮ್ಮ ಸಕಾರಾತ್ಮಕ
ವಿಕಾಸಕ್ಕೆ ಅಡ್ಡಿಯಾಗದಂತೆ
ಕರ್ಮ ಮಾಡುವುದು
ಜ್ಞಾನಿಗಳ ಲಕ್ಷಣ ಮೂಢ

-



ಇಂದು ಬ್ರಾಹ್ಮಿ ಮುಹೂರ್ತದಲ್ಲಿ
ನೆನಪಿಗೆ ಬಂದ ಬಸವಣ್ಣನವರ
ವಚನವನ್ನು ಗೀಚಿ ಮನವ
ತಿಳಿಗೊಳಿಸಿ ಕೊಳ್ಳಬೇಕಿದೆ ತಂದೇ

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?

-



ಪ್ರತಿ ಒಬ್ಬರ ಕೈಯಲ್ಲಿ
ಬೆರಳುಗಳು ಇರುವಂತೆ
ಎಲ್ಲರೂ
ಒಂದಾಗಿ ಇರುವಂತೆ
ಜವಾಬ್ದಾರಿಯುತವಾಗಿ
ನಡೆದುಕೊಳ್ಳಬೇಕು

ಯಾರು ಯಾರಿಗೆ ನೋವುಂಟುಮಾಡಿದರೂ
ಅದು ಇತರರಿಗೆ ನೋವುಂಟು
ಮಾಡಿದಂತೆಯೆ ಆಗುತ್ತದೆ
ಮತ್ತು
ಒಬ್ಬರ ಸಂತೋಷವು
ಇತರರ ಎದೆಯಲ್ಲಿ
ಪ್ರತಿಧ್ವನಿಯಾಗಿ ಕಾಣದಿದ್ದರೆ, ಅಗತ್ಯವಿರುವ
ಪರಿಸ್ಥಿತಿಗಳು ಇರುವುದಿಲ್ಲ
ಮತ್ತು ಮುಂದುವರಿಯುವುದು ನಿಷ್ಪ್ರಯೋಜಕವೇ ಸರಿ ಮೂಢ 🙏

-


25 JAN AT 17:25

ಜೀವನ ಎನ್ನುವುದು
ದಾರಿಯಿಲ್ಲದ ಮಾರ್ಗ ಕಣೇ

ಆಯ್ಕೆಯಿಲ್ಲದ ಅರಿವು
ನಮ್ಮದಾಗಿರಲಿ ಮೂಢ

-



ಸತ್ಯವನ್ನು ಅರಿತುಕೊಳ್ಳಲು
ಮನಸ್ಸು
ತಾತ್ಕಾಲಿಕ ಭಾವನೆಗಳಿಂದ
ಮುಕ್ತವಾಗಿರಬೇಕು ಮೂಢ

-


Fetching ಅನಾಮಧೇಯ Quotes