ನನ್ನ ಜೀವನದ ನೈಜ ಕಥೆ
(ಕ್ಯಾಪ್ಷನ್ ಓದಿ)👇🏼👇🏼-
ಅಪ್ಪ,
ಸುಡುವ ಬಿಸಿಲಿಗೆ
ಕೊರೆವ ಚಳಿಗೆ
ಸುರಿದ ಮಳೆಯನ್ನೂ ಲೆಕ್ಕಿಸದೆ
ಸಂಸಾರವೆಂಬ ಕಡಲನ್ನು
ಅಂತಸ್ಥೈರ್ಯದಿ ದಡ ಸೇರಿಸೋ
ದೋಣಿಯ ನಾವಿಕನಂತೆ ನೀ....!
ಜೀವನದುದ್ದಕ್ಕೂ ಕಡು
ಕಷ್ಟಗಳನ್ನು ಸಹಿಸಿ
ತನ್ನವರಿಗೆಲ್ಲ ನಗುವೆಂಬ
ಸವಿಸಿಹಿಯ ಹಂಚಿದ
ಬದುಕೆಂಬ ಕಾದಂಬರಿಗೆ
ಮೂಕನಾಯಕನು ನೀ....!-
ಬದುಕಿನ ಪಯಣವು ಸಾಗಿದೆ ನಿತ್ಯವು
ಪದವಿಯ ಹರಸುತ ಹಳಿಗಳಲಿ
ಚದರದಿ ಗಮನಿಸಿ ಹಳಿಯದು ತಪ್ಪಿದರೆ
ಹದವಿರದೆ ಉರುಳಿ ಅಂತ್ಯದಲಿ..
ಜೀವನವೀ ಸಾಗಿದೆ ಏಳುಬೀಳಿನ ಹಾದಿ
ಭಾವದಲೆಯ ಅರಸಿ ಹೊರಟಿದೆ
ದೇವರ ಕೃಪೆಯಲಿ ಮುಂದೆ ನಡೆಯುತ
ಸಾವಿರ ಭಾರಿಯೆ ಚಿಂತಿಸುತಿದೆ...
ರೈಲಿನ ಹಳಿಯಂತೆ ನಮ್ಮೀ ಬದುಕದು
ಶೈಲಿಯ ಹೊಸತರ ಕಲೆಯಂತೆ
ಸಾಲಲಿ ನೆರೆದಿದ ಬದುಕಿನ ಬವಣೆಯು
ಹಾಲಿನ ಮಿಶ್ರಿತದ ನೀರಂತೆ...
ಬಾಳಿನ ನೋವದು ಜೊತೆಯಲಿ ಬಂದಿದೆ
ತಾಳುವ ಗುಣವದು ಮರುಗಟ್ಟಿ
ಮಾಳಿಗೆ ಮನೆಯದು ಸೋರುತ ನಿಂತಿದೆ
ದಾಳಿಯ ಮಾಡಲು ಕಳೆಗಟ್ಟಿ...
ಮುಂಜಾನೆಯ ಶುಭ್ರದಿ ಹೊಳೆವ ಜೀವನ
ಮಂಜಿನ ಹನಿಯಲಿ ಬೆರೆಯುತಿದೆ
ಗಂಜಿಯ ಕುಡಿದರು ಸಂಜೆಯು ಪಾವನ
ಬಂಜರು ಬದುಕಲು ಅರಳುತಿದೆ..!-
ಜೀವನ ಅನ್ನೋ
ಮೂರು ಪುಸ್ತಕದಲ್ಲಿ
ಪ್ರೀತಿನೇ ಒಂದು ಪುಸ್ತಕ ಅಲ್ಲ,
ಯಾವದೋ ಒಂದು ಪುಸ್ತಕದ
ಒಂದು ಅಧ್ಯಾಯ ಅಷ್ಟೇ...-
ಜೀವನದಾಗ ಆದಷ್ಟು
ಎಲ್ಲವನ್ನ ಪಡ್ಕೊಳ್ಳೋ
ಪ್ರಯತ್ನ ಮಾಡ್ರಿ.
ಯಾಕಂದ್ರ,
ಜೀವನದಾಗ ಕಳ್ಕೊಳ್ಳೊದು
ಇನ್ನು ಬಾಳ್ ಐತಿ...-
ನಿನ್ನ ನೆನಪಿನ ಮುಳ್ಳೇ
ಹೃದಯದಾಳಕ್ಕೆ ಚುಚ್ಚಿರುವಾಗ
ಇನ್ನಾವ ಹೊಸ ನೆನಪುಗಳ
ಮೊರೆ ಹೋಗಲಿ ನಾನು-
ಕನಸುಗಳ ಮಾರಾಟ
ಕಣ್ಣಿಗೂ ಕಣ್ಣೀರಿಗೂ ಕಾದಾಟ
ನೋವಿಗೂ,ನಲಿವಿಗೂ
ನಿನ್ನದೇ ನೆನಪು.
ಹೇಳಿಕೊಳ್ಳಲು ನೀ ಬಳಿ ಇಲ್ಲ
ಕೊಟ್ಟು ಹೋಗಿರುವೆ
ಖಾಲಿಯಾಗದಷ್ಟು
ನೆನಪುಗಳ ಸಾಲ..-
ಜೋಡಿ
ಹಕ್ಕಿಗಳಂತೆ
ಒಲವಿನ ಜಾಡು ಹಿಡಿದು
ಸಾಗುವ ಬದುಕಿನ ದೂರ
ಜೀಕುತ ಕಲ್ಪನೆಯ
ಜೋಕಾಲಿಯಲಿ
ಜೀವದೊಲವಾಗಿ
ಜಯಿಸುತಿದೆ.!
ಬಾಳಿನ
ಸೂತ್ರ ಹಿಡಿದು
ಜೋಪಾನ ಮಾಡುತ್ತ
ಒಲವ
ಜೋಪಡಿ ಕಟ್ಟಲು
ಈ ಭಾವದೊಲುಮೆ
ಹಾತೊರೆಯುತಿದೆ.!!-