ಪಡೆಯಬಹುದು ಪಡೆಯಬಹುದು
ಅಂಥವನ ಪ್ರೇಮ ಪಡೆಯಬಹುದು
ಯಾವ ಹೆಣ್ಣ ಒಲ್ಲೆ ಎಂಬುವವನ
ಪ್ರೇಮ ಪ್ರೀತಿ ಒಲವ ಓಲೈಸಬಹುದು
ಏಳು ಜನುಮ ಅವನಿಗಾಗಿ
ಕಾಲಗಣನೆ ಮರೆತು ಕಾದರೂ ಸರಿ
ಮರುಜನುಮದಿ ಅವನ ನೆನಪು
ಮರಳಿ ಮರಳಿ ಮರುಕಳಿಸಿದರೂ ಸರಿ
ಹೇಗೆ ಪಡೆಯಲಿ ಇವನ ಒಲವ
ಆ ಹೆಣ್ಣು ಸರಿ ಈ ಹೆಣ್ಣು ಸರಿಯಿಲ್ಲವೆಂದು
ಹೋಲಿಕೆ ಮಾಡಿ ಒಲವ ನೀಡುವವನ
ಅವನೊಲವು ಎಂದಿಗೂ ಬರೀ ನಟನೆಯಲ್ಲವ!
-
ಸಾವ ಸೂತಕದ ಕರಿ ಛಾಯೆ
ಜೀವ ಜಗದೊಳಗೆ.
ಜೀವ ಜನನ ಸಂಭ್ರಮದ ಮಾಯೆ
ನನ್ನೊಡಲೊಳಗೆ.
ಅಲ್ಲೆಲ್ಲೋ ಮುಳುಗುತಿರುವ
ಜೀವ ಕಂಡಿದೆ ಸಾವ.
ಇಲ್ಲೆಲ್ಲೋ ಈಗ ತಾನೇ ಏಳುತಿರುವ
ಜೀವ ಕಾಣಬಯಸಿದೆ ಬೆಳಗಜಾವ.
-
ಜಗದ ಗೋಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷಣಕ್ಕೊಂದು ನೂತನ ವಸ್ತು ವಿಸ್ಮಯವನ್ನು ಆವಿಷ್ಕರಿಸುತ್ತಿಲ್ಲ ಎಂಬುದರಲ್ಲಿ ಇಲ್ಲ.
ಆವಿಷ್ಕರಿಸಿದ ವಿಸ್ಮಯಕಾರಿ ವಸ್ತುಗಳು
ಎಲ್ಲರಿಗೂ ಅಗತ್ಯಕ್ಕೆ ತಕ್ಕಂತೆ ಸಿಗುತ್ತಿಲ್ಲ ಎಂಬುದರಲ್ಲಿದೆ.-
ನಡೆದು ನಡೆದು ಸುಸ್ತಾಗಿ
ತವರೂರ ತಲುಪಲೊಂದು
ರೈಲು ಕಳುಹಿಸೆಂದು
ದೇವನಲಿ ಬೇಡಿದೆ ಕೈ ಮುಗಿದು
ಮಲಗಿ ರೈಲು ಕಂಬಿ ಹಿಡಿದು
ದೇವನು, ನಿನ್ನ ತವರೂರು ಇಲ್ಲಿಲ್ಲ
ಸುಸ್ತಾಗದಿರುವ ಸ್ವರ್ಗದ
ತವರೂರಲಿ ವಿಶ್ರಾಂತಿಯಿದೆ ಬಾ ಎಂದು
ನನ್ನ ಕರೆತರಲು ನಸುಕಿನ ಜಾವ
ಜವರಾಯನೊಟ್ಟಿಗೆ ರೈಲೇರಿ ಬಂದ.
-
ಆಗಿನ ಕಾಲ:
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ.
ಈಗಿನ ಕಾಲ:
ಗಂಡ ಹೆಂಡತಿ ಜಗಳ ಒಬ್ಬರನ್ನೊಬ್ಬರು ಮಕಾಡೆ ಮಲಗಿಸುವ ತನಕ.
