ರೇnu baರ್ಕಿ  
1.7k Followers · 76 Following

read more
Joined 25 October 2019


read more
Joined 25 October 2019
26 JUN AT 21:24

ಬದುಕನ್ನು ಮರು ಪ್ರಾರಂಭಿಸಲು
ಮೊದಲು ನೋವನ್ನು ಮರೆಯಬೇಕು
ನಗುವನ್ನು ಹಂಚಬೇಕು .

-


18 JUN AT 20:31

ಬದುಕಿನ ಮೌಲ್ಯ ತಿಳಿಯದೆ ಬದುಕು ಸರಳವಲ್ಲ

-



ಬದುಕಲ್ಲಿ ನಿಮ್ಮ ಯೋಚನೆಗಳಿಗೆ ಬೆಲೆ ಕೊಡಿ
ಯಾರದ್ದೋ ಮಾತಿಗೆ ಕಿವಿಗೊಟ್ಟರೆ
ಕುಣಿತ ನಿಮ್ಮದು ತಾಳ ಇನ್ಯಾರದ್ದೋ ..

-


27 FEB AT 22:22

ಪ್ರೀತಿಯ ಪದವ
ಕಟ್ಟಿ ಹಾಡಲೇ ಜೋಕಾಲಿ
ಪ್ರೀತಿಪಾತ್ರ ನೀನು
ಖುಷಿಯಿಂದ ಜೀಕು ಬದುಕಲಿ ..

-


24 FEB AT 22:11

ಬಿಟ್ಟು ಹೋದವರನ್ನು
ಹಿಂತಿರುಗಿ ನೋಡಬೇಡಿ
ಪ್ರೀತಿ ಗಿರಿಯ ಮೇಲಿರಲಿ
ಗುಲಾಮಗಿರಿಯಲ್ಲಿ ಅಲ್ಲ ..

-


24 FEB AT 19:07

ಒಬ್ರನ್ನ ಜಾಸ್ತಿ ಹಚ್ಕೊಳೋದು
ಅವ್ರು ಬಿಟ್ಟು ಹೋದಾಗ
ತುಂಬಾ ದುಃಖ ಪಡೋದು.,
ಅವ್ರಿಗೆ ಬೇಡವಾದ ನೀವು
ನಿಮಗಾಗಿ ನಿನ್ನವರಿಗಾಗಿ ಬದುಕು.
ಜೀವನಕ್ಕೆ ಕನಿಷ್ಠ ವ್ಯಕ್ತಿಗಳು ಸಿಗ್ತಾ ಇರ್ತಾರೆ
ಆದರೆ ಜೀವನ ಕನಿಷ್ಠವಲ್ಲ ..

-



ನೀನಿಲ್ಲದಿರೆ ಬದುಕಲಿ
ನಗುವಿನ ಕೊರತೆ ,
ಸರಳತೆಯ ಬದುಕಿಗೆ
ಪ್ರೀತಿಯ ಒರತೆ...

-


19 FEB AT 21:30

"ಮರೆಯಾದೆ ಏಕೆ"
ನಗಿಸಲು ಹೊರಟು ನಗದಾದೆ ಏಕೆ
ಮೆರೆಸಲು ನಿಂತು ಮೌನವಾದೆ ಏಕೆ..?

ದುಃಖವನ್ನು ನೀಡದ ನೀನು
ಹನಿಯಾದೆ ಏಕೆ..?
ನನಗಾಗಿ ಬದುಕಿ ಮರೆಯಾದೆ ಏಕೆ?

ನೆನಪು ಕೊಟ್ಟು ನೆಪವಾದೆ ನೀನು
ಉಸಿರು ಹಾರುವ ಮುನ್ನ
ಮರಳಿ ಬರಬಾರದೇನು..

-


15 FEB AT 23:27

ಬಟ್ಟೆಗಾಗಿ
ಹಾರುವ ಮೊದಲೇ
ಗೂಡಲ್ಲಿ ಉಸಿರುಗಟ್ಟಿಸಿದರು
ಮೋಸವೆ ತಿಳಿಯದ
ಹುಳುವಿಗೇನು ಗೊತ್ತು
ಬೆತ್ತಲೆ ಲೋಕದ ಕತೆ..
ಮೆರೆದು ಬದುಕುವ
ಮನುಜನಿಗೇನು ಗೊತ್ತು
ಉಸಿರುಗಟ್ಟಿ ಸಾಯುವ
ಹುಳುವಿನ ವ್ಯಥೆ...

-


15 FEB AT 22:58

ನಿನ್ನ ಒಣ ಹೃದಯವ ಮೆದುಗೊಳಿಸಲು ಈಡೀ ಮಳೆಗಾಲವೇ ಬೇಕಾಯಿತು
ತಿಳಿಯಾಗುವುದರಲ್ಲೇ ಮತ್ತೆ ಬೇಸಿಗೆ ಬಂದಿತ್ತು ..

-


Fetching ರೇnu baರ್ಕಿ Quotes