ಒಂದು ಜೀವಕೆ,
ನೂರಾರು ದೇಹ,
ಹಲವಾರು ಬಾಂಧವ್ಯ,
ಎಷ್ಟೊಂದು ಸ್ನೇಹ,
ಆದರಲ್ಲಿ ಕೊನೆಗುಳಿಯುವುದೊಂದೆ,
ಪರಮಾತ್ಮನ ಪರಮಾಪ್ತವಾದ ಪ್ರೇಮ!!-
ಮಗುವನ್ನು
ಮಮತೆಯಿಂದ
ಮುದ್ದಿಸಿ
ಮಾನವಿಯತೆಯನ್ನು
ಮನಕರ್ಥೈಸಿ
ಮನುಷ್ಯನನ್ನಾಗಿ
ಮಾರ್ಪಡಿಸುವವಳು
ಮಾತೆಯೊಬ್ಬಳೆ....
-
ಪ್ರೀತಿ ಎನ್ನುವುದು ಕಾಮದಾಟವಾಗಿರಬಾರದು.
ಅದು ಮನಸುಗಳ ಸುಮಧುರ ಮಿಲನವಾಗಿರಬೇಕು.
ವಯಸ್ಸಿನ ಅಂತರದಲ್ಲಾಗಲಿ ˌ
ಇಲ್ಲವೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಮಾರ್ಗದಲ್ಲಾಗಲಿ
ಪ್ರೀತಿ ಗೊಂದಲಗಳಿಗೆ ಊಹಾಪೋಹಗಳಿಗೆ ತುತ್ತಾಗಬಾರದು.
ನಿರ್ಮಲ ನಿಷ್ಕಲ್ಮಶ
ಭಾವಪೂರ್ಣತೆಯು ತುಂಬಿರಬೇಕು.!-
ಪ್ರಿತಿಯಲಿ ಅವಳು,
ನಿಸ್ವಾರ್ಥದಲ್ಲಿ ಇವನು,
ಆಳ್ವಿಕೆಯಲ್ಲಿ ಅವಳು,
ನೆಮ್ಮದಿಗಾಗಿ ಇವನು.
ಆಸೆ ಆಕಾಂಶೆಯಲ್ಲಿ ಅವಳು,
ಒಂದು ಸುಂದರ ಬದುಕಿಗಾಗಿ ಇವನು.
ಪ್ರೀತಿ ಒಂದೆ ಪರಿಹಾರವೆಂದಳು,
ಆದರೆ ಆ ಪ್ರೀತಿಗು ಬೇಕಿದೆ ಹೊಂದಾಣಿಕೆ..
-
ನೀ ಕೃಷ್ಣನಾದರೆ ದೂರವಿರುವ
ಜೀವಕ್ಕೆ ಜೀವ ಕೊಡುವ ರಾಧೆ ನಾ ಆಗಲಾರೆ,
ಸದಾ ನಿನ್ನ ಜೊತೆ ಇರುವ
ನಿನ್ನ ಅಧರ ಸ್ಪರ್ಶಕೊಟ್ಟು ಉಸಿರು ತುಂಬುವ
ಕೊಳಲು ನಾ ಆಗುವಾಸೆ.
-
ಬಾಡಿ ಹೋಗದಂತೆ ನನ್ನ ಕಾಯುತಿರು ಗೆಳತಿ
ಬತ್ತಿ ಬರಿದಾದ ಮನವಾದರು ನನ್ನೊಳಗಿರುವ ಪ್ರೀತಿ
ಕೊರಗದಿರು ಮರುಗದಿರು ನಾನಿರುವೆ ಸಂಗಾತಿ
ಯುಗ ಯುಗಗಳು ಕಳೆದರು ನಾ ನಿನಗೆ ಜ್ಯೋತಿ.!-
ಕನಸುಗಳ ಮಾರುಕಟ್ಟೆಯಲ್ಲಿ
ಅವಳು ಖರೀದಿಸಲಿಚ್ಚಿಸುವ ಬೆಲೆಬಾಳುವ ಕನಸು
ನಾನಾಗಬೇಕೆಂದುಕೊಂಡಿರುವೆ.!
😍
-
ನನ್ನ ಕಾಲ್ಗೆಜ್ಜೆಯ
ಸಪ್ತಸ್ವರ ರಾಗಕೆ
ನಿನ್ನೆಸರಿನ
ಝೇಂಕಾರದ
ಕಲರವ.!
ನಿನ್ನ ಪ್ರತಿಮಾತಿನ
ಸ್ವರಗಾನಕೆ
ನನ್ನುಸಿರನ
ಭಾವಮೇಳವೆ
ಚಂದದ ವೈಭವ!-