ಮುಂದಿನ ಜನ್ಮ ಅಂತ ಇದ್ರೆ
ದಿನಕ್ಕೊಂದು ಕನಸು ಹೊತ್ತುತರುವ ಹಗಲಾಗುವಾಸೆ...
ದಿನದ ನೋವೆಲ್ಲಾ ಮರೆಸಿ ನಿದ್ರೆಯ ಪವಣಿಸುವ ಸಿಹಿ ರಾತ್ರಿಯಾಗುವಾಸೆ...
ಒಡಲ ತಣಿಸುವ ಮಳೆಯಾಗುವಾಸೆ...
ಮನ ತಣಿಸುವ ಇಳಿಸಂಜೆಯ ತಂಗಾಳಿಯಾಗುವಾಸೆ...
ಮುಖದ ಅಂದ ಹೆಚ್ಚಿಸುವ ನಗುವಾಗುವಾಸೆ...
ದುಃಖವನ್ನು ಹೊರಹಾಕಿ ಕಲ್ಮಶ ಮನವ ಸ್ವಚ್ಛಗೊಳಿಸುವ ಅಳುವಾಗುವಾಸೆ...
ಬದುಕ ಸುಂದರಗೊಳಿಸುವ ಪ್ರೀತಿಯಾಗುವಾಸೆ...
ಎಲ್ಲವನ್ನು ಮೀರಿಸುವ ಸ್ನೇಹವಾಗುವಾಸೆ...
ಕುಂಬಾರ ಮಾಡಿದ ಹಣತೆಯಾಗುವಾಸೆ..
ಹಣತೆಯಲ್ಲಿ ಪ್ರಜ್ವಲಿಸುವ ಜ್ಯೋತಿಯಾಗುವಾಸೆ..🙏🏻
-
ಒಂದು ಕಡೆ ಕೈ ಮುಗಿದು ಪ್ರಚಾರ ಮಾಡುತ್ತಿರುವರು ಜನಪ್ರತಿನಿಧಿಗಳು ವೋಟಿಗಾಗಿ
ಇನ್ನೊಂದು ಕಡೆ ಅದೇ ಜನಪ್ರತಿನಿಧಿಗಳಿಗೆ ಕೈಮುಗಿದು ಬೇಡಿಕೊಳ್ಳುತ್ತಿಹರು ನಿರಾಶ್ರಿತರು ನೆಲೆಗಾಗಿ-
ನಿಸ್ವಾರ್ಥದ ಬದುಕಿನ ನಾಯಕನಾಗಬೇಕಾದವನು ಅಸಹಾಯ ಅನ್ಯಾಯ ಅತಿಆಸೆಗಳ ಮಾಡುತ್ತಾ 'ಸ್ವಾರ್ಥಿ' ಕಥೆಗೆ ಸಾರಾಂಶವಾದನು
-
ಹೋಗಿದೆ ಹೃದಯ ನಿನ್ನ ಸೆಳೆತಕ್ಕೆ ಹೌಹಾರಿ
ಮೆಲ್ಲನೆ ಬಿದ್ದಿದೆ ಮೋಹದ ನಾಲೆಗೆ ಜಾರಿ
-
ತಂಗಾಳಿ ಬೀಸುವ ಇಳಿಸಂಜೆಯ ಹೊತ್ತಲ್ಲಿ
ಕೆಂಪಾದ ರಂಗು ರಂಗಿನ ಅಂಬರವ ಸಿಂಗರಿಸುತ
ದಿನಕರನು ದಿನಚರಿಯ ಮುಗಿಸಿಹನು
ತನ್ನ ಪಶ್ಚಿಮ ಮನೆಯ ಸೇರುತಿಹನು
ಮತ್ತೇ ಬರುವೆನೆಂದು ಸುದ್ದಿ
ಸಾರುತ ಇರುಳಿಗೆ ಆಹ್ವಾನಿಸಿಹನು
ಶಶಿಗೆ ರಾತ್ರಿಯ ಚೆಲುವ ಹೆಚ್ಚಿಸಲು
ಕರೆಕೊಟ್ಟು ಸದಿಲ್ಲದೆ ಮಾಯವಾಗುತಿಹನು.
-
ಮನೆಯಲ್ಲಿಯೇ ಇರು ನೀನು ಸುರಕ್ಷಿತ
ಹೊರಬಂದರೆ ಆಗುವೆ ನೀ ಕೊರೋನ ಸೋಂಕಿತ-
ನಾ ನಿನ್ನ ಡಿಯರ್ ಜಾನು
ನಿನಗಾಗಿ ತಂದಿರುವೆ ನಿನಗಿಷ್ಟದ ಜಾಮೂನು
ಎಲ್ಲಿರುವೆ ಬೇಗ ಬಳಿ ಬಾ ನೀನು
ಕಾದಿರುವೆ ನಿನಗಾಗಿ ಇಲ್ಲಿ ನಾನು-
ಅವಳು
ಕೆಂದುಟಿಯ
ಕಿರುನಗೆಯ
ನಾರಿ
ಹೃದಯ
ಬಡಿತವ
ಹೆಚ್ಚಿಸಿದ
ವಿಹಾರಿ
ಅವಳು
ಕಣ್ಣಲ್ಲೇ
ಪ್ರಣಯ
ಗೀತೆ
ಹಾಡಿದ
ಲಹರಿ
ಎದೆಯಂಗಳದಲ್ಲಿ
ತಂಗಾಳಿ
ಎಬ್ಬಿಸಿದ
ಚಕೋರಿ
-
ವಿದೇಶದಿಂದ ಬಂದ ಕೊರೋನ
ಹುಟ್ಟಿಸಿದೆ ಎಲ್ಲರಲ್ಲೂ ಭಯಾನ
ಸುರಕ್ಷಿತವಾಗಿ ಮನೆಯಲ್ಲೇ ಇರೋಣ-
ವಿಶ್ವದೆಲ್ಲೆಡೆ ಈಗ ಕಣ್ಣಿಗೆ ಕಾಣದ ಜೀವಿಯ ನತ೯ನ
ತಡೆಗಟ್ಟಲು ಹಾಕಲಾಗಿದೆ ಜನರಿಗೆ ಗೃಹಭಂದನ
ಆದಷ್ಟು ಬೇಗ ಆಗಲಿ ಜಗತ್ತಿನಿಂದ ಈ covid-19 ನ ಪಲಾಯನ
-