ಹಾಯಾಗಿ ನಗುತ್ತಾ ಮಿನುಗುತ್ತಿದೆ
ನನ್ನನ್ನು ನೋಡಿ !!!
ನನ್ನಂತೆ ಆಕರ್ಷಕವಾದ,
ಸದಾ ನಗುಮುಖದಿಂದ
ಕಂಗೊಳಿಸುವ ತಾರೆಯೊಂದು
ನನ್ನನ್ನು ಹೋಲುವಂತಿದೆಯಲ್ಲಾ ಎಂದೂ 😍😍-
ಅವನ ಇರುವಿಕೆಯಾಸರೆಯಲ್ಲಿ
ಒಂದಷ್ಟು ಭಾವಗಳ ಬಸುರಾಗಿದ್ದೆ ನಾನು,
ಚಂದ್ರಮನ ಆಸರೆಯಡಿಯಲ್ಲಿ
ಅಸಂಖ್ಯ ಆಗಸವು ತಾರೆಗಳ ಹಡೆದಿತ್ತು !-
ಅಸಂಖ್ಯ ಜೀವರಾಶಿಗಳ ಮನದ
ನೋವುಗಳ ಒಡಲೊಳಗೆ
ಬಚ್ಚಿಟ್ಟುಕೊಂಡಿರುವವ,
ಆದರೂ ಅವನದು ಮತ್ತದೇ
ಪ್ರಖರತೆ !
ಎಲ್ಲವ ಹೇಳಿ ಕಳೆದುಕೊಂಡ ಮೇಲೂ,
ಕಾಡುವ ಈ ಆರ್ದ್ರ ಭಾವವ
ತುಸು ನೀನೂ ಉಳಿಸಿಕೊ
ಎಂಬಂತೆ ಮರೆಗೆ ಸರಿಯುವ ನೀನು !!-
ಅದೆಷ್ಟು ಎತ್ತರ
ಕಣ್ಣಿಗೆ ತುಂಬ ಹತ್ತಿರ.
ನೋಡುತ್ತಿದ್ದರೆ ಆ ನೀಲವರ್ಣ
ಖುಷಿಯಾಗುವೆನು ಸಂಪೂರ್ಣ.
ಊಹೆಗೂ ನಿಲುಕದ ಗಗನ
ಆಗುವೆನು ನಿನ್ನೊಂದಿಗೆ ಲೀನ..!-
ಎಲ್ಲವನ್ನು ತನ್ನೊಳಗೆ ಸೇರಿಸಿಕೊಳ್ಳುವ ಕಡಲು ಭುವಿಯ ಒಡಲ ಮೇಲೆ ಸೂರು ಪಡೆದಿದೆ.
ತನ್ನಲ್ಲಿರುವ ವರ್ಷವನ್ನೆಲ್ಲ ಧಾರೆಯಾಗಿ ಭುವಿಗೆ ಹರಿಸಿ ತಂಪೆರೆಯುವ ಮೋಡಗಳು ಆಗಸದಲ್ಲಿ ಸ್ಥಾನ ಪಡೆದಿವೆ...
( ಸಾಧ್ಯವಾದಷ್ಟು ಮೋಡಗಳಂತೆ ಎತ್ತರದ ಸ್ಥಾನದಲ್ಲಿರಲು ಪ್ರಯತ್ನಿಸಿ )-
ಭಾಮಿನಿ ಷಟ್ಪದಿ
*****
ಅದೇನೋ ಸೆಳೆತ ನೀಲ್ಮುಗಿಲಲಿ
ವದನವರಳಿಸುವ ಕಲೆಯಡಗಿದೆ
ಹದದಿ ಮೇಲುಬ್ಬಿಳಿವ ನೀಲಾಗಸದಲಿ, ಕೂಡಿದೆ
ಪದಗಳಂತೆ ಶರಧಿಯಲಿ ಮುಗಿಲು
ಕದಲದೆ ಕುಳಿತ್ತಿದೆ ನಯನವು
ಮುದವ ನೀಡುವ ಸಾಗರದಂಚಿನ ಸನಿಹದಲ್ಲಿಂದು-
ತಾರೆಗಳ ಎಣಿಸುವ ಭರದಲ್ಲಿ ಮರೆತ ನನ್ನನ್ನ
ಬೀಸುವ ಬಿರುಗಾಳಿ ಬಿಟಿತ್ತೆ ನಿನ್ನನ್ನ
-
ಆಗಸದಿ ಮೋಡ ಕಟ್ಟಿ
ಮನದೊಳಗೆ ಸುನಾಮಿ ಎದ್ದಿದೆ
ಬಹುಶಃ ಅದು ಶಾಂತವಾಗುವುದು
ನಿನ್ನ ಬಿಗಿದಪ್ಪುಗೆಯಲ್ಲಿ ಅನಿಸುತ್ತಿದೆ.
-