QUOTES ON #ಕಾಡು

#ಕಾಡು quotes

Trending | Latest
27 JUN 2020 AT 18:05



ಮತ ಧರ್ಮ ಉಳಿಸಲು ಮೂಢ ಅನುಯಾಯಿಗಳನ್ನು ಆಶ್ರಯಿಸಿ
ನಿಜ ಜೀವನ ದರ್ಶನ ಮಾಡಿಸದೆ ಬರಿ ಮುಖವಾಡ ಪೂರೈಸಿದ್ದಾರಲ್ಲ ಅದು ಸದಾ ಕಾಡುತ್ತಿದೆ

ದೇವರ ಹೆಸರಿನಲ್ಲಿ ಜಾತಿ ಮೌಢ್ಯ ಅನಿಷ್ಟ ಕಂದಾಚಾರಗಳನ್ನು ಪೋಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತ ಸಾಗಿದ್ದಾರಲ್ಲ ಅದು ಸದಾ ಕಾಡುತ್ತಿದೆ

ಇತ್ತೀಚೆಗೆ ಅತಿರೇಕದ ಧೇಶ ಭಕ್ತಿಯಂಬಂತೆ ಯುವಕರ ಕೈಯಲ್ಲಿ ಬುಲೆಟ್ ಬಂದೂಕು ಹಿಡಿಸಲು ಹೊರಟಿದ್ದು ಏಕೋ ಸದಾ ಕಾಡುತ್ತಿದೆ

ಮಂದಿರ ಮಸೀದಿ ಚೆರ್ಚ್ ಗಳ ಹೆಸರಿನಲ್ಲಿ ಕೋಮು ಗಲಬೆಗೆ ಕುಮ್ಮಕ್ಕು ನೀಡಿ ಜೀವ ಜೀವಗಳ ಮಧ್ಯ ಚಲ್ಲಾಟವಾಡುತ್ತಿರುವುದು ಸದಾ ಕಾಡುತ್ತಿದೆ

ಬುದ್ದಿ ಜೀವಿಗಳೆನಿಸಿಕೊಂಡವರು ಖ್ಯಾತ ಪ್ರಚಾರಕರು ಸಾಹಿತಿಗಳು
ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಕೀರ್ತಿ ಪ್ರಶಸ್ತಿ ಖ್ಯಾತಿಗಾಗಿ ಹೆಣಗಾಡುತ್ತಿದ್ದಾರಲ್ಲ ಅದು ಸದಾ ಕಾಡುತ್ತಿದೆ

ದೇಶವನ್ನು ಮುನ್ನಡೆಸುವ ರಾಜ ತಾಂತ್ರಿಕ ಯಂತ್ರ ಸರ್ವೇಜನ ಸುಖಿನೋ ಭವಂತು ಎಂಬುದನ್ನು ಮರೆತು ಸ್ವರ್ಥಕ್ಕಾಗಿ ಶ್ರಮಿಸುತ್ತಿದೆಯಲ್ಲ ಅದು ಸದಾ ಕಾಡುತ್ತಿದೆ

ಅನ್ನ ಸೂರಿಗಾಗಿ ನಿತ್ಯ ಭಿಕ್ಷೆ ಬೇಡಿ ನರಕ ಯಾತನೆ ಪಡುವ ನಿರ್ಗತಿಕ ಭಾರತೀಯರು ಇನ್ನೂ ಇದ್ದಾರಲ್ಲ ಎಂಬುದು ಮನದಲ್ಲಿ ಸದಾ ಕಾಡುತ್ತಿದೆ




-


30 JAN 2020 AT 19:17

ಕಾನನದ ಕುಸುಮವೊಂದು
ಪಕಳೆಗಳ ಅರಳುವಿಕೆಯೊಳು
ಗಹಗಹಿಸಿ ನಗುತಿದೆ
ಹಸಿರುಸಿರಿಯ ಬನದೊಳು
ಸೌಂದರ್ಯ ಖನಿಯಾಗಿ ಕಾಂತರಕ್ಕೆ
ದೃಷ್ಠಿಬೊಟ್ಟಾಗಿ ಮೂಕಜೀವಿಗಳಿಗೆ
ನಗಿಸುವ ಸುಮವಾಗಿ
ನಳನಳಿಸಿ ನೋವು
ಮರೆಸಲು ಪಲ್ಲವಿಸುತ್ತ ತನ್ನೆಡೆ
ಎಲ್ಲರ ಸೆಳೆಯುತ್ತಲಿ
ಮುಗ್ದ ಜೀವಿಗಳ ಸಮೂಹದೊಳು
ಮೈಮರೆತು ಆಕರ್ಷಿಸುತಿದೆ.!

