ಈ ಸಂಜೆಯ ಸೊಬಗಿನ ರಮ್ಯ ಗೋಧೂಳಿಯ ಸಮಯ
ಹೊತ್ತು ಹುಟ್ಟಿ ಹೊತ್ತು ಮೀರಿದೆ ಅರ್ಕ ನಿರ್ಗಮನಿಸುವ ಸಮಯ
ಬೆಟ್ಟದ ತಪ್ಪಲಿನ ವೈಭೋಗದ ಅದ್ಧೂರಿತನ ಇಳೆಗೆ ಅನಾವರಣ
ಮುಯೂಖಗಳೆಲ್ಲ ಧರೆಗೆ ಮುತ್ತಿಡುತಿವೆ ಕಣ್ಮನ ಸೆಳೆಸುವ ಸಮಯ
ಪೃಥ್ವಿಗೂ ಅಂಬರಕ್ಕೂ ಒಂದೇ ಆಗಿದೆ ಕೆಂಧೂಳಿಯ ಆರ್ಭಟ
ಇವೆರಡರ ನಡುವೆ ದಿವ್ಯ ಆಡಂಬರದಲಿ ಏಕಾಂತ ಸೃಷ್ಟಿಸುವ ಸಮಯ
ಬಾನಾಡಿಗಳ ಕಲರವದ ರಗಡಿನ ನಭೋಮಂಡಲದ ಸನಿಹವದು
ಹೇಳಿ ಮಾಡಿಸಿದಂತಿದೆ ಕಂಪು ತಂಪಿನ ಸವಿಗಾನವು ಮೇಳೈಸುವ ಸಮಯ
ರೋಮಾಂಚನವಿದು ಅಹರ್ಪತಿಗೆ ಮುಸ್ಸಂಜೆಯ ಅಭಿಷೇಕದಲಿ
ತೇಲಾಡುವ ಮನಗಳಿಗೆ ರಂಗಿನೋಕುಳಿಯನು ಸಿಂಚಿಸುವ ಸಮಯ
ಸಂಧ್ಯಾ ಕಾಲವಿದು ರಂಗಿನ ರಾಗಲಹರಿಯೊಂದಿಗೆ ಮಿಂದೆದ್ದಿದೆ
ಧರಿತ್ರಿಯ ತುಂಬ ಈ ಸಂಜೆಯ ಬೆಡಗಿನ ಐಸಿರಿ ತುಂಬಿಸುವ ಸಮಯ
ಪ್ರತಿ ಮನೆಯಂಗಳದಿ ಚೆಲ್ಲಿದೆ ಹೊಂಬಣ್ಣದ ಬೆಳಕಿನ ಹೊಳಪು
ಮನದೊಳಗೆ ಹೊಂಬಿಸಿಲ ರಾಗ ರಿಂಗಣಿಸಿ ನವಿರೇಳಿಸುವ ಸಮಯ.!-
ಮುಂಜಾನೆಯ ಹೊಂಗಿರಣದ
ಚಿತ್ತಾರ ಮೂಡುತಿರಲು ಎಲ್ಲೆಲ್ಲೂ
ನೇಸರನ ಆಗಮನ
ಮೈಚಳಿಯ ಬಿಡಿಸುತಿರಲೂ
ಹೊಂಬೆಳಕಿನ ಹೊಂಬಾಳೆಯ
ಹೂ ಮಳೆಯ ಸಿಂಚನ
ಹಸಿರ ಮರೆಯಲ್ಲೂ ಇಣುಕುತಿವೆ
ಮೆಲ್ಲನೆ ಸ್ಪರ್ಶಿಸುತ
ಸುಪ್ರಭಾತ ಝೇಂಕಾರದ ಓಂಕಾರ
ಕರ್ಣಗಳಿಗಿಂಪು ತರುತಿರಲೂ
ನವೋಲ್ಲಾಸದಿ ಸಾಗೋಣ
ಈ ದಿನಕ್ಕೆ ಶುಭಕೋರೋಣ.!-
ಗುಲಾಬಿಯ ರಂಗಿನೋಕುಳಿ ಎಲ್ಲೆಲ್ಲೂ ಚೆಂದ
ಗನಹನೊಡೆಯನಿಗೂ ಇದುವೆ ಬಲು ಅಂದ
ಗದ್ದಿಗೆಯೊಳಗಿನ ಹೊಳೆಯುವ ಈ ಸುಮಗಂಧ
ಗಭಸ್ತಿಯ ಮಾಲಿಯೊಳು ಅಂಕುರಿಸುವ ಬಂಧ.!
