ಅಪಘಾತವಾದ
ನಂತರವೇ
ತಾಳ್ಮೆಯ
ಅರಿವಾಗುವುದು,
ಅದು
"ವಾಹನ" ವಾದರೂ ಸರಿಯೇ
"ಜೀವನ" ವಾದರೂ ಸರಿಯೇ...!!!-
Kuber R
(ಕವಲೊಡೆದ ಕನಸು.✍️)
47 Followers · 64 Following
Joined 15 March 2018
11 DEC 2020 AT 11:35
2 AUG 2020 AT 16:41
ಕಾಮನಬಿಲ್ಲಿಗೂ
ಸಡ್ಡು ಹೊಡೆಯುವಂತಿದೆ..!!
ನನ್ನವಳ ಸುಂದರ ಕೈಗಳಿಗೆ
ನಾ ತೊಡಿಸಿದ ಬಳೆಗಳ ಅಂದ...!!!-
14 JUL 2021 AT 23:20
ಅಳಬೇಕೆಂದರೆ ಏಕಾಂತದಲ್ಲಿ
ಅತ್ತುಬಿಡಿ,
ನಗಬೇಕೆಂದರೆ ಗುಂಪಿನಲ್ಲಿ
ನಕ್ಕುಬಿಡಿ,
ಗುಂಪಿನಲ್ಲಿ ಅತ್ತರೆ ನಟನೆ ಎನ್ನುವ,
ಏಕಾಂಗಿಯಾಗಿ ನಕ್ಕರೆ ಹುಚ್ಚ ಎನ್ನುವ
ಪ್ರಪಂಚ ಇದು...!!!-
29 JUN 2021 AT 22:04
ನಂಬಿಕೆಯಿಂದ
ಮುನ್ನಡೆಯುತಿರು
ನದಿಯಂತೆ,
ಕೊನೆಗೊಮ್ಮೆ
ಗೆಲುವು
ಕಾದಿರುವುದು
ಕಡಲಂತೆ... !!!-
27 MAY 2021 AT 17:27
ಜಗದಲ್ಲಿ ಎಷ್ಟೇ ಹುಡುಕಿ ಅಲೆದಾಡಿದರೂ
ಮತ್ತೆ ಕೂರಲು ಸಿಗದ ಸುಂದರ ಸಿಂಹಾಸನ
" ತಾಯಿಯ ಗರ್ಭ ".. !"-
3 MAY 2021 AT 15:48
ವಕ್ಷಸ್ಥಳವನ್ನೇ
ಕತ್ತರಿಸಿ ಎಸೆದು
ಹಾಲಿಗಾಗಿ
ಅಲೆದಾಡುತ್ತಿರುವ
ಹುಚ್ಚು ಮಕ್ಕಳು
ನಾವುಗಳು... !!!-
25 APR 2021 AT 21:53
ಅವಶ್ಯಕತೆಯನ್ನು
ಅರಿತು
ಅವರು
ಕೇಳುವ ಮುನ್ನ
ಸಹಾಯ
ಮಾಡಿದರೆ ಸಾಕು,
"ನೀನು ಕೂಡಾ ದೇವರೇ ".....!!!-
19 APR 2021 AT 15:44
ನನ್ನನ್ನು
ನೋಡಿದರೆ ಮಾತ್ರ
ಯೋಗ ಬರುವುದಿಲ್ಲ,
ನನ್ನ ಹಾಗೇ
ದುಡಿದರೆ ಮಾತ್ರವೇ
ಯೋಗ
ಬರುತ್ತದೆ..!!!🤩🤩🤩-