ಹಲವು ಕವಿಗಳ ಬೀಡು.,
ವೀರ ಶೂರರ ನಾಡು.,
ವಿಶಾಲವಾದಂತಹ ಮನಸ್ಸಿರುವ ಜನ.,
ಸದಾ ಅಚ್ಚ ಹಸಿರಿನಿಂದ ಕಂಗೋಳಿಸುವ ವನ.,
ಈ ನಾಡಿನ ಮಣ್ಣಿನಲ್ಲಿ ಹುಟ್ಟಿರುವೇನು.,
ಏನನ್ನಾದರೂ ಸಾಧಿಸಿಯೇ ತೀರುವೇನು.,
..✍️ದಯಾ ನಾಯ್ಕ...
-
ಮನದ ವನದಲ್ಲಿ ಹೂವಿನ ಸಿಂಚನ
ಅರಳಿದ ಸುಮಗಳ ಸುಗಂದದ ಹನಿಗವನ
ಅದುವೆ ಭರತ ಭೂಮಿಯ ಸಂಸ್ಕೃತಿಯ ದಿವ್ಯ ಯಾನ.
ಎಲ್ಲ ಹೂಗಳಿಂದ ಅಲಂಕೃತವಾದ ವನವನ್ನು ನೋಡಿದೆ....
ಎಂತಹ ಸೊಬಗೆಂದು ಹಾಡಿ ನಲಿದಾಡಿದೆ.
ನಾ ನೋಡಿದ ವನವನ್ನು ನೀ ನೋಡ ಬಯಸುವೆಯಾ?
ಕಣ್ಣರಳಿಸಿ ನೀನಿರುವ ಜನ್ಮಭೂಮಿಯ ನೋಡುವೆಯಾ?
ವಿವಿಧ ಮತಗಳ ಆಗರ
ವಿವಿಧ ಧರ್ಮಗಳ ಸಾಗರ
ಇದೆಲ್ಲವು ವಿವಿಧತೆಯಲ್ಲಿನ ಏಕತೆಯ ಸಾರ...
ಈ ಭಾರತ ಮಾತೆಯ ಕೊರಳ ಹಾರ. 🇮🇳-
ಬತ್ತಿ ಹೋದ ಬಾವಿಯಲ್ಲೂ ನೀರು ಉಕ್ಕಿ ಬಂದರೆ
ಕೆಟ್ಟ ಕಾಡ ನಡುವೆ ಒಂದು ಪುಟ್ಟ ನಾಡು ಸಿಕ್ಕರೆ
-
ನಾಡೆಲ್ಲ ಹುಡುಕುತ್ತ ಕಾಡೊಳಗೆ ಬಂದದ್ದು ಸಹ ಗೊತ್ತಾಗದೆ
ಮತ್ತೆ ಮತ್ತೆ ನಾಡು ಕಾಡೆಲ್ಲ ಅಲೆದರು ನನ್ನವನು ಇರುವ
ಜಾಗವು ಕಣ್ಣಿಗೆ ಮಾತ್ರ ಕಾಣದಾಯ್ತು ನನಗೆ ಈ ಸಮಯ..-
ಹಾರಿಹೋಗೊ ಮುನ್ನ ನಮ್ಮ ಪ್ರಾಣ ಜ್ಯೋತಿ
ಹಾರಿಸೋಣ ಸಾಧನೆ ಗೈದು ನಮ್ಮ ಬಾವುಟದ ಕೀರುತಿ-
ಗಿಡ-ಮರಗಳ ಮೀರಿ
ಆಕಾಶ ಸೇರಿ
ಹಕ್ಕಿ ಹಾರಿತು ಕನಸುಗಳ ತೂರಿ
ಬಿಟ್ಟು ಬದುಕಿಲ್ಲ ಕಾಡನು
ಕಡಿದು ಮಾಡಿಹೆವು ನಾಡನು
ಇದ ಬಂದು ಭಗವಂತನು ಕೇಳನು
-
ಕುವೆಂಪು ಬೇಂದ್ರೆ ದಾಸರು
ಶರಣರ ಕವಿಗಳ ಸಿರಿತವರು
ಶ್ರೀಗಂಧ ಬೀಟೆ ತೇಗ ತೆಂಗು ಕಂಗು
ನಂದಿ ಆಲ ಬೇಲ ವೃಕ್ಷಗಳ ತವರು
ಸೇವಂತಿ ಸಂಪಿಗೆ ಮಲ್ಲಿಗೆ ಜಾಜೀ
ಚೆಂಡು ಹೂ ಚೆಂಗುಲಾಬಿಗಳ ತೋಟ
ಹುಲಿ ಹುಲ್ಲೆ ಕರಡಿ ಕಸ್ತೂರಿಮೃಗ
ಆನೆ ಆಮೆಗಳು ನಾಯಿ ನರಿಗಳ ಆಟ ಕೂಟ
ಗಿಳಿ ಗೀಜಗ ಲಾವಿಗ ಗಿಡುಗ ಗರುಡ
ಪಾರಿವಾಳ ನವಿಲು ಕೊಗಿಲೆಗಳ ಸಂಗೀತ ಮೇಳ