ಗೆಳೆಯ ನೀ ಕೊಟ್ಟ ಗುಲಾಬಿಯ ಸೌಮ್ಯ ಮೆರಗು
ಗಮಲಿನೊಳು ಮಳೈಸುತಿಹೆ ಆಂತರ್ಯದಿ ಸೊಬಗು
ಗಮತ್ತಿನಲಿ ಮಿರುಗುವ ಕೆಂಪು ಗುಲಾಬಿಯ ಸೋಗು
ಗದ್ಯಾಣದಂತೆಯೆ ಸದಾ ಮಿಂಚುತಿರುವ ಗುನುಗು.!
ಗಮಕಕಲೆಯಂತೆಯೆ ಈ ಪುಷ್ಪ ಕಲಾಕೌಸ್ತುಭ
ಗಪ್ಪನೆ ಮನಸೆಳೆಯುತ ಮನಸೂರೆಗೊಂಡ ಸೌರಭ
ಗಂಭೀರ್ಯತೆಯೊಳು ಘನತೆಯಿಂದಿರುವ ಸೌರಂಭ
ಗತಕಾಲದಲ್ಲೂ ಪಸರಿಸುತಿತ್ತು ಇದರ ಆರಂಭ.!
ಗೆಣೆಕಾರನ ಈ ಗುಲಾಬಿ ಅಂತರ್ಗತದಿ ಮಿಂಚಿದೆ
ಗುಡಿಗೋಪುರಗಳಲ್ಲಿ ದಿಬ್ಬಣಗಳಲ್ಲೂ ಚಾಚಿದೆ
ಗುಚ್ಛದೊಳು ಸರ್ವರ ಹೃದಯಕೆ ಲಗ್ಗೆ ಇಟ್ಟು ನಿಂತಿದೆ
ಗುಂಪಿನೊಳು ಕಂಪುಇಂಪಿನ ಸೊಂಪು ಚೆಲ್ಲುತಿದೆ.!
ಗುರುತಿಸುವ ಈ ಸುಮವನದೊಳು ರಾಗಮಾಲಿಕೆ
ಗುಲಾಲುಗಳಲ್ಲಿ ಲಾಲೈಸುತಿರುವ ಅಭಿಸಾರಿಕೆ
ಗುಲಾಬಿಯೆಂಬ ಈ ಪುಷ್ಪಾಂಜಲಿಯ ಸ್ವರ್ಣಿಕೆ
ಗತ್ತು ಗಮ್ಮತ್ತಿನ ನನ್ನೊಲವು ನೀಡಿದ ಅವತರಣಿಕೆ.!
