QUOTES ON #ಕನಸುಕಾಣು

#ಕನಸುಕಾಣು quotes

Trending | Latest
29 SEP 2019 AT 22:45

ಮೋಡಗಳು ಮುದ್ದಿಸುವ ಸಮಯವೂ
ಕಲ್ಪನಾಲೋಕದಲಿ ತೇಲುವ ವೇಳೆಯೂ
ಕನಸುಗಳ ಸಿಂಚನದಲಿ
ಈ ರಾತ್ರಿಯ ನಿದಿರೆಯಲಿ ಮೈಯೆಲ್ಲಾ
ರೋಮಾಂಚನವೂ!
ನವಕನಸುಗಳ ಮೆರವಣಿಗೆಯಲಿ
ಸಾಲು ಸಾಲು ಬರುತ್ತಲೆ ಕಮರುತಿವೆ
ಮೆತ್ತನೆಯ ಕನಸುಗಳು ಒತ್ತರಿಸಿ ಬರುತಿವೆ
ಬರೀ ನನ್ನೊಲವ ಕನಸುಗಳೆ!
ಮುಂಜಾನೆಯ ಮಂಜಿನಲಿ ಮಿಂದೇಳುವ
ನನ್ನಿನಿಯನ ಕನಸು
ಬರುತಿರುವ ಕನಸಲೊಂದು ಹೊಸಕನಸು
ಮೂಡುತಿರಲು ಒಂದೊಂದು
ನಾವಿನ್ಯತೆಯ ಮಹಾಪರ್ವದಂತೆ!
ನೆನಪಿನ ಅಂಗಳದಿ ಭಾವನೆಗಳ ರಂಗವಲ್ಲಿಯ
ಕನಸುಗಳ ಚಿತ್ತಾರ ಮೂಡುತಿವೆ!
ಕನಸಿಗೂ ಮುನಿಸಂತೆ ಅದೆನೆಂದು ಹೇಳಲಿ
ಕೊಂಚ ಮಲಗಲು ತಡವಾಯಿತಷ್ಟೆ
ಮುನಿಸಿಗೂ ನೋವು ತಂದಂತಾಗಿದೆ!
ಉನ್ಮೀಳಿತವಾಗುತಿರುವ ಕನಸುಗಳು
ಸುರಿಸುತಿವೆ ಹರಿಸುತಿವೆ
ಭಾವಾಂತರಂಗದಲೆಗಳ ಸ್ಫೂರ್ತಿಯ ಬೇರ!.

ಅಭಿಜ್ಞಾ ಪಿ ಎಮ್ ಗೌಡ

-



ಕನಸೊಳಗಾದರೂ
ಮಾತನಾಡ್ಬೇಕು ಅವಳ ತುಂಟತನದ
ಮಾತುಗಳ ಹಾಸ್ಯದ ಜೊತೆ
ಒಲವ ಕನಸುಗಳೇ ಕಣ್ಮುಚ್ಚುವ ಸಮಯ
ಕಂಗಳ ಕಣ್ಮುಂದೆ ಹಾದು
ಹೃದಯದಂತರಾಳಕ್ಕೆ ಸಂಪರ್ಕ
ಹೊಂದುವ ಸಾಧನಗಳು
ನನ್ನಯ ಮುಗುಳ್ನಗೆಯ ಸ್ವಾಗತಕ್ಕೆಂದೆ
ಹೂವಂತ ಅದೃಷ್ಟ ಮುಖವ
ನೋಡಲು ಕನಸು ಕೂಡ ಕನಸು ಕಾಣಲು
ಹಾತೊರೆಯುವುದು ಈ ಕ್ಷಣ..

-


29 SEP 2019 AT 22:39

ಕನ್ಸು ಕಾಣೋಕೆ ಕಾಸ್ ಕೊಡಬೇಕಾಗಿಲ್ಲ
ನನ್ಸು ಮಾಡ್ಕೊಳಕೆ ತ್ರಾಸ್ ಪಡಲೇಬೇಕಲ್ವಾ

-


30 SEP 2019 AT 0:28

ಕನಸು ಕಾಣಲು ಇಲ್ಲ ನಿಯಮ,

ಹರಿದ ಬಟ್ಟೆಗಳ ನಡುವೆ ತೂತು,
ಹರಕೆ ಕಟ್ಟಿದರು ಸಿಗಲಿಲ್ಲ ತುತ್ತು,

ಉತ್ತು ಬಿತ್ತಲು ಮಳೆಗೆ ಕಾದ ರೈತ,
ಸಾಲ ಸೋಲದ ನಡುವೆ ಜೀವ ತೆತ್ತ,

ಬಳೆಯ ಸದ್ದು ಬಿರುಗಾಳಿಗೂ ಭಯವಿತ್ತು,
ಕೇರೆ ಹಾವೊಂದು ಹಾಡುಹಗಲೇ ಮೈ ಮೇಲೆ ಎಗರಿತ್ತು,



-



ನಿನಗಾಗಿ ನಾನಷ್ಟೇ ಅಲ್ಲ,
ನಕ್ಷತ್ರಗಳೂ ಕೂಡ ನಿದ್ದೆ
ಮಾಡದೆ ಕಾಯುತ್ತಾ
ಕೂತಿವೆ ನೋಡು..

-


29 SEP 2019 AT 23:25

ಊರೆಲ್ಲ ಉಂಡು ಮಲಗಿರುವಾಗ
ಇವನೇಲ್ಲಿಂದ ಬಂದ.
ಕನಸೊಂದು ಕಾಣೋ ಸಮಯಂತ.
😝😝😝

-


29 SEP 2019 AT 23:17

ಕನಸು ಕಾಣೋದು ಖಚಿತ
ನಿನ್ನ ನೆನಪುಗಳು ಉಚಿತ

-


29 SEP 2019 AT 23:05

ನಾ ಕಾಣೂವ ಕನಸು ನನಸಾಗಿಸುವ ಉದ್ದೇಶ ಮಾತ್ರ ಹೊಂದಿಲ್ಲ,
ಕನಸುಗಳು ಎಲ್ಲಿಂದ ಬರುತ್ತದೆ,
ಭಾವೋದ್ರೇಕ ಎಲ್ಲಿಂದ ಹುಟ್ಟುತ್ತದೆ,
ಸಂತೋಷ ಹೇಗೆ ದೊರೆಯುತ್ತದೆ,
ಎಂದು ನನ್ನನ್ನು ಸಂಪರ್ಕಿಸುವುದು ನನ್ನ ಕನಸಿನ ಮೂಲ ಉದ್ದೇಶ.

-


29 SEP 2019 AT 23:54

ಕನಸಲ್ಲೇ ಎಲ್ಲ ಕಾಣುವಂತಿದ್ದರೆ...
ವಿಜ್ನಾನಿಗಳು ಉಪಗ್ರಹ ಉಡಾವಣೆ
ಮಾಡುತ್ತಿರಲಿಲ್ಲ....

-


29 SEP 2019 AT 22:32

ಕನಸಗಳು ಸಿಕ್ಕಾಪಟ್ಟೆ ದುಬಾರಿ
ನನಸಾಗಬೇಕಂದ್ರೆ ಮಾಡ್ಕೊಳ್ಳೇ
ಬೇಕು ಸಾಕಷ್ಟು ಪೂರ್ವತಯಾರಿ

-