QUOTES ON #ಗಡ್ಡ

#ಗಡ್ಡ quotes

Trending | Latest
6 JUN 2019 AT 19:44

ಗಡ್ಡ ಬಿಟ್ಟಿರೋರೆಲ್ಲಾ ದೇವ್ದಾಸ್ಗಳಲ್ಲ,
ಮೀಸೆ ಬಿಟ್ಟೋರ್ಗೆಲ್ಲಾ ಮೀಟ್ರಿರಲ್ಲ,
ಕ್ಲೀನ್ ಶೇವ್ ಮಾಡಿರೋರೆಲ್ಲಾ ಸಾಚಾಗಳಲ್ಲ.

ಹೀಗಿರುವಾಗ!
ತಲೆ ಕೂದ್ಲ್ ಉದ್ರಿರೋ ಹುಡ್ಗೂರ್ನ,
ಹುಡ್ಗೀರ್ ಯಾಕ್ ಇಷ್ಟಪಡಲ್ಲ?

-



ಈ Lock down ಅಲ್ಲಿ ಬೆಳೆದ ಗಡ್ಡ,
Officeಗೆ ಹೋಗಲು ಬರುವುದಾ ಅಡ್ಡ 🤔

-



ಕುರುಚಲು ಗಡ್ಡ ಚನಾಗಿ ಕಾಣುವುದು ಎನ್ನುವರು
ಮುತ್ತಿಡಲು ಹೋದರೆ ಚುಚ್ಚುವುದು ಎಂದೇಳಿ ದೂರ ತಳ್ಳುವರು!🤦‍♂️

-


2 SEP 2018 AT 22:42

ಅಜ್ಜಿ: ಪಾಪ ಗಡ್ಡ ತಗೀಲಾ, ಚನ್ನಾಗ್ ಕಾಣ್ಸಕಿಲ್ಲ.

ತಿಮ್ಮ: ಇದು ಪ್ಯಾಶನ್ ಕಣಜ್ಜಿ ಪ್ಯಾಶನ್.

ಅಜ್ಜಿ: ಅದೇನ್ ಪಾಶುನ್ನೊ! ಗಡ್ಡದ ಬದ್ಲಿಗೆ ಒಂಡೆರಡು ಗಿಡಾನಾದ್ರು ಬೆಳ್ಸು!

-


26 NOV 2019 AT 19:40

ಹುಡುಗರು ಸಾಮಾನ್ಯವಾಗಿ ಬಿಡುವರು ಗಡ್ಡ
ಹುಡುಗಿಯರು ತೋಡುವರು ಅಸಾಮಾನ್ಯ ಖೆಡ್ಡ..! 🤦‍♂

-


26 NOV 2019 AT 23:26

ಹುಡುಗರು ಸೇರುವರು ಸಾಮಾನ್ಯವಾಗಿ ಅಡ್ಡ
ಹುಡುಗಿಯರನ್ನ ಕಂಡರೆ ಚುಡಾಯಿಸುವರು ನಿಂತು ಅಡ್ಡ.!

-


26 NOV 2019 AT 15:37

ಅದೇ ಗಡ್ಡಕ್ಕೆ ಮರುಳಾಗಿ ಮುರಳು
ಮಾಡುವ ಕಲೆ ನಿಮಗೆ ಕರಗತ, ಮನದಾಸೆಯ ಗುಡಿಸಲನು ಗುಡಿಸಿ ಗುಂಡಾಂತರ ಮಾಡಿ
ಕುರುಚಲು ಗಡ್ಡವನು ಇನ್ನೂ ಸ್ವಲ್ಪ ಬಿಡುವ ಹಾಗೆ ಹುಚ್ಚು ಹಿಡಿಸುವವರು ನೀವೇ ಅಲ್ವಾ..!

-


26 NOV 2019 AT 15:25

ಜೊಂಪೆ ಜೊಂಪೆ ಗಡ್ಡವ ಬೆಳೆಸಿ
ನಿಮ್ಮ ಸೌಂದರ್ಯವನೆಲ್ಲಾ ಅದರಡಿ ಮರೆಮಾಚಿ
ಕಣ್ಣ ಹೊಳಪಲೆ ಹುಡುಗಿರ ಸೆಳೆಯುತಿರುವಿರಲ್ಲಾ ಹುಡುಗರೆ
ಹುಡುಗಿ ಮೆಚ್ಚಿ ನಿಮ್ಮ ಜೊತೆ ಬಂದರೆ ಗಡ್ಡದಲೆ
ಪುಟ್ಟ ಗುಡಿಸಲು ಕಟ್ಟುವ ಯೋಜನೆ ಇದೆಯೆ...?

-


20 NOV 2018 AT 0:17

ಗಡ್ಡ ಬಿಟ್ಟಿರುವೆ ನಿಜ..! ಅದು ಅವಳ ಚುಂಬನದ ಉಲ್ಕಾಪಾತಗಳಿಂದುಂಟಾದ ಕೆನ್ನೆಯಮೇಲಣ ಕುಳಿಯ ಗುರುತುಗಳು ಕಾಣದಂತೆ ಹಾಕಿದ ಬೇಲಿಯಂತೆ ಇಂದಿಗೂ ರಕ್ಷಿಸುತಿದೆ.!

-



ಕಿವಿಯಲ್ಲಿ ಇಟ್ಟುಕೊಳ್ಳುತ್ತಾ ಇಯರ್ ಬಡ್ಡ
ಕರೆಯುತ್ತಾಳೆ ನನ್ನಾಕೆ ಒಮ್ಮೊಮೆ ಬಿಡ್ಡ
ಯಾವಾಗಲು ಹೇಳುತ್ತಾಳೆ ನೀ ತುಂಬಾ ದಡ್ಡ
ಅದಕ್ಕೆ ಬಿಟ್ಟಿರುವೆ ಚೂರು ಜಾಸ್ತಿನೆ ಗಡ್ಡ..!!

-