ನಶೆಯ ಮತ್ತಲ್ಲಿ ಖುಷಿಯ ಕಾಣದೆ
ಒಡೆದು ಹೋದ ಗಾಜಿನ ಡಬ್ಬಕ್ಕೆ
ಕುರುಡು ರಾಜನ ಗುಲಾಮನಾದೆ
ಐದು ವರ್ಷದ ಹಬ್ಬಕ್ಕೆ
ಕೊಟ್ಟ ಕಾಸನು ಬಿಟ್ಟು ಬಾರದೆ
ಇಟ್ಟೆ ಯಾಕೆ ನಿನ್ನನ್ನೇ ಮಾರಾಟಕ್ಕೆ
-
ನಾನು: ಇನ್ನೆಷ್ಟು ದಿನ ಹೀಗೆ ಇಣುಕಿ ನೋಡುವೆ,,,
ನೀನು: ಮನದ ಕಿಟಕಿಯನಷ್ಟೆ ತೆಗೆದಿರುವೆ,,ಬಾಗಿಲ ಚಿಲಕ ಯಾಕೆ ಮರೆತಿರುವೆ-
ಅರ್ಧ ಚಂದ್ರ ಯಾಕೆ ನಿದ್ದೆ ಮರೆತ,,,
ಕನಸಿನ ಕಾಲುವೆಯಲಿ ಕಡಲ ಕೊರೆತ
ಕಾಲ್ಗೆಜ್ಜೆ ಸದ್ದಾಗಲು ಮನಸೋತ
ನಿದ್ದೆ ಬಾರದ ಊರಲ್ಲಿ ಬಿದ್ದು ನಗುತ್ತಾ
ಗಾಯಗೊಂಡ ಹೃದಯಕ್ಕೆ ಮುಲಾಮು ಹಚ್ಚುತ್ತಾ
ಇಡಿ ರಾತ್ರಿ ಬಿಡಿ ಗುಡಿಗಳ ಅವಳಿಗಾಗಿ ಜೋಡಿಸುತ್ತಾ
ಮಿನುಗುತಾರೆಗಳ ಮಂದಿರದ ಸುತ್ತ ಸುತ್ತುತ್ತಾ,,,,
ಹೆಗಲ ಮೇಲೆ ಹೊತ್ತು ತಿರುಗೋ ಕನಸಿಗೆ ವಯಸ್ಸಾಗಿತ್ತಾ,,,-
ಮೊದಲ ಬಾರಿಗೆ ನಿನ್ನ ದಾರಿಗೆ ನನ್ನ ನಡಿಗೆ
ಕೂದಲ ಕೊನೆಗೆ ನನ್ನ ಮಲ್ಲಿಗೆ ನಿನ್ನ ಮುಡಿಗೆ
-
ಮುದ್ದು ಮನಸಿಗೊಂದು ಪೆದ್ದು ಹುಡುಗಿ ಬೇಕಂತೆ
ಮುದ್ದು ಮಾಡಬೇಕಂತೆ ,,,
ಖುದ್ದು ಕನಸಲಿ ,,ಮಳೆಯಾಗುವಂತೆ,,
ಸದ್ದು ಮಾಡಬೇಕಂತೆ ಗೆಜ್ಜೆ ನಾಟ್ಯ ಕಲಿತಂತೆ,,
ಕದ್ದು ತಂದ ಕಿವಿಯೋಲೆ,,,ವಠಾರ ಸುತ್ತಬೇಕಂತೆ,,
-
ಆಗಾಗ ನೆನಪಾಗುತಿ
ಚುಚ್ಚಬಹುದೆ ಮೂಗುತಿ
ಸದ್ದಾಗಿದೆ ಗೆಜ್ಜೆ ಕುಣಿದಾಗ
ನೆನಪಾಗಲು ನನ್ನ ನಾ ಮರೆತಾಗ
ಬೀಳುವಾಸೆ ಕೆನ್ನೆ ಗುಂಡಿಗೆ
ಒಡೆಯಬಾರದು ನನ್ನ ಗುಂಡಿಗೆ
ಮಳೆಗೆ ಚಳಿಯಾಗಿದೆ ಕೊಡೆಗೆ
ನಡಿಗೆಯ ಬಾಕಿ ಉಳಿಸಿರುವೆ ಬಾಡಿಗೆ
ಹೃದಯಕೆ ಯಾವಾಗ ನೀಡುವೆ ಕರೆಯೋಲೆ
ಅಂಗೈಯಲ್ಲಿ ಹಿಡಿದಿರುವೆ ಕಿವಿಯೋಲೆ
-
ಬಾಡಿಗೆಗೆ ಮನೆ ಪಡೆದು ಅಗ್ನಿ ಹಚ್ಚೊ ಮುನ್ನ,,
ನನ್ನವಳ ಹೆಸರಿತ್ತು ಕುಬೇರನ ಲಗ್ನ ಪತ್ರಿಕೆಯಲ್ಲಿ,,-
ಕಳಿದಾಸನ ಕವಿತೆಯ ಕಡ್ಡಿ
ದೇವದಾಸನ ಸಾಲದ ಬಡ್ಡಿ
ಗಂಧವ ತೀಡಿದ ಗೊಂಬೆ ಇವಳು
ಚಂದ್ರನ ಮುದ್ದಿನ ಕೊನೆ ಮಗಳು
-