ವಿಸ್ಮಯದ ಚಿಗುರು
ಬಾಂದಳದ ಉಸಿರು
ಉಸಿರುಸಿರಿಗೆ ಜೀವ ತುಂಬೋ
ಮಡಿಲು ಅದುವೆ ಅಮ್ಮನೊಡಲು
ನಿಸರ್ಗದತ್ತ ಕೊಡುಗೆ
ಅದುವೆ ಜನ್ಮತಂತುವಿನ ಸೊಬಗೆ
ತನ್ನೊಡಲೊಳು ನವಮಾಸ
ಹೊತ್ತು ಅನುಭವಿಸುವ
ನೋವು ನಲಿವಿನ ಸಂಪದ
ಸಪ್ತಸ್ವರ ಲಹರಿಯೊಳು
ಏರಿಳಿತದ ಚಿತ್ರಾವಳಿ ಅದುವೆ
ಗರ್ಭದೊಳು ಆಡುವ ಕಂದನ
ಪ್ರಭಾವಳಿಯ ಹರ್ಷೋದ್ಘಾರ
ಒಡಲೊಳಗೆ ಕಡಲಲೆಗಳ ಆರ್ಭಟ
ಹಸುಳೆಯ ಕಾಲೊದೆತದ ಸಂತಸದ ಆಟ
ಒಮ್ಮೊಮ್ಮೆ ಭಾವಶರಧಿಯ ಅಲೆಗಳಂತೆ
ಮೌನ ಮೆರವಣಿಗೆಯ ಸಾದರ
ಮುಗ್ದಮನದ ಆಟೋಟಗಳ ಬಿತ್ತರ
ದೈವಸ್ವರೂಪದ ಮಾತೆ ಆನಂದ
ಅದೆಂತ ನೋವುಗಳ ಸಹಿಸಿ ನೀಡುವಳು ಜನ್ಮ
ನಿಜಕ್ಕೂ ಇವಳು ಹೆಣ್ಣಲ್ಲ ದೇವತೆ
ಅದ್ವಿತೀಯ ದೈವ ಸ್ವರೂಪಿಣಿ
ಅವರ್ಣನೀಯ ಕಣ್ಮಣಿ
ಅಮೋಘ ಅನನ್ಯತೆಗೆ ಹೆಸರು
ಇವಲೊಡಲ ತೊಟ್ಟಿಲು
ಅದುವೆ ನವ ಜೀವದ ಬಾಳಿಗೆ ಮೆಟ್ಟಿಲು.!
ಅಭಿಜ್ಞಾ ಪಿ ಎಮ್ ಗೌಡ
-
ಸೀರೆಯ ಸೆರಗಂಚಿನಲಿ ಕೂಡಿಟ್ಟ ಕಂಬನಿಯು
ಸಾಲುಸಾಲು ಕಥೆಗಳ ಹೆಣೆಯುತಿದೆ, ನೋವಿನ ಸರಮಾಲೆಗೆ ಒಂದೊಂದೇ ಹನಿಗಳ ಪೋಣಿಸಿ..!!
ಸುರಿಸುವ ಪ್ರತಿ ಬೆವರು ಹನಿಗಳು ಹಸಿವಿನ
ಹಾಹಾಕಾರದ ಚಿತ್ರಣವನ್ನೇ ಬಿಚ್ಚಿಟ್ಟಿವೆ,ಬಡತನದ
ಬೇಗೆಯಲ್ಲಿ ಬೆಂದು ಮರುಗಿದ ಕ್ಷಣವನ್ನರಿತು...!!
ಕೂಡಿಟ್ಟ ಕನಸುಗಳನ್ನು ಚಿತೆಗೇರಿಸಿ ಉರಿಯುವ
ಜ್ವಾಲೆಯಲಿ ನಾಳಿನ ಭವಿಷ್ಯ ಅರಿತ ಅವಳು,
ಮಂದಹಾಸದ ಮುಖವಾಡವನ್ನೇಕೆ ಧರಿಸಿದಳು....!!
ನಿಂದಿಸಿ ತುಳಿದ ಜಗಕೆ ತಾನೇನೆಂದು ತೋರಿಸಲು
ಛಲಬಿಡದ ನಾರಿ ತನ್ಮಕ್ಕಳ ಗೆಲುವನ್ನೇ
ಉತ್ತರವಾಗಿಟ್ಟಳು,ಕೊನೆಗೂ ಮೌನ ಮುರಿದು ...!!-
ಎಂದಿಗೂ ಮಾಸದ ಪ್ರೀತಿ
ಅವಳದು, ಉಸಿರು
ನೀಡಿ ಮಡಿಲಲ್ಲಿ ಮಗುವಾಗಿಸಿದಳು....
