QUOTES ON #ಕುಸಿತ

#ಕುಸಿತ quotes

Trending | Latest
24 FEB 2018 AT 19:08

ಕುಸಿತದ ಮುಖ ಕೆಸರು,
ಕುಸಿತದ ಭಾವ ಕೆಸರು,
ಎಲ್ಲೆಂದರಲ್ಲಿ ಉಸಿರಾಡುತ್ತದೆ.
ಹೋರಾಟ ತಪ್ಪದು !
ಹಟವಿರಲಿ ,ಛಲವಿರಲಿ,
ಕುಸಿಯದಂತೆ ಮನ !

-



ಕುಸಿತ
******
ಸಂಬಂಧಗಳು
ಭಾವ ನಿರ್ಮಿತ
ತುಸು ಘಾಸಿಯಾದರೂ
ಉಂಟಾಗುವುದು ಕುಸಿತ

-


17 AUG 2018 AT 12:13

ಸೃಷ್ಟಿ ಸೊಬಗ
ಸಹಿಸದ ಮನುಜನಿಂದ
ಶತಶತಮಾನಗಳಿಂದ ಜರುಗಿತು,
ಬರ್ಬರ ಕೃತ್ಯ....
ಇದನ್ನು ಸಹಿಸಿ ಸಹಿಸಿ, ಸೋತ
ಸಸ್ಯಶ್ಯಾಮಲೆ ಕಡೆಗೂ ಈ ಮನುಕುಲದ ವಿರುದ್ಧ ಎದ್ದಿರುವಳು ಬಂಡಾಯ...
ಅವಳ ಪರವಾಗಿ ನಿಂತಿರುವರು
ವರುಣ-ವಾಯುದಳ
ಇಳೆಯಲ್ಲಿ ಈಗ ಆರ್ತನಾದ...
ಇನ್ನಾದರೂ, ಅವಳ ಪಾದಗಳಿಗೆರೆಗಿ
ಕ್ಷಮೆಯಾಚಿಸೋ ನಿ ಹುಲುಮಾನವ
ಕ್ಷಮಯಾ ಧರಿತ್ರಿ ಅವಳು, ಬಹುಶಃ ಮನ್ನಿಸಬಹುದೇನೋ ನಿನ್ನ...

-


25 FEB 2018 AT 8:20

ಇಲ್ಲವಾದರೆ ಮನಸ್ಸು ಸ್ತಿಮಿತ
ಜೀವನದಲ್ಲಿ ಆಗುವದು ಕುಸಿತ

-


24 NOV 2016 AT 8:49

ಹೊರಟಿದ್ದೆ ಮನೆ ಹೊರಗೆ ಹಸಿದು, ಏನೂ ಸಿಗದೆ ಬಿದ್ದೆ ಕುಸಿದು, ಹರಿಯಿತು ಕಣ್ಣೀರು ಬಿತ್ತು ಬಸಿದು

-


24 FEB 2018 AT 22:02

ಕುಸಿತ ಕಾಣದ
ಅಹಂಕಾರ(ಮನುಜನ)
ಕುಂಠಿತವಾಗಲು
ಸಾಧ್ಯವಿಲ್ಲ......

-


25 FEB 2018 AT 14:08

ಬದುಕಿನ ಮಜಲಲಿ ಸಹಜ ಏರಿಳಿತ
ಸಂತಸ ಸ್ವಪ್ರಯತ್ನದ ಸಮರ್ಥ ಕುಸಿತ
ಶ್ರಮವಿರದ ಖ್ಯಾತಿಯದು ಮಾತ್ರ ನಿರರ್ಥ

-


24 FEB 2018 AT 22:45

ರೈತ ಬೆಳೆದ ಬೆಳೆಯು ಸರಿಯಾದ ನಿಗದಿ ಬೆಲೆ ಸಿಗದೆ ಕುಸಿತಕ್ಕೆ ಒಳಗಾಗುತಿದ್ದನೆ.😒
ಆದರೂ😌
ರೈತನು ಏಷ್ಟೇ ಕುಸಿತ ಇದ್ದರು ಕೂಡ ನಮ್ಮಗೆಲ್ಲೆ ಬೆಳೆ ಬೆಳೇದು ಕೋಡುತಿಹನು ಒಲವಿನ ತುತ್ತೋಂದನ್ನ😍😘🙏

-


24 FEB 2018 AT 19:30

ನೀನು ಮುಗುಳ್ನಕ್ಕಾಗ ಹೃದಯ ಮಿಡಿತ

ಕುಡಿನೋಟದಲ್ಲಿ ಏನೋ ಸೆಳೆತ

ನಿನ್ನ ಸ್ಪರ್ಶಿಸಿದಾಗ ಮಿಂಚಿನ ಹೊಡೆತ

ನೀನು ಕಾಣದಿದ್ದರೆ ಹೃದಯ ಬಡಿತದ ಕುಸಿತ

-


25 FEB 2018 AT 13:54

ಕುಸಿತ-
ಜೀವನ ಒಂದು ಚಕ್ರ
ಮೇಲೆ ಇರುವಾಗ ಮಾತಾಡಿದರೆ ವಕ್ರ
ತಿರುಗಿ ತಳ ಸೇರಿದಾಗ ಆಘಾತ ಆ ಕುಸಿತದ ತರ್ಕ
ಸಮಯ ಮಿಂಚಿದರೆ, ಕಳೆದು ಹೋಗುವುದು ಪ್ರಪಂಚದ ಸಂಪರ್ಕ

-