ದಾರಿಯಲ್ಲಿ ಹೋಗುತ್ತಿದ್ದಾಗ ಗೆಳೆಯನೊಬ್ಬ ಬೆರಳು ಮಾಡಿ ತೋರಿಸಿದ
"ನೋಡಲ್ಲಿ, ಎಷ್ಟು ಸುಂದರವಾಗಿದ್ದಾಳೆ ಆ ಬಾಲೆ"
ನಾ ಹೇಳಿದೆ
"ಮುಂದೆ ದೊಡ್ಡ ಗುಂಡಿ ಇದೆ, ನೋಡಿಕೊಂಡು ಹೆಜ್ಜೆ ಇಡೋ ಲೇ"
ಇಲ್ಲಾಂದ್ರೆ ಹೋಗ್ತೀಯಾ ಮೇಲೆ
ಅವಳು ಹಾಕ್ತಾಳೆ ಬೇರೆವ್ರಿಗೆ ಮಾಲೆ— % &-
🙏🙏🙏
ಅಪ್ಪ
ಎನ್ನುವ
ಎರಡಕ್ಷರದಲ್ಲಿ
ಅವ್ಯಕ್ತ ಒಲವಿನ
ಪ್ರೀತಿ ಪ್ರೇಮದ ಗೆಲುವು
ಮಾತು ಮಾತಿನಲ್ಲಿ ಗೆಳತನದ ಒಲುಮೆ
ತಪ್ಪಿದಲ್ಲಿ ತಿದ್ದಿ ಬೈದು ತೀಡಿದ ಕುಲುಮೆ
ಹಗಲಿರುಳು ದುಡಿಯುವ ಬತ್ತದ ಚಿಲುಮೆ
ಧೈರ್ಯ ಅಪ್ಪ
ಸ್ನೇಹ ಅಪ್ಪ
ಶ್ರದ್ಧೆ 🙏 ಅಪ್ಪ
ವಾತ್ಸಲ್ಯ ಅಪ್ಪ
ಶ್ರೇಯಸ್ಸು ಅಪ್ಪ
ಸಾಗುತ್ತಿದೆ ಬಾಳಯಾನದ ಪಯಾಣ
ನಿಮ್ಮ ಆರ್ಶಿವಾದದ ನೆರಳಿನ ನಮನ
ತ್ಯಾಗದಮೂರ್ತಿ ಇವರು
ನನ್ನ ಪಾಲಿನ ದೇವರು
🙏🙏🙏🙏🙏🙏🙏🙏🙏🙏🙏🙏
Sarva Arasa Shetty
-
ಮುಂಗಾರು ಮಳೆಯಲ್ಲಿ ಮೊದಲ ತಂಪು
ಸೃಷ್ಟಿಯ ಸೊಬಗಿಗೆ ಒಲವ ಕಂಪು
ಬಾನಂಗಳದಲ್ಲಿ ಹಕ್ಕಿಗಳ ಇಂಪು
ಧರಣಿತಲಕ್ಕೆ ಸಂಭ್ರಮದ ಸೊಂಪು
ಮಧುರಗಾನಮೃತದ ವರ್ಷಧಾರೆ
ತುಂತುರು ಹನಿಯಲ್ಲಿ ಅಮೃತಧಾರೆ
ಸಿಹಿ ಸಿಂಚನದಲ್ಲಿ ಒಲವಧಾರೆ
ನಿಸರ್ಗಕ್ಕೆ ಸಾಂತ್ವನದ ಜಲಧಾರೆ
ಜೀವ ಸಂಕುಲಕ್ಕೆ ಚೈತನ್ಯ ಬಂದಿದೆ
ಖುಷಿಯ ತಂಗಾಳಿ ಎಲ್ಲಡೆ ಬೀಸಿದೆ
ಹಸಿಮಣ್ಣಿನ ಸುಗಂಧ ಹರಡಿದೆ
ಪ್ರಕೃತಿಯು ಸಂತಸದಿ ನಲಿದಿದೆ-
ಮುಸ್ಸಂಜೆಯಲಿ ಶೃಂಗಾರಗೊಂಡು ಕುಳಿತಿರುವೆ ಸಖ
ನಿನ್ನಿಷ್ಟದ ಹಸಿರ ಉಡುಗೆಯಲ್ಲಿ ಕಾಯುತಿರುವೆ ಸಖ //
ಕೈತುಂಬಾ ನಿನ್ನೊಲವ ಮದರಂಗಿಯ ಚಿತ್ತಾರವು
ಸಾಂಗತ್ಯದ ಒಲವಿಗಾಗಿ ತವಕಿಸುತಿರುವೆ ಸಖ //
ಜನ್ಮ ಜನ್ಮಾಂತರದ ನಂಟಿನ ಹೊದಿಕೆಯಾಗಲು
