ವಿಶ್ವ ಮಾನವ ಸಂದೇಶ ಸಾರಿದ ವೈಚಾರಿಕ ಕವಿ
ಶ್ರೀಯುತ ಕುವೆಂಪುರವರು.
(CAPTIONED)-
ಕನ್ನಡ ಸಾಹಿತ್ಯದ
ಮೇರು ಶಿಖರ
ತಾಯಿ ಕನ್ನಡಾಂಬೆಯ
ಮುದ್ದಿನ ಕುವರ
ರಾಷ್ಟ್ರಕಂಡ ಮಹಾನ
ಕನ್ನಡ ಕವಿ
ಮಲೆನಾಡ ಮದುಮಗಳ
ಪ್ರೀತಿಯ ಕರ್ತೃ
ನೆನಪಿನ ದೋಣಿಯ
ನೆಮ್ಮದಿಯ ಸಿಂಧು
ವಿಶ್ವಮಾನವತೆಯ
ಹರಿಕಾರ
ಕುವೆಂಪುರವರ
ಜನ್ಮದಿನದ ಹಬ್ಬ....!
-
ಕವಿತೆಗಳ ಲೋಕಕ್ಕೆ ಇವ ಒಡೆಯ
ಕನ್ನಡ ಸಾಹಿತ್ಯ ಸಿರಿಗೆ ಜೀವಕಳೆ ತುಂಬಿದೆ
ಈ "ಕವಿ ಹೃದಯ"-
"ರಕ್ತಾಕ್ಷಿ"
ಕುವೆಂಪು ಅವರು ಸೃಷ್ಟಿಸಿದ ಅದ್ಭುತ ಮಾಯಾಜಾಲ. ಹೆಣ್ಣೊಬ್ಬಳೊಳಗಡಗಿದ ನಾನಾ ರೂಪಗಳ ಸಮಯಾನುಸಾರ ಅನಾವರಣ. ಕಥೆಯಂಚಿನಲ್ಲಿ, ಓದುಗರ ಕಣ್ಣಂಚನ್ನು ತೇವ ಮಾಡುವ ರಕ್ತಾಕ್ಷಿಯೆಂಬ ರುದ್ರಾಂಬೆಯ ಯಶಸ್ವೀ ಪಾತ್ರ ಒಂದಿಡೀ ಹೊತ್ತಿಗೆಯ ಹಿಡಿದಿಡುವ ಜೀವಾಳದ ಪಾತ್ರ...-
ನನ್ನ ಅಚ್ಚುಮೆಚ್ಚಿನ ,ನನ್ನ ಪ್ರೀತಿಯ ಬರಹಗಾರ,ಕವಿ,ಕಾದಂಬರಿಕಾರ, ನಾಟಕಕಾರ,ರಾಷ್ಟಕವಿ ಕುವೆಂಪು.ನನ್ನ ಮೆಚ್ಚಿನ ಪುಸ್ತಕ "ಮಲೆಗಳಲ್ಲಿಮದುಮಗಳು"
ಪ್ರತಿಯೊಂದು ಪಾತ್ರವೂ ಅತೀ ಆಸ್ಥೆಯಿಂದ ಬರೆದಿರುತ್ತಾರೆ. ಎಲ್ಲವೂ ಕಣ್ಣಿಗೆ ಕಟ್ಟುವಂತೆ,ನಮ್ಮೊಳಗೊಂದು ಸಂಚಲನವನ್ನು ತಂದಿರಿಸುತ್ತದೆ.ಗುತ್ತಿ,ಹುಲಿಯ,....ಎಷ್ಟೂಂದು ಪಾತ್ರಗಳು ವರ್ಷಾನುಗಟ್ಟಲೆ ನಮ್ಮನ್ನು ಕಾಡಿಸುತ್ತದೆ....
ತಪ್ಪದೆ ಓದಿ.
-
ಕುವೆಂಪು ಬರಹಗಳು ಅವರ ಸೋಪಜ್ಞತೆ ಮತ್ತು ಅವರ ಪ್ರತಿಭೆಗೆ ಕನ್ನಡಿಯಂತಿದೆ.
ಕಥೆ, ಕಾದಂಬರಿ, ಜೀವನಚರಿತ್ರೆ, ಕವಿತೆ,ನಾಟಕ,ಶಿಶುಸಾಹಿತ್ಯ, ವಿಮರ್ಶೆ, ಮಿಮಾಂಸೆ, ಮಹಾಕಾವ್ಯ, ಕಥನಕವನ.......ಎಲ್ಲವೂ ಅವರಿಗೆ ನೀರು ಕುಡಿದಷ್ಟು ಸಲೀಸು.ಇವರಷ್ಟು ಅಖಂಡ,ಪ್ರಚಂಡ,ಪ್ರತಿಭೆ ಬೇರೆ ಯಾವ ಭಾಷೆಯಲ್ಲೂ ಹುಟ್ಟಿರಲಾರ! ಯಾರೇ ಆಗಲಿ ಒಂದು ಪ್ರಕಾರದಲ್ಲಿ ಅಥವಾ ಎರಡು ಪ್ರಕಾರದಲ್ಲಿ ಮೇಲುಗೈ ಸಾಧಿಸಬಹುದು. ಆದರೆ ಕುವೆಂಪು ಎಲ್ಲೆಡೆಯಲ್ಲೂಶ್ರೇಷ್ಠತೆಯನ್ನು ಸಾಭೀತುಪಡಿಸಿದವರು.ಕುವೆಂಪುಗೆ ಕುವೆಂಪುನೇ ಸರಿಸಾಟಿ!
