ಪ್ರೀತಿಯ ಪ್ರಪಂಚದ ಪರಿದಿಯ ಅದು ಹೇಗೆ ಪರಿಚಯಸಲಿ,
ಮನದಿ ಮೂಡುವ ನವಿರಾದ ಭಾವಗಳ ನಾ ಹೇಗೆ ವಿವರಿಸಲಿ,
ಏಳು ಜನ್ಮಕೂ ನಾ ನಿನ್ನವಳೆಂದು ನಾ ಹೇಗೆ ನಿವೇದಿಸಲಿ
ಒಲವ ಪಯಣದಲಿ ಏಳು ಬೀಳಿನ ಬಾಳಿನಲ್ಲಿ ಈ ಒಲವೆಂದು ಬತ್ತದೆಂದು ನಾ ಹೇಗೆ ನಿರೂಪಿಸಲಿ..!-
ಸದಾ ನಗುವ ಮನಸ್ಸಿನಲ್ಲಿ ಅಡಗಿದೆ ಸಾವಿರ ಭಾವಾರ್ಥ ಎನ್ನುವ "ಮನಸ್ವಿ" ನಾ..❣️... read more
ಹೇ ಮುದ್ದು
ಬದುಕಿನ ನವ ಆಯಾಮದ ನವಿರಾದ ಮುನ್ನುಡಿ ಬರಿಯಬೇಕಿದೆ..,
ಒಲವಿನ ಈ ಸವಿಗನಸಿಗೆ ನೀನೆ ರುವಾರಿಯೆಂದು ಈ ಮನವು ನಿಶ್ಚಯಸಿದೆ...!-
Sometimes "Faith" Palys important role than "revenge" In the path of success..!!
-
ಸಂಬಂಧದಲ್ಲಿ ಮೂಡಿರುವ "ಮೌನ"ವನ್ನು ಅರಿತು ಬಿಟ್ಟರೆ ಭಾಂದವ್ಯ ಎಂದು ಅಸುನಿಗುವುದಿಲ್ಲಾ...!
-
ನೋವ ಚಿರಪರಿಚಿತವಾದ ಮನಕ್ಕೆ
ನಿನ್ನ ನೆನಪುಗಳ ಸಾಗಂತ್ಯವೊಂದೆ ಸಾಕು,
ಮನವು ತುಸು ಹೊತ್ತಾದರೂ ಸಂತಸ ಪಡಲು..!-
ನಮ್ಮತನವನ್ನು ಕಳೆದುಕೊಳ್ಳದೆ ಬದುಕಿದಾಗ..,
ಸಮಯದ ಪ್ರತಿ ಸವಾಲನ್ನು ಸಂಯಮದಿಂದ ಎದುರಿಸಿದಾಗಾಲೆ ಬದುಕು ಸಾರ್ಥಕವಾಗುತ್ತದೆ..!-
ಬಯಸಿದಂತೆ ಬದುಕು ಸಾಗದಿದ್ದಾಗ
ಬದುಕಿನಲ್ಲಿ ಬರುವ ಬವಣೆಗಳನ್ನು ಬಂಡರಂತೆ
ಬದುಕಿದಾಗಲೆ ಬದುಕಿನ ಭಾವಾರ್ಥ ಆರಿವಾಗುವುದು..!!-
ಅವನೆಂದರೆ..
ಕನಸ್ಸಲ್ಲು ಕಾಡುವನು
ಉಸಿರಿನಲ್ಲಿ ಬೇರತವನು..
ಹರುಷಕ್ಕೆ ನಾಂಧಿಯಾದವನು..!!-
ಬದುಕಿನ ಅದೆಷ್ಟೋ ಪಾಠವನ್ನು
"ಮನಸ್ಸಿಗೆ ಹತ್ತಿರವಾಗಿರುವ ವ್ಯಕ್ತಿ" ಹಾಗೂ "ಮನಸ್ಸಿಗೆ ನೋವು ಮಾಡುವ ಸನ್ನಿವೇಶಗಳಿಂದ" ಕಲಿತಿರುತ್ತೇವೆ..!-
ಹಲವು ಬಾರಿ ಹೀಗೂ ಅನ್ನಿಸಿದ್ದು ಉಂಟು
"ಎಲ್ಲವ ಹಾಗೂ ಎಲ್ಲರ" ತೊರೆದು ಬದುಕಬೇಕು ಎಂದು..,
ಮೌನಕ್ಕೆ ಶರಣಾಗಿ ಮನದಲ್ಲಿ ಎಳುತ್ತಿರುವ ಬೇಡದ ಆಲೋಚನೆಗಳಿಗೆ ತುಸು ವಿರಾಮ ನೀಡಬೇಕೆಂದು..!
ಆದರೆ ಇದು ಸಾಧ್ಯನಾ ಖಂಡಿತಾ ಎಲ್ಲವ ಎಲ್ಲರನ್ನೂ ಮೀರಿ ಬದುಕಬೇಕೆಂಬ ಹಂಬಲ ನನ್ನಲ್ಲಿ ಪ್ರಬಲವಾಗಬೇಕಿದೆ ಇಂದು..!
-