QUOTES ON #ಕಳಂಕ

#ಕಳಂಕ quotes

Trending | Latest

ನಿನ್ನ ನಿಷ್ಕಲ್ಮಶ ಹೃದಯದಲ್ಲಿ ಎಂದಿಗೂ ಕಳಂಕವನ್ನು ತುಂಬಿಕೊಳ್ಳಬೇಡ ಏಕೆಂದರೆ ನಿನ್ನಲ್ಲಿರುವ ಒಳ್ಳೆತನ ನಾಶವಾಗಿ ಹೋಗುತ್ತದೆ.

-


21 AUG 2020 AT 16:17

ಎಲ್ಲ ಮೊದಲುಗಳಿಗೆ ಅವಳಾಗಿಹ ಪುರಾವೆ,
ಅದೆಷ್ಟು‌ ಸಲುಗೆಯಿತ್ತೆಂದು ನಮಗಷ್ಟೆ ಗೊತ್ತು,
ಪರಿಶುದ್ಧ ಸ್ನೇಹವದರ ದೃಷ್ಟಿಬೊಟ್ಟಾಗಿರಲು,
ಭಿನ್ನ ವ್ಯಕ್ತಿಯ ಪ್ರವೇಶದಿಂದ ಕಳಂಕಿತವಾಗಿ,
ಮಾತಿಲ್ಲದಿದ್ದರೂ ಪದೇ ಪದೇ ಆಕ್ರಮಿಸುವ,
ಮತ್ತದೇ ನೆನಪುಗಳಿಗೆ ಅವಳೇ ಸಹಪಾಠಿ!

ಅವಳ ಕಣ್ಣುಗಳಲ್ಲಿ ಆಸೆಗಳು ನೂರೆಂಟಿವೆ,
ತನ್ನ ಆತ್ಮವಿಶ್ವಾಸವೆ ಸಾಧನೆಗಿರುವ ಸಂಪತ್ತು,
ಕೆಲ ತೊಡಕುಗಳ ಜೊತೆ ಜೀವನ ಸಾಗಿರಲು,
ಬಾಷ್ಪಗಳಲಿ ಸುಖ ದುಃಖಗಳ ಅಳೆದು ತೂಗಿ,
ಆಕೆ ಅಣತಿಯಂತೆ ಮಿತಿಮೀರಿ ವಿಹರಿಸುವ,
ಮತ್ತದೇ ನೆನಪುಗಳಿಗೆ ಅವಳೇ ಸಹಪಾಠಿ!

-


10 JUN 2019 AT 23:34

ತಪ್ಪು ಮಾಡದವರ್ಯಾರಿಲ್ಲ
ಮನುಜ
ಒಪ್ಪದೇ ನಡೆದಿರುವರೇ ಎಲ್ಲ
ತಿಳಿ ಈ ನಿಜ
ಒಪ್ಪಿದರೆ ಕಳಂಕವಿಲ್ಲ
ತಪ್ಪಿದರೆ ಶಿಕ್ಷೆ ತಪ್ಪೊಲ್ಲ

-



ಸಾವು..
ತನ್ನ ಹೆಸರಿನಿಂದಲೇ
ಕಳಂಕಿತಗೊಂಡಿದೆ..
ಇಲ್ಲದಿದ್ದರೆ
ಬದುಕು
ಇಷ್ಟೊಂದು ತೊಂದರೆ
ಕೊಡುತ್ತಿರಲಿಲ್ಲ.

-


15 JUL 2019 AT 9:28

ಈ ಜಗದಲ್ಲಿ ನಾನೊಬ್ಬ ಒಂಟಿ
ಎಲ್ಲ ಕಳಂಕಗಳು ನನಗೇ ಅಂಟಿ

-


5 FEB AT 12:39

ಎಷ್ಟೇ ಶ್ರಮಿಸಿದರು
ಸ್ವಾರ್ಥ ಪ್ರಪಂಚದಲ್ಲಿ
ಸ್ವಾರ್ಥಿಯೇ ಅರಸನಾಗುವನು
ನಿಸ್ವಾರ್ಥೀಯೇ ಕಳಂಕಿತರಾಗಿ ಉಳಿಯುವವರು

-



ತುಂಬಾ ಸ್ನೇಹಿತರಇದ್ದಾರೆಂದು ಬೀಗಬೇಡ
ನಂಬಿಕೆದ್ರೋಹ ಸ್ನೇಹಿತರ ಸೋಗಿನಲ್ಲಿ ಬಂದಿರುವುದನ್ನು ನಾ ಕಂಡಿರುವೆ

-


18 DEC 2024 AT 7:07

ಪ್ರಪಂಚ ಇಷ್ಟೆ
ಒಳ್ಳೆಯವರಿಗೆ ಕಳಂಕ ಹೆಚ್ಚು
ಸುಳ್ಳು ಹೇಳುವವರೊಂದಿಗೆ ಆತ್ಮೀಯತೆ ಹೆಚ್ಚು

-


15 AUG 2023 AT 21:14

ಜೀವನ ನಮ್ಮದಾದರೂ
ಯಾರೋ ಬರೆಯುವ ಕಥೆಯ ಪಾತ್ರಧಾರಿ ಆಗಬೇಕಾಗಿದೆ
ನಾವಲ್ಲದ ಪಾತ್ರವನ್ನು ಮನಸ್ಸಿಲ್ಲದೆ ನಿಭಾಯಿಸಿದರು
ಕೊನೆಗೆ ಕಳಂಕಿತ ಪಾತ್ರಧಾರಿಯಾಗಿಯೇ ಉಳಿಯುವೆವು ಜೀವನದ ಕಾದಂಬರಿಯಲ್ಲಿ

-


20 NOV 2024 AT 11:42

ಕೆಲವೊಂದು ಆಣೆ ಪ್ರಮಾಣಗಳು ಹೇಗೆಂದರೆ
ಬಿಳಿಯ ಹಾಳೆಯ ಮೇಲೆ ಕಪ್ಪು ಮಸಿಯಂತೆ
ಅಳಿಸಲು ಹೋದಷ್ಟು ನಮಗೆ ಕಳಂಕ ಹೆಚ್ಚು

-