ಗುಮಾನಿಯಾಗಿದೆ ಈ ಗುಲಾಬಿಯ ಗುರುಬಲ
ಗುಲಾಬದಾನಿಯೊಳು ಹೊಳೆವ ನವಪಲ್ಲವದ ಜಲ
ಗೃಹವನದೊಳು ಕಾಯುತಿರುವ ನನ್ನ ಆತ್ಮಬಲ
ಗೆಳೆಯ ಈ ಗುಲಾಬಿ ನಿನಗಾಗಿ ನಂಬು ಓ ಜಲಿಲ.!-
ಈ ಅಂತರವಿನ್ನು ಅಗಾಧ
ಈ ಮೌನವಿನ್ನು ಮಹಾಮಾತು
ಈ ಕಂಬನಿಯಿನ್ನು ಕುಂಟುನೆಪ
ಈ ನಿಟ್ಟುಸಿರಿನ್ನು ನಿರಾತಂಕ...!!-
ಸುತ್ತುತ್ತಿರುವ ಭೂಮಿಯಂತೆ
ತಿರುಗುವ ಬುಗುರಿಯಂತೆ
ಈ ನಮ್ಮ ಜೀವನದ ಚಕ್ರವು
ಸದಾ ಸಾಗುತ್ತಿರುತ್ತದೆ
ಈ ನಮ್ಮಬದುಕಿನ ಚಕ್ರವು
ಹಾಳಾದರೆ ಬದುಕು ನಿಂತಂತೆ
ಮುಂದಕ್ಕೆ ಚಲಿಸಲಾಗದು
ಅದೇ ರೀತಿ ಭೂಮಿಯ
ಚಲನೆ ನಿಂತರೆ ಎಲ್ಲವೂ
ಅಯೋಮಯ ನಮ್ಮೆಲ್ಲರ
ಊಹೆಗೂ ಮೀರಿ
ಏನೇನೋ ಸಂಭವಿಸಬಹುದು.-
ನಮ್ಮವರು ಅಂದು ಕೊಂಡವರೆಲ್ಲಾ !
ನಮ್ಮ ಜೊತೆ !
ಎಲ್ಲಾ ಸಮಯದಲ್ಲಿ ಒಂದೇ ತರ ಇರ್ತಾರೆ !
ಅಂದುಕೊಳ್ಳೋದು ನಮ್ಮ ತಪ್ಪು !!
ಈ ಪ್ರಪಂಚದಲ್ಲಿ ಸಮಯಕ್ಕಿಂತ ವೇಗವಾಗಿ !
ಬದಲಾಗೋದು !
ಮನುಷ್ಯನ ಮನಸ್ಸು ಮತ್ತು ಆಲೋಚನೆ ಮಾತ್ರ !-
೧.🥰ಬರಹ ನನ್ನದೆ ಆದರೆ ವ್ಯಥೆ ನನ್ನದಲ್ಲ😔
🧡ಪ್ರೀತಿ ನನ್ನದೆ ಆದರೆ ವಿರಹ ನನ್ನದಲ್ಲ🤦
🤔 ನಗುವೇ ಸರ್ವಾಸಾಂತ್ವನ ದುಃಖವಲ್ಲ😔
🤔 ಜೀವನವೆಂದರೆ ಬರೀ ಸುಖವಲ್ಲ😴
೨.😴ಭವಿಷ್ಯದ ಗೊಡವೆಗಳ ಚಿಂತೆಯಿಲ್ಲ🥺
🤔ಭೂತದ ನೆನಪುಗಳ ವ್ಯಥೆಯಿಲ್ಲ🤔
🤛ನನ್ನದು ಎನ್ನಲು ಇಲ್ಲಿ ಎಲ್ಲ ಇದ್ದರೂ🥺
⛓️ನನ್ನದು ಎನ್ನಲು ಇಲ್ಲಿ ಏನು ಇಲ್ಲ🤔
🤔Be happy no bp 🤔-
ಒಂದು ಎರಡು ಮೂರು!!
ಶುರುವಾಯಿತು ಐಪಿಎಲ್ ಫೀವರು..
ನಾಲ್ಕು ಐದು ಆರು!!
ಅಬ್ ಕಿ ಬಾರ್ ಆರ್ ಸಿಬಿ ದಬಾ೯ರು..
ಏಳು ಎಂಟು ಒಂಬತ್ತು!!
ನಾವು ಆರ್ ಸಿಬಿಯನ್ ಯಾವತ್ತು..
ಹತ್ತು ಹನ್ನೊಂದು ಹನ್ನೆರಡು!!
ಈ ಸಲ ಕಪ್ ನಮ್ದೇ ನೋಡು..-