ಕರಗದಷ್ಟು ಪ್ರೀತಿ ಅನ್ನೊ ಆಸ್ತಿ ಕೊಟ್ಟ ಸಾಹುಕಾರ
ಮಡದಿ ಮಕ್ಕಳ ಮನಸ್ಸು ಗೆದ್ದ ಮನೆ ವಾರಸುದಾರ
ಎಲ್ಲರ ಕಷ್ಟ ಸುಖಃದಲ್ಲಿ ಆಗುವ ಪಾಲುದಾರ
ಮಕ್ಕಳ ಖುಷಿಯಲಿ ತನ್ನ ನೋವ ಮರಿಯೋ ಸಾಹುಕಾರ
ತಪ್ಪು ತಿದ್ದಿ ತಿಳಿಸಿ ಹೇಳೋ ಸಲಹೆಗಾರ
-
ಪರಿಪೂರ್ಣತೆಯ ಪ್ರತಿಬಿಂಬ ಅಪ್ಪ
ಹೆಸರಿಡಲೂ ಗೊಂದಲವುಂಟಾಗುವ ಭಾವ ಅಪ್ಪ
ಸೌಮ್ಯತೆಯ ಸಾಗರ ಅಪ್ಪ
ನಂಬಿಕೆಯ ಬುನಾದಿ ಅಪ್ಪ
ಸ್ವಾರ್ಥತೆಯ ತದ್ವಿರುದ್ಧ ರೂಪ ಅಪ್ಪ
ಆತ್ಮವಿಶ್ವಾಸದ ನಾಂದಿ ಅಪ್ಪ
ಅಗಣ್ಯ ಗುಣಗಳ ಗರಿಷ್ಠ ಮಟ್ಟ ಅಪ್ಪ
ಆಕಾಂಕ್ಷೆಗಳ ಅಭೂತಪೂರ್ವ ಅಚ್ಚರಿ ಅಪ್ಪ
ಸರಳತೆಯ ಅಪರೂಪದ ಮಾಣಿಕ್ಯ ಅಪ್ಪ
ನೊಂದ ಮನಕೆ ನವಚೈತನ್ಯ ಅಪ್ಪ
ಅದ್ಭುತವನ್ನೇ ಮೀರಿಸುವ ದೈವಸೃಷ್ಟಿ ಅಪ್ಪ
ಅಗಾಧ ಪ್ರೀತಿಯ ಕಡಲು ಅಪ್ಪ
ಚಾಂಚಲ್ಯ ಚಿಂತನೆಗಳ ಚಿಕಿತ್ಸಕ ಅಪ್ಪ
ಅಭಿಮಾನದ ಅನುರೂಪಿ ಅಪ್ಪ
ಮುಗ್ಧತೆಯ ಸ್ವರೂಪಿ ಅಪ್ಪ
ತಾ ನೊಂದು ತನ್ನವರಿಗಾಗಿ ಬದುಕೋ ಏಕೈಕ ಜೀವ ಅಪ್ಪ
ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪಾ......-
"ಅಪ್ಪ ಎಂಬ ಅದ್ಭುತ.."
ಆ ನಗುಮೊಗದಲಿ ಮರೆಮಾಚುವೆ ಕಷ್ಟಗಳನ್ನು ನೀನು
ನನಗೇನು ಬೇಕೆಂದು ಎಂದೂ ಕೇಳಿಲ್ಲ ನಾನು
ಕೇಳದೆಯೇ ಅದನ್ನೆಲ್ಲ ನನ್ನ ಕಣ್ಮುಂದಿರಿಸಿದೆ ನೀನು ಚಿಪ್ಪಿನೊಳಗಿರುವ ಮುತ್ತಿನಂತೆ ನನ್ನ ಜೋಪಾನಿಸುತ್ತಿರುವೆ ನೀನು
'ನಿನಗೆ ಈ ಭುವಿಯಲಿ ಸರಿಸಾಟಿ ಏನು..!!'-
ನನ್ನ ಅಪರಿಪೂರ್ಣತೆಯಲ್ಲಿ ಪರಿಪೂರ್ಣಳಾಗಿದ್ದೇನೆ,
ನನ್ನ ಬಲಹೀನತೆಯಲ್ಲಿ ಬಲವಾಗಿದ್ದೇನೆ,
ನನ್ನ ನೋವಿನಲ್ಲಿ ನಗುತ್ತಿದ್ದೇನೆ,
ನನ್ನ ಆಂತರ್ಯದಿಂದಲೇ ಸುಂದರಳಾಗಿದ್ದೇನೆ, ಏಕೆಂದರೆ ನಾನು ನಾನಾಗಿದ್ದೇನೆ;
ಹಾಗೆಯೇ ನನ್ನೊಂದಿಗೆ ಅವನಿದ್ದಾನೆ.-
ಅಪ್ಪ ಎಂಬ ಅಕ್ಷರವ
ಹೇಗೆ ವರ್ಣಿಸಲಿ,
ಆರು ಜನ್ಮಗಳು ಬೇಕು
ಅಪ್ಪ ಎಂಬ ಪದದ
ಬರೀ ಒಂದು ಪೀಠಿಕೆಯ
ವಾಕ್ಯ ಹೊಗಳಲು...-
ಅಪ್ಪನೆಂದರೆ ಕೆಲವು ಮಕ್ಕಳಿಗೆ ಆತ್ಮೀಯನಾಗುವುದಕ್ಕಿಂತ ನಿರ್ಭಾವುಕವೆನಿಸುವ ವ್ಯಕ್ತಿತ್ವದವನಾಗಿರುತ್ತಾನೆ....
