ಅರಸುತ್ತಾ ಹೊರಟಿರುವೆ
ಎನ್ನ ಮನದರಸನ,
ಹರಸು ಕೃಷ್ಣಾ..!!-
ಯಾವ ನೆಲದಿಂದ ಹರಿದು ಬಂದು ಕೃಷ್ಣೇಯ ಒಡಲು ಸೇರಲು ರಮಣೀಯ ನರ್ತನದೊಂದಿಗೆ ಹುಕ್ಕಿ ಹರಿಯುತ್ತಿರುವ ನಮ್ಮೂರ ಕೆರೆ..
ಒಂದು ಪವಿತ್ರ ನದಿ, ಒಂದೇ ನೀರಿನಿಂದ ತುಂಬಿ ಪಾವನವಾಗಿರುವುದಿಲ್ಲ, ಅನೇಕ ಹಳ್ಳ-ಕೊಳ್ಳ , ಅನೇಕ ಊರುಗಳಿಂದ ನೀರು ಹರಿದು ಬಂದ ನದಿಯನ್ನ ಸೇರಿ ಪವಿತ್ರವಾಗಿದೆ..
ಕೊಚ್ಚೆಯನ್ನ ದಡದಲ್ಲಿ ಬಿಟ್ಟು ನೀರು ಪವಿತ್ರವಾಗಿದೆ,,ನಮ್ಮಲ್ಲಿರುವ ಕೆಟ್ಟ ಹವ್ಯಾಸಗಳನ್ನು ಬಿಟ್ಟು ನದಿಯಂತೆ ಪವಿತ್ರರಾಗೋಣ..-
ಹೇ ವರುಣದೇವ,
ಏಕಿಷ್ಟು ಕೋಪ ನಮ್ಮ ಮೇಲೆ,
ಮೊದಲು ಸೂರ್ಯ ದೇವ ಕೋಪಿಸಿದ
ತಾಳಿಕೊಂಡು ಬದುಕಿದೆವು,
ನಿನ್ನ ತಂಪು ಸಿಂಚನದಿಂದಾದ ನಲಿವು ಈಗಿಲ್ಲ,
ಎತ್ತ ನೋಡಿದಡತ್ತ ನಿನ್ನ ರೌದ್ರಾವತಾರವೇ,
ಮೂಕ ಪ್ರಾಣಿಗಳ ಆಹುತಿ ಪಡೆದೆ
ಗುಡಿ, ಮಸೀದಿಗಳ ದಿಗ್ಬಂಧನ ಮಾಡಿದೆ
ಮನೆ, ಮಠ, ಎಲ್ಲವುಗಳ ನುಂಗಿ ಹಾಕಿದೆ
ಎಲ್ಲೆಂದರಲ್ಲಿ ನೀರೇ ನೀರು
ಕೆಲವು ಕಡೆ ಮನುಜರನ್ನು ಸ್ವಾಹ ಮಾಡಿದೆ
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲೇನು
ನಿನ್ನಾರ್ಭಟ,ಅದೇನು ನಿಷ್ಕಾರುಣ್ಯ
ಹೇ ಗೋವರ್ಧನ,ಕುಂಭದ್ರೋಣ ಮಳೆಯಿಂದ
ನಿನ್ನವರ ರಕ್ಷಿಸಲು, ಕಿರು ಬೆರಳಿನಿಂದ ಬೆಟ್ಟವನ್ನೆತ್ತಿದ್ದೆ
ಇಂದು ನಿನ್ನ ಹೆಸರಿನ ನದಿಯ ಭಯಂಕರ ರೂಪ
ಕರುಣಾಕರನೇ, ವರುಣದೇವನನ್ನು ಶಾಂತವಾಗಿಸು
ದಿನದಿಂದ ದಿನಕ್ಕೆ ನಮ್ಮ ಬದುಕೇನೆಂದು ತಿಳಿಯದು
ನಮ್ಮನ್ನುಳಿಸು,ಅಳುವಿನಾಕ್ರಂದನ ನಿಲ್ಲುವ ಪೂರ್ವ.-
ನಿನ್ನ ಪಾದ ಸೋಕಲು ಮುಂಜಾವಿನಲರಳುವ ಮಲ್ಲಿಗೆಯ ಕಂಪೆನಿತುಧನ್ಯ
ಕವಲೊಡೆದ ತುಳಸಿಯ ಸವಿಚಿಗುರ ಸೋಕುವ ತಂಗಾಳಿಯದೆನಿತು ಧನ್ಯ
ಕೃಷ್ಣಾ ನಿನ್ನ ನಾಮವನುಲಿವ ನರರ ನಾಲಿಗೆಗಳದೆನಿತು ಪುಣ್ಯ.-
ಅಭಿನಂದನೆಗಳು ಪಾಟೀಲ್ ಜೀ 1610 ಬರಹಗಳ ಗಡಿ
ದಾಟಿದ ನಿಮಗೆ ಕೃಷ್ಣಾನ ನಾಮಾಂಕಿತ ಬಲು ಸುಂದರ
============🌹🌹🌹🌹🌹🌹===
ಎಲ್ಲಿರುವರೋ ನಾನರಿಯೆ
ಮನದನ್ನ ಪಿಸುಮಾತು ಸಿರಿಯ
ಅರಸಿದ ಕೃಷ್ಣಾನ ಲಕುಮಿನಂದ
ಗೋಪ ಬಾಲೆಯರ ಜೊತೆ
ಗೋವುಗಳನ್ನ ಕಾಯುತ್ತ
ಕಣ್ಣ ಮುಚ್ಚಾಲೆ ಆಟವಾಡುತ್ತ
ಅವಿತು ಹುದುಗಿದ ಬಾಲ
ಗೋಪಾಲ ನಂದ ಕುಮಾರ
ಕೀಟಲೆ ಮಾಡಿ ಮರವೇರಿ
ನಗುತ ಬಿದಿರಿನ ಕೊಳಲೂದಿ
ಹೂ ಮಾಲೆ ಸರ ಹೆಣೆದು
ಬೊಗಸೆ ಹೂಗಳ ಮೇಲೆರಚಿ
ನಗುತ ಸಖಿಯರ ಅಣಿಕಿಸುತ್ತ
ಸರಸ ಸಲ್ಲಾಪದಿ ಆಟವಾಡುತ
ಎಲ್ಲರ ಪ್ರೀತಿಯ ಸ್ನೇಹದಲ್ಲಿ
ಸಂತಸದಿ ನಲಿಯುತ್ತ ನೋವು
ಮರೆತು ಬೃಂದಾವನ ತುಂಬೆಲ್ಲಾ
ನಳನಳಿಸುತ್ತ ಮುಗಿಲ ಚಂದಿರನು
ನಸು ನಗುತ್ತ ಕಾಣೆ ಕೃಷ್ಣಾ
ನಿನ್ನ ವೈಖರಿ!!-
ಸನ್ಮಾರ್ಗಕ್ಕೆ ಸನ್ನಡತೆ -
ಸನ್ನಡತೆಯೊಡನೆ ಭಗವನ್ನಾಮಸ್ತುತಿ.
