Niveditha Kotian.b   (ನಿವೀ✍🏽)
516 Followers · 96 Following

read more
Joined 20 June 2018


read more
Joined 20 June 2018
30 JUL 2023 AT 14:48

ಮುಂಗಾರಿನ ಸೂರ್ಯ
ಕಿರಣಗಳ ದಳವರಳಿಸಿಕೊಂಡು
ಭೂರಮೆಯ ಹೆಚ್ಚೇ ಸುಡುತ್ತಿದ್ದ...

ಬೀಸುಗಾಳಿಗೆ ಸಿಕ್ಕು, ಹೆರಳಾಗಿತ್ತು ನವಿಲು
ಬಂಡೆಗಪ್ಪಳಿಸಿ ಭೋರ್ಗರೆಯುತ್ತಿತ್ತು ಕಡಲು
ಒರಗಿಕೊಳ್ಳಲು ನನ್ನವನ ಹೆಗಲು...

ನೆತ್ತಿ ಬೇಯಿಸಿದರೇನಂತೆ ಬಿಸಿಲು?
ತಂಪನ್ನೀಯುತ್ತಿರಲು ಅವನೊಲವ ನೆಳಲು
ಕೂಡದಿರಲೆನ್ನುವ ಸ್ವಾರ್ಥ, ಆ ಹೊತ್ತು ಮುಗಿಲು..

ಪ್ರೀತಿಯೇ, ಮಳೆಗರೆದು ತೋಯ್ಯಿಸುತ್ತಿರಲು,
ನುಡಿಯುತ್ತಿತ್ತು ನವಭಾವಗಳ ಕೊಳಲು
ನನ್ನೊಳು ಮತ್ತು ಅವನಲ್ಲೂ.‌‌‌‌...

-


3 APR 2023 AT 23:10

ವರ್ಷಗಳ ಗಾಲಿ ಮುಂದೊಡುತಿರಲು,
ಬೆರಗಿನ ಬಾಲ್ಯ ಚೂರು ಹೆಚ್ಚೇ
ಬೇಕೆನಿಸುತ್ತದೆ.....

ಅಲ್ಲಿ ಆಯ್ಕೆಗಳ ಗೊಂದಲವಿರಲಿಲ್ಲ,
ಒತ್ತಡಗಳ ಮೂಟೆಯದು ಕಂಡಿರಲಿಲ್ಲ....

ಬರೀ ಕನಸುಗಳು,
ಮಣ್ಣುಮೆತ್ತಿದ ಕೈಗಳು!
ಅಪ್ಪ ಕೊಡಿಸಿದ ಬಣ್ಣದ ಗೊಂಬೆ,
ಹತ್ತಿ, ತೂಗಾಡಿದ ಮಾವಿನ ರೆಂಬೆ!
ಚಿಂದಿ ಬಟ್ಟೆಯ ಕುಲಾವಿ,
ಅಮ್ಮನೆದುರು ಮುಗ್ಧ ಮನವಿ...

ಇವಿಷ್ಟೇ ಸಾಕಿತ್ತು.
'ನೆಮ್ಮದಿ'ಯೆಂದು ಕರೆಯುವುದಕ್ಕೆ
‌‌‌ಮುಕ್ತವಾಗಿ ನಗುವುದಕ್ಕೆ....

-


22 MAR 2023 AT 14:52

ಸೂರ್ಯ ದೇವನ
ಹೆಜ್ಜೆಯಿನ್ನು ಮೇಷನತ್ತ!
ನವೊಲ್ಲಾಸದ ಛಾಯೆ
ಪಸರಿಸಿದೆ ಸುತ್ತಮುತ್ತ...
ಸೃಷ್ಟಿಯನ್ನು ಮುದ್ದಿಸಲು
ಹವಣಿಸುವನಿನ್ನು ವಸಂತ;
ಖಗ-ಮೃಗ, ಜಗಕ್ಕೆಲ್ಲವಿದು
ಹೊಸವರ್ಷ, 'ಶೋಭಕೃತ'...

-


8 NOV 2022 AT 22:20

ಇರುಳ ಕಪ್ಪು,
ಹಡೆದ ಜ್ಯೋತಿ ಚಂದ್ರ;
ಕಾರ್ತಿಕದಲಿ
ಸ್ವತಃ ತಾನೇ ಕೃಷ್ಣಗೆ
ಆರತಿಯಾದ!

-


8 NOV 2022 AT 20:53

ಹೊಸ ಆಕಾಂಕ್ಷೆಗಳ ಜನನಕ್ಕೆ
ಸೂಕ್ತ ರೂವಾರಿ....
ಸಹಜ ನೋವುಗಳ ನಡುವೆ
ಸಾಧನೆಗೊಂದು ಗರಿ...

-


4 NOV 2022 AT 16:54

ಬದುಕಿನ ಪುಟಗಳಲ್ಲಿ
ಭೇಟಿಯಾಗುವ ಪಾತ್ರಗಳು ಬಹಳ
ಬಯಲಾಗುವ ವೇಷಗಳ ಒಳಗೆ
ಬಾಳ ಪಥದ್ದುದ್ದಕ್ಕೂ ಜೊತೆಯಾಗಿರುವವು
ಬಲು ವಿರಳ....

-


1 NOV 2022 AT 22:54

ಅಂತರಾಳದ ಕವಿತೆ
ಭಾವಗಳ-ಬರಹವಾಗಿಸುವ ಸ್ನೇಹಿತೆ
ಕವಿಮನಕೆ ಸ್ಫೂರ್ತಿಯ ಸರಿತೆ...

-


1 NOV 2022 AT 14:04

ಕನ್ನಡವಾಗಲು ನಿತ್ಯ;
ನಾಲಿಗೆಯಾಡುವ ನುಡಿ
ಕನ್ನಡವಾಗುವುದು ಅಗತ್ಯ..

-


1 NOV 2022 AT 9:46

ಕನ್ನಡ ಭಾಷೆ;
ಅಮ್ಮನೆರೆದ ಮಮತೆ
ಹೃದಯಕ್ಕಿಳಿದ ಕವಿತೆ
ಜ್ಞಾನವನ್ನರಳಿಸಿದ ಹಣತೆ
ಮುಗಿಲೆತ್ತರಕ್ಕೇರಲದರ ಘನತೆ...

-


8 OCT 2022 AT 0:30

Did not find
the right person
to listen...
Nivi











-


Fetching Niveditha Kotian.b Quotes