ಹಲ್ಮಿಡಿ, ಕಪ್ಪೆಆರ್ಯಭಟ್ಟ,
ಲಕ್ಕುಂಡಿಯ ಕುರುಹು ಕನ್ನಡ ಶಾಸನಗಳು
ಎಷ್ಟು ವರ್ಣಿಸಿದರೂ ಮಗಿಯದ
ಸಂಪತ್ತು ಕನ್ನಡಿ ಕನ್ನಡದ್ದು-
ಆಗಿದ್ದು ಆಗಲಿ ನಾನಿರುವೆ
ಕನ್ನಡ ನಾಡಿನ ಮಣ್ಣಲ್ಲಿ
ಎನ್ನಡ, ಎಕ್ಕಡ ಎಂದು ಬಂದವರಿಗೆ
ಕಲಿಸಿ ಕನ್ನಡ ಕಂಪು ತುಂಬುವೆ ಅವರುಸಿರಿಗೆ
ಪ್ರಾಣವೇ ತುಂಬಿದೆ ಈ ನಾಡು
ಉಸಿರೇ ನೀಡಿದೆ ಈ ಬೀಡು
ಜೈ ಕನ್ನಡ ನಾಡು..||
ಕರಕುಶಲ ಆಭರಣವು ನಾಡ ವೈಭವವು
ಕಂಗೊಳಿಸಿದೆ ಕಣ್ತುಂಬುತ ಬೆಟ್ಟ, ಮಂದಿರವು
ಸಾಗರ ಹೊಳೆ ನದಿಗಳಲ್ಲೆಲ್ಲ ಹರಿದಿದೆ ಕನ್ನಡ
ಗುಡ್ಡ, ಕಾಡು ಗಿಡಮರಗಳಲೆಲ್ಲ ಬೆಸೆದಿದೆ ಕನ್ನಡ
ಸಹೃದಯಿಗಳ ತವರೂರು ಈ ಕನ್ನಡ ನಾಡು
ಸಹಬಾಳ್ವೆ ಸಮಾನತೆಯ ಸುಂದರ ಬೀಡು
ಜೈ ಕನ್ನಡ ನಾಡು..||
ಹಿಡಿದ ಕೈ ಬಿಡೆವು ಎಂದು ಯಾರೇ ಆದರು
ಹಸಿದ ಹೊಟ್ಟೆಗೆ ಊಟ ನೀಡುವೆವು ಏನೆ ಅಂದರು
ನೀರೆ ಕೊಟ್ಟಿರುವೆವು ಸ್ನೇಹದಿ ಬೆರೆತಿರುವೆವು
ಯಾರೇ ದೇಹಿ ಅಂದ್ರೂ ದಾನ ಮಾಡಿರುವೆವು
ಇನ್ನೇಕೆ ಆವೇಶ ಸರಿಸು ನಿನ್ನ ಸಂಕೋಚ
ಹೆಮ್ಮೆಯಿಂದ ಹೇಳು ನಂದು ಕನ್ನಡ ನಾಡು
ಎದೆ ಉಬ್ಬಿಸಿ ಹೇಳು ನಾ ಹೆಮ್ಮೆಯ ಕನ್ನಡಿಗನೆಂದು
ಜೈ ಕನ್ನಡ ನಾಡು..|| ಶಿವಸೂರ್ಯ..🌟-
ಗಾಯಕನಾಗುವ ಆಸೆ ಹೊತ್ತ ಮೂಗ
ಚಿತ್ರಕಾರನಾಗುವ ಬಯಕೆಯಲ್ಲಿ ಕುರುಡ
ಸಂಗೀತ ನುಡಿಸುವಲ್ಲಿ ಕಿವುಡ
ಇದು ನಮ್ಮವರಲ್ಲಿ ಮಾತ್ರ ಮೂಢ..
ಕಾರಣ...
ಸೋಮವಾರ ಶಿವನ ಸ್ಟೇಟಸ್
ಗುರುವಾರ ರಾಯರ ಸ್ಟೇಟಸ್
ಶನಿವಾರ ಹನುಮಂತ ಅಂತೂ ಮಿಸ್ಸಿಲ್ಲ
ಸ್ಪೇಷಲ್ ಊಟ ತಿಂದ್ರೆ ಕಾಣಿಸದೇ ಇರೊಲ್ಲ
ಯಾಕಿಂಗೆ...
ನಮ್ಮ ಸಂಪ್ರದಾಯಗಳ ಕಡೆಗಣಿಸಿ
ಯಾರದ್ದೊ ಆಚರಣೆಗಳಿಗೆ ಮಣೆಹಾಕಿ
ಕುಣಿಯಬೇಡಿ ಕುರುಡರಂತೆ
ಕಿರುಚಬೇಡಿ ಕಿವುಡರಂತೆ
ಕೂರಬೇಡಿ ಮೂಗರಂತೆ
ಬದಲಾಗಿ ನಮ್ಮ ತನಕ್ಕಾಗಿ
ಬದಲಾವಣೆ ಅವಶ್ಯಕತೆ ಇದೆ ನಾಡಿಗಾಗಿ;-