ಪ್ರತೀ ಸಾಲ ಕೊನೆಗೆ ಪೂರ್ಣ ವಿರಾಮ
ಪ್ರತೀ ಜೀವಕೂ ಮರಣವೇ ಅಂತಿಮ...
ಅರಿತರೆ ಪ್ರತೀ ಪದಕೂ ಉಂಟು ಅರ್ಥ
ಇಲ್ಲವೇ ಎಲ್ಲವೂ ಅನರ್ಥ
ಬೆರೆತು ಬಾಳಿದರೆ ಬದುಕಿಗುಂಟು ಅರ್ಥ ಇಲ್ಲವಾದರೂ ಬಾಳೇ ವ್ಯರ್ಥ...-
ಆಪರೇಷನ್ ಸಿಂಧೂರ
ಎದುರಾಳಿಗಳ ಸಂಹಾರ...
ಅಡಿಸಿದರೆ ಮಕ್ಕಳ ಕುಂಕುಮ
ಸುಮ್ಮನಿರುವಳೇ ಭಾರತಮ್ಮ
ಮಾಡಿದಳು ದುಷ್ಟರ ನಿರ್ನಾಮ...
ಗುಂಡಿಕ್ಕಿ ಕೊಂದ ದುಷ್ಟರ
ಬಾಳು ಇಂದು ದುಸ್ತರ
ಕಣ್ಣೆದುರೇ ಹರಿದ ನೆತ್ತರ
ಹೆಣ್ಮಗಳ ಶಾಪವೇ ಇಂದು ಉತ್ತರ...
ಗಡಿಯ ದಾಟದೇ ಸೈನಿಕ
ತಡೆದ ಉಗ್ರರ ಕಂಟಕ
ನೆಟ್ಟ ಗುರಿಯ ಮುಟ್ಟುತಾ
ನೆಲೆಸಿದ ಎದೆಯಾಳಗಳ ತಟ್ಟುತಾ...-
ಸತ್ತ ಜೀವವೂ ಬದುಕಿಹುದಿಲ್ಲಿ
ವ್ಯಕ್ತಿತ್ವದ ನೆರಳಲ್ಲಿ...
ಬದುಕಿರುವ ಮನುಜನು ಮಣ್ಣಾಗಿಹನು
ಕಳಚಿದ ವ್ಯಕ್ತಿತ್ವದ ಮುಖವಾಡದಲಿ...-
ಒಬ್ಬರನ್ನ ಇಷ್ಟೋ ಪಡೋಕೆ ಪ್ರೀತಿ ಮಾಡೋಕೆ ಗೆಳೆಯರಾಗೋಕೆ ಕಾರಣನೇ ಬೇಕು ಅಂತ ಇಲ್ಲ...
ಆದ್ರೆ ದ್ವೇಷ ಮಾಡೋಕೆ ಅಸೂಯೆ ಪಡೋಕೆ ಯಾವಾಗ್ಲೂ ಒಂದು ಕಾರಣ ಅಂತೂ ಬೇಕು ಬೇಕು...
-
ಬಂದಿದೆ ನಿಸರ್ಗದ ಯುಗಾದಿ
ತೋರಲಿ ಸನ್ಮಾರ್ಗವ ಮನದಿ
ಮರ ಗಿಡದ ಚಿಗುರೇ ನಿಸರ್ಗಕೆ ಆದಿ
ಮನೆ ಮನದಲಿ ನೆಲಸಲಿ ನೆಮ್ಮದಿ
ಸಮಯ ಮತ್ತದೇ ಬಾರದ ನೀರ ನದಿ
ಎಂದೆಂದೂ ಸಂಸ್ಕೃತಿಯೇ ನಮ್ಮ ಜೀವನದ ಬುನಾದಿ
-
ವ್ಯಕ್ತಿಗಿಂತ ವ್ಯಕ್ತಿತ್ವ ಮಹತ್ವದ್ದು
ವ್ಯಕ್ತಿಗೆ ಸಾವೇ ಕೊನೆಯ ನಿಲ್ದಾಣ
ವ್ಯಕ್ತಿತ್ವಕ್ಕೆ ಎಲ್ಲುಂಟು ಮರಣ...
ಸತ್ತ ಜೀವವು ಬದುಕಿಹುದು ಇಲ್ಲಿ
ವ್ಯಕ್ತಿತ್ವದ ನೆರಳಲ್ಲಿ...
ಬದುಕಿರುವ ಮನುಜನು ಮಣ್ಣಾಗಿಹನು
ಕಳಚಿದ ವ್ಯಕ್ತಿತ್ವದ ಮುಖವಾಡದಲಿ...-
ಒಳ್ಳೇ ಮಾತು ಕಾರ್ಯ ನಡತೆಯು ಸದಾ ಬೀಸೋ ಮೆಲು ಗಾಳಿ ತಂಗಾಳಿಯಂತೆ;
ಕೆಟ್ಟ ಕಾರ್ಯ ಮಾತು ನಡತೆ ದ್ವೇಷ ಒಮ್ಮೆಲೇ ಅಪ್ಪಳಿಸೋ ಬಿರುಗಾಳಿ - ಚಂಡಮಾರುತದಂತೆ ;
ತಂಗಾಳಿಯಿಂದ ಬದುಕು
ಬಿರುಗಾಳಿಯಿಂದ ಬಿರುಕು...-
ಉದುರಿದ ಎಲೆ ಮತ್ತೆ ಚಿಗುರಿ ಹಸಿರ ಶೃಂಗಾರ ಹೊಮ್ಮಲು ಕಾಲ ಚಕ್ರದಲಿ ವಸಂತ ಋತು ಬರಬೇಕು...
ಮುದುಡಿದ ಮನದಲಿ ಮತ್ತೆ ಚೈತನ್ಯ
ಚಿಮ್ಮಲು ಏಕಾಂತದಲ್ಲಿ ನಮ್ಮದೇ ಮನದ
ಸಂತನ ಸಹವಾಸ ಬೇಕು...-