ಮನೆಸ್ಥಿತಿ ಸುಧಾರಿಸಿದರೆ ಸಾಲದು; ಮನಸ್ಥಿತಿಯೂ ಸುಧಾರಣೆ ಆಗಬೇಕಿದೆ..!!
-
ಔಡಿಯಾಗಲಿ ಬೆನ್ಸ್ ಕಾರ್ ಆಗಲಿ
ಅಜಾಗರುಕತೆಯಿಂದ,ಮತ್ತಿನಲಿ ಚಲಾಯಿಸಿದರೆ
ಅಪಘಾತ ತಪ್ಪಿದ್ದಲ್ಲ ಹಾಗೆನೇ
ಯಶಸ್ಸಿನ ಅಹಂನಲಿ,ಯೌವನದ ಗತ್ತಿನಲಿ
ನೈತಿಕತೆಯನು ಗಾಳಿಗೆ ತೂರಿದರೆ
ಅನಾಹುತ ಕಟ್ಟಿಟ್ಟ ಬುತ್ತಿ!
-
ಪರಿಸ್ಥಿತಿ ಬದಲಾಯಿಸಲು
ಶಕ್ತಿ ಮೀರಿ ಪ್ರಯತ್ನಿಸೋಣ,
ಅದು ಸಾಧ್ಯವಾಗದೇ ಹೋದಾಗ ಮಾತ್ರ
ನಮ್ಮ ಮನಸ್ಥಿತಿಯನ್ನೇ ಬದಲಾಯಿಸಿಕೊಳ್ಳೋಣ.-
ಅಂದುಕೊಂಡ ಗುರಿ ಸೋತರೂ ಅಡ್ಡಿಯಿಲ್ಲ
ಮನಸ್ಥಿತಿ ಸೋತರೆ ಮುಂದಿನ ಎಲ್ಲಾ
ದುರಾವಸ್ಥೆಗೆ ದಾರಿಯಾಗಿಬಿಡುತ್ತದೆ.-
ಕಣ್ಮುಚ್ಚಿ ನಂಬಲಾಗದ ,
ಸದಾ ಅನುಮಾನದಿಂದ
ಎಚ್ಚರಿಕೆಯಿಂದಲೂ ಇರಲಾಗದ ;
ಕಾಲಘಟ್ಟವು ನಮ್ಮ ಮುಂದಿದೆ.. !!-
ಕರೆಯಲಿಲ್ಲವೆಂದು ಕೊರಗದಿರು
ಬರುವವರಿಗೆ ಮಾತ್ರ ಕರೆಯುವರು
ಬರಲಿಲ್ಲವೆಂದು ಬೇಸರಿಸದಿರು
ಖರ್ಚು ಮಾಡುವವರಿಗೆ ಮಾತ್ರ ಬರುವರು-
ಎಲ್ಲಿ ನಡೆದಿದೆ ತಪ್ಪು?
ಹೊರಗಲ್ಲ...ಒಳಗೆಂದು ಒಪ್ಪು.!
ಪರಿಸ್ಥಿತಿ ಸರಿಯಾಗಬೇಕೆನ್ನಲು
ಮನಸ್ಥಿತಿ ಬದಲಾಗಬೇಕು.-
ನೀವು ಏನಂತೀರಿ ?
ಟೈಮ್ ಆಗೋಗಿದೆ. ಅರ್ಧ ತಲೆ ಕೆಟ್ಟೋಗಿ, ಇನರ್ದ ಮನೆಯಲ್ಲಿರೋ ಫೀರ್ಜಲ್ಲಿ ಇಟ್ಟ ಬಂದಿನ್ರಿ, ನಿದ್ದಿನು ಬರತ್ತಿಲ್ಲ. ಮಾತ್ರೆನು ನುಂಗ್ತಿಲ್ಲ, ಹಾಳಾದ್ ಆತ್ಮಗಳ ಕಾಟ ಅಂದರೆ ಕಾಟ, ಇಲ್ಲಸಲ್ಲದನೆಲ್ಲ ಪುರಾಣ ಮಾಡಿಕೊಂಡು ಮಂದಿ ಮುಂದ್ ಉದ್ ತಾವರೆ. ಇಂತವರನ್ ಕರಸಿ ಬಹುಮಾನ ಆದ್ರೂ ಕೊಡಸ್ ಬೇಕು ಏನಂತೀರಿ...?-