ಅವರ ಸಾಹಿತ್ಯದಲ್ಲಿ ಕಾಣಬರುವ ವೈಚಾರಿಕತೆ,ದಾರ್ಶನಿಕತೆ,ಮಾನವೀಯತೆ,ಸಾಮಾಜಿಕ ಪ್ರಜ್ಞೆ,ವಿಶ್ವ ಮಾನವ ಸಂದೇಶ ಸಾರುವ ಬರಹಗಳು ಸಾರ್ವಕಾಲಿಕ.......-
ಪ್ರತಿಯೊಂದು ಮಗುವು ಹುಟ್ಟುತ್ತಾ
ವಿಶ್ವ ಮಾನವನಾಗಿ ಹುಟ್ಟುತ್ತವೆ
ಬೆಳಿತಾ ಬೆಳಿತಾ
ಜಾತಿ, ಧಾರ್ಮ, ಕುಲ-ಗೋತ್ರ ಅಂತ
ಅಲ್ಪಮಾನವನನ್ನಾಗಿ ಮಾಡಿಬಿಡ್ತಿವಿ!-
ಅದೆಂದೊ ಬರೆದಿಟ್ಟ ಕುವೆಂಪು ಸಾಲುಗಳು
ಇದೆಂದು ಮನ ಬಡಿದೆಬ್ಬಿಸಿ ಕೂಗಿ ಹೇಳುತ್ತಿದೆ
ಬಹು ಜನರು ಹೇಳಿದ ಮಾತ್ರಕ್ಕೆ ಸುಳ್ಳು
ಸತ್ಯವಾಗುವುದಿಲ್ಲ ಎಂದು....!!-
ಓ ರಾಷ್ಟ್ರಕವಿ ಕುವೆಂಪು...
ನಿಮ್ಮ ಕೃತಿಗಳಲ್ಲಿ ಚಿಮ್ಮಿತು ಕನ್ನಡದ ಕಂಪು...
ನಿಮ್ಮ ಕವನಗಳು ಕಿವಿಗೆ ಇಂಪು...
ನೀವಿದ್ದ ಮಲೆನಾಡು ತುಂಬಾ ತಂಪು...
ಹೆಚ್ಚಾಗುತ್ತಿದೆ ಕನ್ನಡ ಪದಭಂಡಾರ...
ಅದಕ್ಕೆ ತಮ್ಮ ಕೊಡುಗೆ ಅಪಾರ...
ನೇಗಿಲಯೋಗಿ,ಗಗನ ಪಕ್ಷಿ,ಯಂತ್ರೋರ್ಷಿ...
ಮುಂತಾದ ಪದವ ನೀಡಿದ ಕವಿ ಋಷಿ...
ತಮ್ಮ ಕರುಳ ಕುಡಿ ತೇಜಸ್ವಿ...
ತಾವು ಬರೆದದ್ದೆಲ್ಲಾ ಯಶಸ್ವಿ...
ಓ ವಿಶ್ವ ಚೇತನ...
ತಮಗೆ ನನ್ನ ನಮನ...-
ವಿಶ್ವಮಾನವ ಸಂದೇಶದ ಮಹಾಚೇತನ ಡಾ!! ಕುವೆಂಪು ಕರ್ನಾಟಕದ ಮತ್ತು ಕನ್ನಡದ ಅನರ್ಘ್ಯ ರತ್ನ.ಅವರು ಈ ನಾಡು ಕಂಡ ಅತ್ಯಂತ ವಿಶಿಷ್ಟ ಕವಿ ಮತ್ತು ಮೇರು ಸಾಹಿತಿ. ತಮ್ಮ ಅತ್ಯಮೂಲ್ಯ ಕೃತಿರಚನೆಗಳಿಂದ ಅವರೊಬ್ಬ ರಸಋಷಿ ದಾರ್ಶನಿಕ ಕವಿ. ದೇಶ ಭಾಷೆಗಳ ಎಲ್ಲೇ ಮೀರಿ ನಿಂತ ಈ ಮಹಾನ್ ವ್ಯಕ್ತಿ ಮತ್ತು ಮಾನವ ಕುಲಕೋಟಿಗೆ ಸದಾ ಪ್ರೇರಣೆ..!
-