ಕಾತರದ ಕಣ್ಣಂಚಿನಲ್ಲಿ ಸಂಭ್ರಮಿಸುತಿರುವೆ ಸಖ //
ಅನುರಾಗದ ತಂಗಾಳಿಯ ಕಂಪು ಬೀಸಲು
ಅನುಬಂಧದ ಸೆಲೆಯಲ್ಲಿ ನಲಿದಾಡುತಿರುವೆ ಸಖ //
ಕನಸಿನ ಕಲ್ಪನೆಯ ಭಾವಕ್ಕೆ ನನಸು ಮಾಡಲು
ಸರ್ವಳ ಹೃದಯದಲ್ಲಿ ನೀ ಕುಣಿದಾಡುತಿರುವೆ ಸಖ //-
ಬೇಜಾರು ಮಾಡೋದು
ಮತ್ತೆ
ನಿರೀಕ್ಷೆ ಮಾಡೋದು
ನನ್ನ ಜನ್ಮಸಿದ್ದ
ಹಕ್ಕಾಗಿದೆಯೆನೋ
ಅಂತ ಅಂತರಾವಲೋಕನ ಈ
ಮನದಿ ಶುರುವಾಗಿದೆ...-
ನಮ್ಮ ದುಡಿಮೆಗೆ
ತಕ್ಕ ಪ್ರತಿಫಲ
ದೊರೆತ
ದಿನಗಳ
ಮೊದಲ ಸಂಬಳ
ಕೈಗೂಡಿದಾಗ
ಆಗುವ
ಸಂತೋಷಕ್ಕೆ
ಪಾರವೇ ಇಲ್ಲ
ಅಲ್ವೇ..!!-
ಸರ್ವಕಾಲಿಕ ಅವನೊಂದಿಗೆ ಮಳೆ ಚೆಲ್ಲಾಟ
ಈ ಬೊಗಳೆದಾಸರಿಗೆ ಅರ್ಥ ಆಗ್ತಿಲ್ಲ ಸಂಕಟ
ದಲ್ಲಾಳಿಗಳ ಆರ್ಭಟ
ನೆಪಕಷ್ಟೇ ಈ ಬಜೆಟ್
ಕಟ್ಟುಕತೆಗಳ ಕ್ಯಾಸೆಟ್
ಧನದಾಹ ತುಂಬಿರುವ ತಲೆಯಲಿ ಅಧಿಕಾರದ ಕಚ್ಚಾಟ
ಖುರ್ಚಿ ಬೇಕಾದಾಗ ರೈತರ ಹೆಸ್ರಲ್ಲಿ ಇವರ ಡೊಂಬ್ರಾಟ
ಸಾಲಮನ್ನ ಪರಿಪಾಟ
ರಾಜಕೀಯ ಕೋಲಾಟ
ಕೇಳವರಿಲ್ಲ ಗೋಳಾಟ
ರೈತನಿಗಾಗಿ ಚರ್ಚೆಮಾಡಿ ಮಾಡಲಿ ಸಾಲ ಸೂಟ
ರೈತರಮ್ಯಾಲ ಕೇಸಹಾಕಿ ಹೆದರಿಸಿ ಕೊಡ್ತಾರಲ್ಲ ಕಾಟ-
ನನ್ನ ಹೃದಯ ತೋಟದಿ ಹೂವಾಗಿ ನಿಂತವಳೆ
ನಿಂತವಳೆ ಕಣ್ಣಂಚಿನಲ್ಲಿ ಕರೆದವಳೆ
ಕರೆದವಳೆ ನಗೆಹೂವಲ್ಲಿ ಸೆಳೆದೆ
ಸೆಳೆದೆ ಅನುರಾಗದ ಅಲೆಯಲ್ಲಿ
ಅಲೆಯಲ್ಲಿ ನಾ ಕೊಚ್ಚಿ ಹೋದೆ
ಹೋದೆ ನಿನ್ನ ಕನವರಿಕೆಯ ಹಾದಿಯಲ್ಲಿ
ಹಾದಿಯಲ್ಲಿ ಕಂಡೆ ಪ್ರೀತಿಯ ಉಸಿರು
ಉಸಿರಲ್ಲಿ ಬೆರೆಸಿದೆ ನಿನ್ನ ಪ್ರೇಮದ ಹಸಿರು
ಹಸಿರು ಸಿಂಚನದಲ್ಲಿ ಸುರಿದೆ ಒಲವ ತೇರು
ತೇರುಗಳ ಕನಸಿನ ಮೆರವಣಿಗೆ ನೀ ಕಟ್ಟಿದೆ
ಕಟ್ಟಿದೆ ನನ್ನೊಡಲಿಗೆ ಸವಿಜೇನ ಮಂಟಪ
ಮಂಟಪದಲ್ಲಿ ಮನದರಸಿಯಾಗಿ ಬಂದೆ-