ಸ್ತುತಿಯಿಂದ ಸುಜ್ಞಾನ -
ಸುಜ್ಞಾನಕ್ಕಾಗಿ ಸದ್ಬಕ್ತಿ,
ಸದ್ಬಕ್ತಿಯಿಂದ ಸತ್ಕರ್ಮ-
ಸತ್ಕರ್ಮ ದಿಂದ ಸಾಫಲ್ಯ ಶತಸಿದ್ದ.
ಶ್ರೀ ಹರಿಯ ಪೂರ್ಣಾನುಗ್ರಹ
ಸರ್ವರಿಗೂ ಪ್ರಾಪ್ತವಾಗಲಿ.-
ದುಷ್ಟ ಕಾಳೀಯಾದಿಕಂಸರ
ಕೊಂದಂತಹ ಕೃಷ್ಣನೆ
ಕೊನೆಗಾಣಿಸಯ್ಯಾ ಎನ್ನೊಳ
ಕಟು ಕಾಮಕ್ರೋಧಗಳನು,
ಲೋಕ ರಕ್ಷಕನಾದ ರುಕ್ಮಿಣಿ
ಲೋಲನೇ ತೊಲಗಿಸಯ್ಯಾ
ಎನ್ನೊಳಸುರೀ ರೂಪಿ
ಲೋಭ ಮೋಹಗಳನು,
ಮುಷ್ಠಿಕಾಸುರಾದಿ ಅಸುರರ
ಮಧಿಸಿದ ಮುಕುಂದನೆ
ಮಾಯಗೊಳಿಸಯ್ಯ ಎನ್ನೊಳ
ಮದ ಮಾತ್ಸರ್ಯಗಳನು,
ಅರಿಷಡ್ವರ್ಗಗಳ ಮಧಿಸಿ ಸತ್ಷಡ್ಗುಣಗಳ
ಸಿಧ್ಧಿಸಿ ಸಲಹೋ ಸತ್ಯಸಂಕಲ್ಪಾ.-
ಬದುಕಲ್ಲಿ ಬಿಟ್ಟು ಹೋದವರು
ಹಲವು ಜನ,
ಬೆಂಬಿಡದೆ ಜೊತೆಗಿರುವೆ ನೀ
ಜನಾರ್ಧನ,
ಕಣ್ಣ ಮುಂದಿದ್ದು ಕಾಡುವವರು
ಅನೇಕ ಜನ,
ಕಣ್ಣಿಗೆ ಕಾಣದೇ ಕಾಯುವವ ನೀನೆ
ಮಧುಸೂದನ,
ನಂಬಿಕೆಗೆ ದ್ರೋಹ ಮಾಡಿದರೂ
ಹಲವು ದುರ್ಜನ,
ನಂಬಿದರೆ ಕೈ ಹಿಡಿಯುವೆ ನೀನೆ
ನಂದ ನಂದನ..!!!-
ಹೇಯ್ ನನ್ನ ಮುಕುಂದ - ಮುರಾರಿ..
ಎಲ್ಲಿ ಬಿಟ್ಟ ಬಂದೆ ನಿನ್ನ ಮುಕೂಟದ ನವಿಲುಗರಿ..
ಏಕೆ ನಿಂತಿರುವೆ ಹೀಗೆ ಗೋಡೆಗೆ ಒರಗಿ...
ಸೊರಗುತ್ತಿರುವರು ನಿನ್ನ ಗೆಳತಿಯರು ನಿನ್ನ ನೆನಪಲ್ಲಿ ಕೊರಗಿ ಕೊರಗಿ..
ಹೋಗಿ ಬಾರೋ ಪುಟ್ಟ ಒಂದು ಸಲ ವೇದಿಕೆಯ ಕಡೆಗೆ ...
ಮೂಕವಿಸ್ಮಿತರಾಗಿ ನೋಡುವರು ಪ್ರೇಕ್ಷಕರೆಲ್ಲರೂ ನಿನ್ನೆಡೆಗೆ...
ಹೇಯ್ ನನ್ನ ಮುದ್ದು ಕಿಷ್ಣಪ್ಪ...
ರಾರಾಜಿಸುತ್ತಿರುವಿ ನೀ ಉಡುಪಿಯಲಿ ನನ್ನಪ್ಪ...
-