Tanushree Hugar   (Shree)
311 Followers · 45 Following

read more
Joined 7 August 2018


read more
Joined 7 August 2018
9 MAY 2020 AT 21:37

ಅರಳಿ ಭಾವಾನ್ವೇಷ
ಆಗಲಿ ಕಾವ್ಯ-ಸಂಘರ್ಷ

-


6 MAY 2020 AT 8:19

ಕವಿತ್ವದ ಜಗವೇ ಚಕ್ರವ್ಯೂಹ
ಸಿಲುಕಿ ಮತ್ತೆ ಬರಲಾಗದ ಸ್ನೇಹ

-


26 APR 2020 AT 11:36

ಅಕ್ಷರಗಳಲ್ಲಿಯೇ ನನ್ನ
ಮನವ ಸಿಂಗರಿಸೋ
ಕಾವ್ಯ ನೀನು.
ನಿನ್ನ ಪ್ರೀತಿಯ ಚಿಪ್ಪಿನಲ್ಲಿ
ನೀರಿನ ಹನಿಯಾಗಿರುವ
ನನ್ನನ್ನು ಮುತ್ತಾಗಿಸುವ
ಪ್ರಕೃತಿಯ ಕಥೆಯು ನೀನು.
ನೀ ಮಳೆಯಾದರೆ
ನಿನ್ನ ಸ್ಪರ್ಶಿಸಿ ನಲಿವೆ
ನೀ ಅಲೆಯಾದರೆ
ಅಲ್ಲಿಯೇ ಮುಳುಗಿ
ಆಡುವೆ.

-


13 APR 2020 AT 12:53

ಮನವೆಂಬ ಮಾಮರದಿ
ಕನಸೆಂಬ ಕೋಗಿಲೆ ಹಾಡುತಿದೆ,
ಉಲಿದಾಡುತಿದೆ.
ಸೊಗಸಾದ ಸ್ವರಲಹರಿ
ಬದುಕೆಂಬ ಭಾವದಿ ನಲಿಯುತಿದೆ,
ಮನ ತಣಿಸುತಿದೆ.

-


9 APR 2020 AT 23:48

ಬಂಧಿಯಾಗಲು ಬಾರದ ಬರಹಗಳು
ಮುತ್ತಾಗಲು ಮನಸಿಲ್ಲದ ಮಾತುಗಳು
ಕಾವ್ಯವಾಗಲು ಕಾತುರವಿಲ್ಲದ ಕಾಗುಣಿತಗಳು
ಅರಳಲು ಅರಿವಿಲ್ಲದ ಅಕ್ಷರಗಳು
ಮೌನದಿ ಮುನಿಸಿಕೊಂಡಿವೆ
ಯೋಚನೆಯ ಯಾನದಿ
ಹುದುಗಿಕೊಂಡಿವೆ.

-


23 FEB 2020 AT 8:26

ಅಕ್ಷರಗಳಿಗೆ ವೈವಿಧ್ಯತೆಯ ಜೀವ ತುಂಬಿಸೋ ಕಲೆಗಾರರಿಗೆ
ವಿಚಾರಗಳಿಗೆ ಭಾವಗಳ ಬಣ್ಣ ನೀಡೋ ಸೃಜನಾತ್ಮಕರಿಗೆ
ಎಲ್ಲರ ಸೊಗ ಬಯಸೋ ಸಹೃದಯಿಗಳಿಗೆ
ಹುಟ್ಟು ಹಬ್ಬದ ಶುಭಾಶಯಗಳು.
ನಿಮ್ಮ ಬರವಣಿಗೆ ನಿಮ್ಮನ್ನು ಉತ್ತುಂಗಕ್ಕೇರಿಸಲಿ. ಒಳಿತಾಗಲಿ ತಮಗೆ.
👍👍👍

-


7 FEB 2020 AT 9:14

ಶುಭಾಶಯ ...ಶುಭಾಶಯ ..
ನಲಿವಿನಲಿ ನಳನಳಿಸುವ
ಒಲವಿನಲಿ ಓಲೈಸುವ
ಸಂಸ್ಕೃತಿಯ ಸಾಹಿತಿಗೆ ಶುಭಾಶಯ.. ಶುಭಾಶಯ
ಕಾವ್ಯದ ಕಲರವದಲಿ
ಹಾಸ್ಯದ ಹೊನಲಿನಲಿ
ಸವಿಯ ಸಾರುವ ಸಾಹಿತಿಗೆ ಶುಭಾಶಯ ಶುಭಾಶಯ
ಮುಗ್ಧತೆಯಲೇ ಮಾರ್ದನಿಸುವ
ನಾವೀನ್ಯತೆಯಲೇ ನರ್ತಿಸುವ
ರಮ್ಯತೆಯಲಿ ರಾರಾಜಿಸುವ ರಶ್ಮಿಗೆ ಹುಟ್ಟು ಹಬ್ಬದ ಶುಭಾಶಯ ...ಶುಭಾಶಯ ...

-


22 OCT 2019 AT 22:29

ಕನ್ನಡಿಗರ ಹೃದಯದಿ ನೆಲೆನಿಂತ ಪಾತ್ರ.
ರಣರಂಗದಿ ರಾರಾಜಿಸಿದ ಕನ್ನಡದ ಸ್ವಪ್ನ
ಪಲ್ಲವರ ಪಾಲಿಗೆ ಇವನೇ ದುಸ್ವಪ್ನ.
ನಾ ನೆಚ್ಚಿದ ಆ ಪಾತ್ರವದು ಅಮರ.
ಈ ಮನ ಮೆಚ್ಚಿದ ಪಾತ್ರವೇ "ಮಯೂರ".

-


21 OCT 2019 AT 18:45

ಆ ಅರ್ಥಪೂರ್ಣ ಸಾಲುಗಳೇ ಅಂದ.
ಆಹ್ಲಾದಕರ ಸಂಗೀತದ ಸಾಂಗತ್ಯ
ಸಂಸ್ಕೃತಿಯ ಮರೆಯದ ಸಾಹಿತ್ಯ.
ಜೀವನದ ಜಡಗಳಲ್ಲಿಯೂ ಚೈತನ್ಯ ಉಕ್ಕಿಸುತ್ತಿದ್ದ
ಅಪೂರ್ವ ಅಕ್ಷರಗಳ ಆಗಮ್ಯ ಖಜಾನೆಯಂತಿದ್ದ,
ಹಳೇ ಹಾಡುಗಳು ಮರೆಯಲಾಗದ ಮಾಣಿಕ್ಯಗಳು.

-


15 OCT 2019 AT 18:41

She teaches the things to be pretty.
She teaches the humans to serve in pity.
All her dreams are filled with nationalism.
Her heart is pounding in the name of patriotism.
Wishes to such an angel.
To fly high like an eagle .
Wishes to the soul who fills joy to each day.
Pretty soul Preeti, wishing you
A VERY HAPPY BIRTHDAY.
🎂🎂🎂

-


Fetching Tanushree Hugar Quotes