ಜನುಮ ನೀಡಿ ಮಕ್ಕಳನ್ನೇ ಮರೆತ ತಂದೆ...
ತಾಯ ಮೇಲೆ ನಮ್ಮ ಭಾರ ಹೊರಿಸಿ ನೀ ಎಲ್ಲಿ ನಿಂದೆ...
ಅರಿಯದೆ ಹೋದೆಯಾ ಜಗದ ನಿಂದೆ..
ಎಲ್ಲಾದರೂ ಇರುವೆಯಾ, ಸಿಗುವೆಯಾ ಎಂದಾದರೂ ಮುಂದೆ...
ಕೈಬಿಟ್ಟ ನಿನ್ನ, ಮನವೇಕೆ ನೆನೆಸಿ ಬಯಸಿದೆ.....
ಬೇಡ ಬಿಡು ಸಿಗದಿರು ಎಂದೂ,
ಅಪ್ಪಂದಿರ ದಿನಕೆ ನೆನಪಾದೆ ಅಷ್ಟೇ....
-
ಅಪ್ಪ !
ಅವ್ವನ ಪ್ರೀತಿ ಭೂಮಿ ಇದ್ದಂಗ 🌎
ಹೆಂಗರ ಪ್ರಯತ್ನ ಪಟ್ರ ಅಳತಿ ಸಿಗತೈತಿ
ಆದ್ರ ನಿನ್ನ ಪ್ರೀತಿ ಆಕಾಶ ಇದ್ದಂಗ 🌌
ಅದನ್ನ ನಾ ಹ್ಯಾಂಗ್ ಅಳೀಲಿ..??-
ಆಗಸವ ಕೈಯಲ್ಲಿ ಹಿಡಿಯುವ ಹಂಬಲ
ನೀನಾದೆ ನನಗೆ ಬೆಂಬಲ
ಅದ್ವಿತೀಯ ಅಪ್ಪಟ ಬಂಗಾರ
ನನ್ನೇಲ್ಲ ಇಚ್ಚೆಗಳ ಈಡೇರಿಸುವ ಸಾಹುಕಾರ
ಸಾಗರದಿ ಹೊಳೆಯುವ ಮುತ್ತು
ನೀ ನೀಡಿದ ಬೆಳದಿಂಗಳ ಕೈತುತ್ತು
ಬದುಕಿಗೆ ಆಸರೆ ನೀ
ನನ್ನ ಪ್ರೀತಿಯ ಅಗಣ್ಯ ಸಂಪತ್ತು
ಹಸಿಮುನಿಸಿನ ತುಸು ಕೋಪಕೆ
ನೀನಾದೆ ಪ್ರೀತಿಯ ಲಸಿಕೆ
ಗದರು ಮೀಸೆಯ ಹೃದಯವಂತಿಕೆಯ ತಾಯಿ
ನನ್ನೊಳಗೆ ನಿನ್ನ ಪ್ರೀತಿಯ ಸಾಲೇ....
ಅಕ್ಕರೆಯ ಅಗಣಿತ ಸಾಲು
ಪೋಣಿಸಿದರು ಸಾಲದು
ಪದಗಳಿಲ್ಲ ಶಬ್ದಕೋಶದಿ
ನಿನ್ನ ವರ್ಣಿಸಲು ಅಪ್ಪ .....
✍Thilaka kulal
-