ಈ ಕಾಲದಲ್ಲಿ
ಕಿರೀಟ ಸೊಟ್ಗ್ ಇದ್ರು
ಲಂಗೋಟಿ ನೆಟ್ಟ್ಗ್ ಇರಬೇಕು!
ನಮಸ್ತೆ ಮಾಡೋ
ದೇವಸ್ಥಾನದಲ್ಲಿ ಆಗ್ಲಿ
ನಡೆದಾಡುವ
ದಾರಿಯಲ್ಲಿ ಆಗ್ಲಿ
ಎಲ್ಲರ ಕಣ್ಣು
ಗಂಟೆ ಮೇಲೆ ಇರುತ್ವೆ!-
"ಗೆಲುವು ಸಂಭ್ರಮಿಸಲು
ಮಾತ್ರವೇ ಸೀಮಿತವಾಗಿರುತ್ತದೆ.!
"ಆದರೆ ಸೋಲು ಸದಾ
ಎಚ್ಚರಿಕೆಯ ಗಂಟೆಯಾಗಿರುತ್ತದೆ.!-
ಜೀವನವೆಂಬ ತರಗತಿಯಲ್ಲಿ
ಗಂಟೆಗೊಂದು ಪಾಠ
ನಿಮಿಷಕ್ಕೊಂದು ಅನುಭವ
- ಸ್ನೇಹಿತರ ಬರವಣಿಗೆ-
..... ಗಂಟೆ.....
1.ಭಕ್ತಿಯಿಂ ಬಾರಿ ಸುವಾಗ ದೇವಾಲಯದಿ ಘಂಟೆ..
ಸಮಯದ ಪರಿ ಇರದು ಆದರೂ ಗಂಟೆಗಳ ಮೇಲೆ ಗಂಟೆ!. 😊
2.ಆ ಗಂಟೆ, ಈ ಗಂಟೆ ಗಳಿಗಿಂತ, ಸಧ್ಯಕ್ಕೆ ವಿದಿತ
ಗಿಡ-ಗಂಟೆ!
3. ರಂಟೆ-ಕುಂಟೆ ಹೊಡೆಯುವವಗೆ ಯಾಕೆ ಬೇಕು ಗಡಿಯಾರದ ಗಂಟೆ?
ಅವನಿರುವ ಎಂದೂ ಸೂರ್ಯನಿಗಂಟೇ!-
ಎದ್ದಿಲ್ಲ ಆದರೂ ಬೆಳಿಗ್ಗೆ ಗಂಟೆ ಒಂಭತ್ತು!
ಇಳಿದಿಲ್ಲ ನಿದಿರೆಯಾದರೂ ರಾತ್ರಿಯ ತೊಂಭತ್ತು!
😊😊😊-
ದೇವರಾಣೆಗೂ ದೇವ್ರು
ಮೇಲೆ ಇಲ್ಲ ನಂಬಿಕೆ ಆದ್ರೂ ಕೂಡ,
ಹಿರಿಯರ ಉಪದ್ರವಕ್ಕೆ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದೂ ಕೈಯಲ್ಲಿ ಗಂಟೆ!
ಮತ್ತೊಂದು ಕೈಯಲ್ಲಿ ಅರತಿತಟ್ಟೆ
ಇಡ್ಕೊಂಡು ಕುಲದೇವಿಯ ಆರಾಧನೆಯಲ್ಲಿ
ಬರಿ ಮೈಯಲ್ಲಿ ಮಗ್ನನಾಗಿರುವೆ.-
ದೇವರಿಗೆ ಜಾತ್ರೆಗಳಿಲ್ಲ
ಮದುವೆಯ ಗದ್ದಲಗಳಿಲ್ಲ
ಜಂಗುಮನ ಜಾಗಟೆಇಲ್ಲ
ಜೊ಼ೕಗಿಯ ಕೂಗಿಲ್ಲ
ಇವೆಲ್ಲವೂ ಮರಳಿಬರಬೇಕೆಂದರೆ
ನಾವು ಸರಕಾರದ ನಿಯಮ ಪಾಲಿಸೊಣ
ಕೊರೊನ ದಿಂದ ಮುಕ್ತಿಯೊಂದೊಣ-