😂🤣😂😂😂🤣🤣-
ಬಂಧುವಲ್ಲ ಬಳಗವಲ್ಲ
ತಂದೆಯಲ್ಲ ತಾಯಿಯಲ್ಲ
ಹಗಲಿರುಳು ಕಾಯಬಲ್ಲ
ತನ್ನ ಸುಖವ ತೊರೆದು ನಿಲ್ಲಬಲ್ಲ
ಬಿರುಬಿಸಿಲು ಲೆಕ್ಕವಿಲ್ಲ
ಬಿರುಮಳೆಗೆ ನಿಂತು ನೆನೆವನಲ್ಲ
ನಡುಗಿಸುವ ಚಳಿಯಲಿ ಕಾಯಕವೇ ಎಲ್ಲ
ನಿನಗಾವ ಗಡಿಯಾರವು ಸರಿಸಾಟಿಯಿಲ್ಲ
ಕಳ್ಳಕಾಕರಿಗೆ ಕೈಕೋಳ
ಕೊಲೆಗಡುಕರಿಗೆ ತೋಳ
ಕೇಳಿಸಿಕೊಳ್ಳುವ ಎಲ್ಲರ ಜಗಳ
ತಿಳಿಸಿ ಹೇಳುವ ಕಾನೂನು ನಿಯಮಗಳ
ಬಂದೂಕು ಬಗಲಲಿದ್ದರೂ
ಬಾಂಧವ್ಯ ಬೆಳೆಸುವ ಮಹಾಗುರು
ಸಮವಸ್ತ್ರ ಟೋಪಿ ಧರಿಸಿದವರು
ಶಿಸ್ತಿನ ಸಂಚಲನಕ್ಕೆ ಪಥವಾದರು
ಅನಾಥ ಶವವಾಗಿ ಕೊಳೆತವರ
ಅಪಘಾತವಾಗಿ ರಕ್ತಸುರಿದವರ
ನೋಡಿ ಟೋಪಿ ತೆಗೆದು ನಮಸ್ಕಾರ
ಮುಕ್ತಿ ನೀಡಿ ಸಂಸ್ಕಾರ
ಗಲಭೆಯಿರಲಿ ದೊಂಬಿಯಿರಲಿ
ಕಲ್ಲು ತೂರಾಡಲಿ ಜನರ ಮಹಾಸಾಗರವಿರಲಿ
ರೋಗರುಜಿನಗಳಿರಲಿ ಕಾಯುವ ಬೇಲಿ
ಮಡದಿ ಮಕ್ಕಳ ಪ್ರೀತಿಯ ಮನಸಲ್ಲಿಟ್ಟು
ಗಟ್ಟಿಯಾಗಿ ಮನೆಬಿಟ್ಟು ಕರ್ತವ್ಯಕ್ಕೆ ಓಗೊಟ್ಟು
ರಕ್ಷಣೆಗೆ ಪಣ ತೊಟ್ಟು
ಆರಕ್ಷಕರಾದರು ಸ್ವಾರ್ಥವ ಬಿಟ್ಟು.-
ಚಡಪಡಿಕೆ ಮನದೊಳಗೆ
ಕುಳಿತು ಪ್ರತಿಘಳಿಗೆ ಮನೆಯೊಳಗೆ
ಮನವೆಂಬ ಮಹಾಮಳಿಗೆ
ಕಂಡಿಲ್ಲ ಯಾವುದೇ ಏಳಿಗೆ ಸಿಗದೆ ಬಾಡಿಗೆ
ಸಂಚಾರಿ ನಯನದೊಳಗೆ
ಸದಾ ಏಣಿ ಹಾಕುವಾಸೆ ಬಾನಿಗೆ
ಜಂಗಮದಿಂದ ಸ್ಥಿರತೆಯೆಡೆಗೆ
ಸಾಗಿದ ಈ ಏಕಾಂಗಿ ಜಗದೊಳಗೆ
ಜನಜಂಗುಳಿಯ ಭುವಿಗೆ
ಧ್ಯಾನಿಸಲು ವಿರಾಮದ ಕೊಡುಗೆ
-
Happy Birthday YOURQUOTE....
Many many happy returns of the day. 💐-
ನೀ ನನ್ನ ಮನದ ಗುಡಿಯಲಿ ಅಮರ
ನೀ ನನ್ನ ದೇವನಾಗಿ ಅಜರಾಮರ
ನಿನ್ನ ದನಿಯೇ ನನ್ನೆದೆಯ ಸಿತಾರ
ನನ್ನ ಮನದ ತೇರಿನಲಿ ನಿನ್ನದೇ ಸಂಚಾರ.
ನೀನಿಲ್ಲದ ಜಗಕೆ ಮಂಗಳವಾದ್ಯವಿಲ್ಲ.
ನಿನ್ನದೇ ಜಪ-ತಪ ದಿನವೆಲ್ಲ.
ನನ್ನ ಬಿಟ್ಟು ಎಲ್ಲಿರುವೆ ನಿನ್ನ ದರುಶನವಿಲ್ಲ.
ನೀ ನನ್ನ ಜೀವನ ಸಂಗಾತಿ ನಾ ಕಾಯುತಿರುವೆನಲ್ಲ.
-SAMYY
-
ಹುಟ್ಟು ನನ್ನದಲ್ಲ, ಸಾವು ನನ್ನ ಕೈಯಲಿಲ್ಲ
ಹುಟ್ಟು ಪರರ ಇಚ್ಛೆ ಸಾವು ದೈವ ಇಚ್ಛೆ
ನಾನು ನಾನಾಗಿಲ್ಲ ನಾನು ನಾನೆಂದೇ ಅನಿಸಿಲ್ಲ
ನನ್ನದೆಂಬುದು ಇಲ್ಲಿಲ್ಲ ನನ್ನವರು ಯಾರಿಲ್ಲ
ತಾಯಿ ಗರ್ಭದ ಬಂಧನ ಸ್ವತಂತ್ರ ನನ್ನ ಜನನ
ಬಾಲ್ಯವೆಲ್ಲಾ ಲೋಕ ತಿಳಿವ ನಂದನವನ
ತಿಳಿದಲೋಕ ಕಟ್ಟುಪಾಡಿನಲಿ ಬಂಧಿಸಿದೆ ಜೀವನ
ಬದುಕು ಪೂರ್ವನಿರ್ಧರಿತ ಪೂರ್ವಾಗ್ರಹಿತ
ಸಮಾಜ ಸಂಕೋಲೆಯಲಿ ನಾ ಅಮರಖೈದಿ
ನಿಯಮಗಳ ಬಲೆಯಲಿ ನನ್ನ ಸಕಲ ಸಪ್ತಪದಿ
ಮುಪ್ಪಾಗಿ ಕಾದಿದೆ ದೇಹಮಳಿಗೆ
ದೈವೇಚ್ಛೆಯ ಕೊನೆಯುಸಿರ ಘಳಿಗೆ.
-SAMYY
-