ನಿಸ್ವಾರ್ಥಿ ನನ್ನವಳು ನೋವನ್ನು
ಮರೆಯಾಗಿಸಿ ತನ್ನೆಲ್ಲ
ನಗುವನ್ನು ನನ್ನೊಳು ಕಾಣುವವಳು....
ಸಹನೆಯ ಪ್ರತಿರೂಪ ಅವಳು
ಅದೆಷ್ಟೇ ಕಷ್ಟಗಳು
ಬಂದರು ದೃಢವಾಗಿ ನಿಲ್ಲುವವಳು.....
ಕೋಪದ ಬದಿಯಲ್ಲಿ ಕಾಳಜಿ
ತೋರಿಸಿ ,ದಾರಿದೀಪ
ಆದವಳು ಕ್ಷಮಯಾಧರಿತ್ರಿ ನನ್ನವಳು.....
ಬಲು ಅಂದಗಾತಿ ಅವಳು
ಬೆಳದಿಂಗಳೇ ನಾಚುವಂತ
ನಗುವಿನ ಒಡತಿ ನನ್ನವಳು.......-
"ಅಮ್ಮ"
ತೊದಲು ನುಡಿಯುವ
ಮೊದಲ ನಾನೇ
ಕಲಿತ ಮೊದಲು ಪದ ಅಮ್ಮ.
ಇಟ್ಟ ಮೊದಲ ಹೆಜ್ಜೆ ತಪ್ಪಿ
ಬಸವಳಿದು ಬಿದ್ದಾಗ
ಅತ್ತು ಕರೆದದ್ದು ಅಮ್ಮ.
ಮೊದಲ ದಿನ ಶಾಲೆ
ಮೆಟ್ಟಲೇರಿ ಹತ್ತು
ಹೊಸ ಮುಖಗಳ ನೋಡಿ ಹೆದರಿ
ಅತ್ತು ಕೂಗಿದ್ದು ಅಮ್ಮ.
ಕಷ್ಟಗಳು ಬಂದಾಗ,
ಇಷ್ಟಗಳು ನೆರವೇರದಾಗ
ಮನ ಬಯಸಿದ ಸಾಮೀಪ್ಯ ಅಮ್ಮ.
ಪ್ರಶ್ನೆಗಳು ಉಳಿದ ಉತ್ತರಗಳು
ಗೋಚರಿಸಿದಿದ್ದರೂ ಮಡಿಲು
ನೀಡಿ ಬರಸೆಳೆದದ್ದು ಅಮ್ಮ.-
ನನ್ನವಳನ್ನು ಪ್ರೀತಿಸೋದು ಎಷ್ಟು ಸತ್ಯಾನೊ
ನನ್ನವ್ವಳನ್ನು ಪ್ರೀತಿಸೋದು ಅಷ್ಟೇ ಸತ್ಯ
ನನ್ನವಳನ್ನು ದೂರಮಾಡಬಹುದು
ಆದ್ರ ನನ್ನವ್ವಳನ್ನು ದೂರಮಾಡಲಸಾಧ್ಯ
ನನ್ನವಳು ಮತ್ತೊಬ್ಬಳಾಗಬಹುದೇನೊ
ಆದ್ರ ಮತ್ತೊಬ್ಬಳು ನನ್ನ ಅವ್ವ ಆಗಲಸಾಧ್ಯ-
ನಗುತಿರು ನನ್ನವ್ವ
ನಿನ್ನೆಲ್ಲ ನೋವುಗಳನ್ನು
ನನ್ನ ಹೆಗಲೇರಿಸಿ ....
ಆ ನಿನ್ನ ನಗುವಿನಲ್ಲಿ
ಅಡಗಿದೆ ಎನ್ನಯ ಖುಷಿ...
ನೀ ನನ್ನ ಜೀವನದ
ರಾಜಮಾರ್ಗಕ್ಕೆ ಋಷಿ....-
ಅವ್ವ,
ನಿನ್ನ ಮಡಿಲೊಳು ಅಡಗಿದ ಸುಖ
ಸ್ವರ್ಗಕ್ಕಿಂತ ಮಿಗಿಲು
ಅದರೊಳು ಅಡಗಿ ಕೂರಲು
ನನಗಿಲ್ಲ ಯಾವುದೇ ದಿಗಿಲು-
ಉತ್ತು ಬಿತ್ತಿದ ಭತ್ತವಾದರೂ
ಮಳೆಯಿಲ್ಲದೆ ಮೊಳೆಯದು..
ಬೆಳೆದು ಸಾಧಿಸಿ ಎತ್ತರಕ್ಕೇರಿದರೂ
ಅವ್ವನ ತ್ಯಾಗವ ಮರೆಯಬಾರದು..-