ಶ್ರದ್ಧೆಯಿಂದ ಕೆಲಸಮಾಡಬೇಕು
ಅದರಂತೆ ತಾಳ್ಮೆಯು ಅತಿಮುಖ್ಯ
ಕೆಲಸದ ಬಗ್ಗೆ ನಂಬಿಕೆ ಇರಲಿ
ಖಂಡಿತ ಫಲ ಸಿಕ್ಕೇ ಸಿಗುತ್ತೆ-
ಜವಾಬ್ದಾರಿ ಜಗತ್ತಲ್ಲೆ ಹೆಚ್ಚು ಭಾರವಾದದ್ದೆಂದು..
ಹೊತ್ತು ನಡೆದಾಗ ಬದುಕು ಪೂರ್ಣವಾಗುತ್ತೆಂದು.-
ಎಷ್ಟೊಂದು ಭಾರ ನಿಭಾಯಿಸಿಕೊಂಡು ಹೋಗುವುದು,
ನಿಜಕ್ಕೂ ನಮ್ಮ ಹೆತ್ತವರು ಮತ್ತು ಜೀವನಕ್ಕೆ ಆಧಾರವಾಗಿರೋ ವ್ಯಕ್ತಿಗಳಿಗೆ ನಾವು ಧನ್ಯರಾಗಿರುವುದು ಉತ್ತಮವಾದುದು,
ಜವಾಬ್ದಾರಿ ಎನ್ನುವ ಪದ ಜೀವನದ ಪಾಠ ಕಳಿಸುವುದು,
ಭವಿಷ್ಯವನ್ನು ರೂಪಿಸುವುದು.-
ಸತ್ಯ!!
ಆ ಜವಾಬ್ದಾರಿಯಿಂದ ಬದುಕು ಏನೆಂದು ತಿಳಿಯಿತು
ಜೀವನದಲ್ಲಿ ಸಿಹಿ ಕಹಿಯ ಅನುಭವವಾಯ್ತು
ಬದುಕೇ ಹೀಗೆ ಜವಾಬ್ದಾರಿ ಹೆಚ್ಚಾದಾಗ ಕನಸುಗಳ ಮರೆಯಬೇಕು.-
ಸಮಯಾನುಸಾರವಾಗಿ ನಿಭಾಯಿಸುವುದು ಕಷ್ಟದ ಸಂಗತಿ ಆದ್ರೂ ನಿಭಾಯಿಸಲೇ ಬೇಕು ಹೇಗಾದ್ರು ಮಾಡಿ.,
ಒಟ್ನಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗುತ್ತದೆ,-
ಇಂದಿನ ಪರಿಸ್ಥಿತಿಯಲ್ಲಿ ಬದುಕುವುದು
ಎಷ್ಟು ಕಷ್ಟವೆಂದು ತಿಳಿಯಿತು.-
ನನ್ನಲ್ಲಿ ಬೇಜವಾಬ್ದಾರಿ ಇಲ್ಲ ಅಂತಾ
ನನಗೆ ಗೊತ್ತಿಲ್ಲದೆಯೇ
ನಾನು ನನಗಾಗಿ ಅಲ್ಲ
ನಮ್ಮೋರಿಗಾಗಿ ಹಗಲಿರುಳೆನ್ನದೆ
ದುಡಿಯುತ್ತ ಇನ್ನೊಬ್ಬರ
ಖುಷಿಯಲ್ಲಿಯೇ ನನ್ನ
ಖುಷಿಯನ್ನು ಕಂಡು
ಭಗವಂತ ದಯಪಾಲಿಸಿದ
ಈ ಸುಂದರ ಬದುಕಿನ
ಅರ್ಥವ ಅರಿಯುತ್ತ
ನೆಮ್ಮದಿಯ ಬದುಕು
ಕಟ್ಟಿಕೊಳ್ಳುವತ್ತ ಹೆಜ್ಜೆ ಇಡಬೇಕೆಂದು-
ನಾ ಕನಸು ಕಾಣುವ ಸಮಯದಲ್ಲಿ ಪೋಲಿಯಾಗಿದ್ದೆ
ಆ ಕಂಡ ಕನಸು ನನಸಾಗುವ ಹೊತ್ತಿಗೆ ನಾನೊಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಬೇರೆಯವರ ಕನಸು ನನಸಾಗಿಸಲು
ಹಗಲುರಾತ್ರಿ ಎನ್ನದೆ ದುಡಿಯುತ್ತಿದ್ದೆ
ನಿತ್ಯವು ಸಂತೋಷದಲ್ಲಿ ತೇಲಾಡುತ್ತಿದ್ದೆ ಇದೆ ಅಲ್ವಾ ಜೀವನ!
-