QUOTES ON #ಮಾತು

#ಮಾತು quotes

Trending | Latest
8 JUL 2019 AT 21:35

ಸಮಯಕ್ಕೆ ತಕ್ಕ ಮೌನ ಕೂಡ
ಸಮಸ್ಯೆಗಳಿಗೆ ದಿವ್ಯವೌಷಧ

-


28 JUL 2020 AT 21:23

ಮೂರ್ಖರ ಜೊತೆಗಿನ ಮಾತುಗಳು,
ಪೂರ್ಣವಿರಾಮವಿಲ್ಲದ ಸಾಲುಗಳಂತೆ...

-


8 JUL 2019 AT 22:56

ಮಾತುಗಳಿಂದ ಮನಸ್ಸನ್ನು ಬೆಸೆಯಲೂಬಹುದು
ಮಾತುಗಳಿಂದ ಮನಸ್ಸನ್ನು ಮುರಿಯಲೂಬಹುದು
ನಮ್ಮ ಮಾತುಗಳು ಮಿತವಾಗಿದ್ದರೂ ಪರವಾಗಿಲ್ಲ
ಮತ್ತೊಬರ ಮನಸ್ಸನ್ನು ಘಾಸಿಗೊಳಿಸದಿದ್ದರೆ ಸಾಕು.

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ
ರೋಗವಿಲ್ಲ ಎಂಬ ಗಾದೆ ಮಾತಿನಂತೆ,ಮಾತಿನಲ್ಲಿ
ತೂಕವಿರಲಿ.ಮನಸಿನಲ್ಲಿ ಪ್ರೀತಿಯಿರಲಿ.

-


8 JUL 2019 AT 21:26

ಮಾತಿನಿಂದ ಬಗೆಹರಿಯದಿದ್ದಾವುದಿಲ್ಲ,
ಪ್ರೀತಿಯಿಂದ ಜಗವನ್ನೇ ಗೆದ್ದ ಗೌತಮ ಬುದ್ಧ.

-


8 MAR 2020 AT 18:41

ಓ ಹೆಣ್ಣೇ,
ಬಣ್ಣದ ಮಾತಿಗೆ ಮರಳಾಗದಿರು
ಬಣ್ಣಗಳಾಚೆಗೂ ನಿನ್ನದೊಂದು ಪುಟ್ಟ ಬದುಕಿದೆ...

-


8 JUL 2019 AT 22:38

ಅಂತರಾತ್ಮದಲಿರುವುದೆಲ್ಲವೂ ಮಂದಹಾಸದಲಿರಬಹುದು
ಈ ಅಂದದರಮನೆಯಲಿ ಪ್ರೀತಿಯ ಬೀಜವ ಬಿತ್ತುತ್ತಾ
ಮೃದು ನುಡಿಗಳಿಂದಲೆ ಎಲ್ಲರ ಮನವ ಗೆಲ್ಲುತಾ ಸಾಗೋಣ!
ನಗು ನಗುತಲೆ ಮನ ಮನಗಳನ್ನು ಗೆಲ್ಲೋಣ!
ನಗುವೆ ಸ್ವರ್ಗ ! ಅಳುವೆ ನರಕ !! ಅಳದೆ ನಗು ನಗುತಾ
ಸಾಗೋಣ ಪ್ರೀತಿ ˌಪ್ರೇಮˌ ಸ್ನೇಹದ ಪ್ರಣತಿಯ ಬೆಳಗೋಣ!

-


8 JUL 2019 AT 22:31

ಮಾತಿನಿಂದ ಕಳೆದುಕೊಂಡ ಸ್ನೇಹ
ಪ್ರೀತಿಯಿಂದ ಪಡೆದುಕೊಳ್ಳಬೇಕೆನಿಸಿದೆ

-


16 NOV 2019 AT 7:51

ಮಾತಾಡದೆ
ಅದೇಕೆ.? ಹಠ ಸಾಧಿಸುತಿರುವೆ
ಮನವೇ
ನೀ ಬಳಿ ಬಂದು
ಸಂತೈಸಿ ಬಿಗಿದಪ್ಪಬಾರದೆ.?
ನನ್ನೀ ಮನದೊಡಲು
ನಿನ್ನ ಆಶ್ಲೇಷಕ್ಕಾಗಿ
ಹಪಹಪಿಸುತಿದೆ!
ಹಠವ ಬಿಟ್ಟು ಹೊರಗೆ ಬಾ ಮನವೇ
ಮೌನದೊಳಗೆ ಮನಗಳು
ಮಾತನಾಡಿಕೊಳ್ಳುತ್ತಿವೆ..!

-


8 JUL 2019 AT 22:02

ಮನುಷ್ಯರಿಗೆ ಮಾತೇ ರಕ್ಷೆ! ಮಾತೇ ಶಿಕ್ಷೆ! ಎಂಬ ಹಿರಿಯರ ಉಕ್ತಿಯಂತೆ ಮಾತಿನ ರಕ್ಷೆಯನ್ನು ತೊಡುವ ಕಾಯಕಕ್ಕಿಳಿಯೋಣ, ಮೃದು ಮಾತಿನಲ್ಲಿ ಮಿತಭಾಷಿಗಳಾಗಿ ಜನಮನಗೆಲ್ಲೋಣ.

-


10 MAY 2020 AT 4:27

ಹೃದಯ ಒಡೆಯಲು ಮಾತುಗಳೇ ಬೇಕಿಲ್ಲ,
ಅನುಮಾನಗಳು ಸಹ ಹೃದಯವನ್ನು ಇರಿದು ಕೊಲ್ಲುತ್ತವೆ...

-