-


27 JUN 2020 AT 17:15

ನೀನೆಂಬ ನೆನಪಿನ ಬುತ್ತಿ,
ಮರೆಯದೆ ಹಾಕುವ ಚಪ್ಪಲಿಯಂತೆ
ಬೇಡವೆಂದು ತಿರಸ್ಕರಿಸಲಾಗದು
ಬೇಕೆಂದು ತಲೆ ಮೇಲಿಡಲಾಗದು ನೋಡು..!

-


17 JUN 2019 AT 11:01

ಅವನಿಯ ಹಸಿರು
ನಮ್ಮೊಲವಿನ ಉಸಿರು

-


22 SEP 2020 AT 21:10

"ದೂರದ ಕಾಡೊಳಗೆ ದಾಸ್ವಾಳ ಅರಳಿದರೆ
ನಾಡಿಗೆ ಬೇಕಾದ ಮಳೆ ಬರೀ ಕಾಡಿಗೆ ಸುರಿದರೆ
ಮುಡಿ ಸೇರುವ ಆಸೆ ಮಳೆ ಹನಿಯ ಪಾಲು
ಹನಿ ಇರದ ಜೀವ ನಾಡಲ್ಲಿ ಕಂಗಾಲು"

-


23 SEP 2020 AT 22:14

ಸಣ್ಣ ಬಿಸಿ ತಾಕಿದೊಡನೆ ಮೈ
ಸುಟ್ಟುಕೊಂಡು ಕೆಳಗೆ ಬೀಳುವ
ಮಿಣುಕು ಹುಳುವಲ್ಲ ಬದುಕದು !
ಕಗ್ಗತ್ತಲ ಕಾಡ ಹಾದಿಯಲು
ಸಂಧಿಗೊಂಧಿಯೊಳಗಿಣುಕುವ ಬೆಳಕದು ।

-


7 DEC 2021 AT 14:49

ಕಾಂಕ್ರೀಟ್ ಕಾಡೊಳಗೆ ಪ್ರತಿ ಮನೆಯ ಬಾಗಿಲು ಮುಚ್ಚೆ ಇದ್ದಾಗ ನನ್ನೂರು ಕೈ ಬೀಸಿ ಕರೆದಂತೆ
ಎಲ್ಲ ಇದ್ದೂ ಏನೂ ಇಲ್ಲದಿರೆ,ಅಮ್ಮನ ಮಡಿಲು ನೆನಪಾದಂತೆ
ಬದಲಾಗಲೆಂದು ಎಲ್ಲ ಬಿಟ್ಟು ಬಂದವನು ನಾನು
ಬದಲಾಗಿದ್ದೇನೊ ನಿಜ,
ಆದರೆ ಗಟ್ಟಿಯಾಗಿ ಅಲ್ಲ ಪೂರ್ತಿ ಮೆತ್ತಗಾಗಿ

-


18 AUG 2019 AT 19:54

ಬತ್ತಿ ಹೋದ ಬಾವಿಯಲ್ಲೂ ನೀರು ಉಕ್ಕಿ ಬಂದರೆ
ಕೆಟ್ಟ ಕಾಡ ನಡುವೆ ಒಂದು ಪುಟ್ಟ ನಾಡು ಸಿಕ್ಕರೆ

-


26 JAN 2021 AT 15:56

ನೀ ನೋಡಿದ್ರಿಂದ್ಲೇ ಅಲ್ವೇನೋ
ನಾ ಕಳ್ಳನೋಟ ಬೀರಿದ್ದು ನಿನಗೆ ತಿಳಿದದ್ದು
ಅಲ್ಲಿಗೆ ನೀನು ಕಳ್ಳನೇ ಬಿಡು 😏ಹ್ಮ್

-



ನಾಡೆಲ್ಲ ಹುಡುಕುತ್ತ ಕಾಡೊಳಗೆ ಬಂದದ್ದು ಸಹ ಗೊತ್ತಾಗದೆ
ಮತ್ತೆ ಮತ್ತೆ ನಾಡು ಕಾಡೆಲ್ಲ ಅಲೆದರು ನನ್ನವನು ಇರುವ
ಜಾಗವು ಕಣ್ಣಿಗೆ ಮಾತ್ರ ಕಾಣದಾಯ್ತು ನನಗೆ ಈ ಸಮಯ..

-