ಅರ್ಥೈಸಿಕೊಳ್ಳದೆ
ಅನರ್ಥಮಾಡಿಕೊಂಡಿದ್ದು ನೀನು
ಅಪರೂಪದ ಸ್ನೇಹ
ಅನನ್ಯತೆಯ ಬಾಂಧವ್ಯ
ಅದರರಿವಿಲ್ಲದೆ ನೀ
ಅನುಮಾನದಿ
ಅಪಮಾನ ಮಾಡಿದ್ದು
ಅತ್ಯಂತ ಖೇದನೀಯವಲ್ಲವೆ?
ಆವಿರ್ಭವಿಸುತಿರುವ ಚಿಗುರು ನಾ
ಆರ್ದ್ರಭಾವದ ಮನವ
ಆಘಾತಕ್ಕೀಡು ಮಾಡಿರುವೆ.!
ಆಕಸ್ಮಿಕ ಭೇಟಿಯಿಂದ
ಅವಾಂತರ ಸೃಷ್ಠಿಸಿದೆ
ಆಂತರ್ಯದ ತಳಮಳದಿ
ಅಧಿಕವಾಗಿದೆ ಮನದ ತೊಳಲಾಟ.!-
ಹೃದಯ ಒಡೆಯಲು ಮಾತುಗಳೇ ಬೇಕಿಲ್ಲ,
ಅನುಮಾನಗಳು ಸಹ ಹೃದಯವನ್ನು ಇರಿದು ಕೊಲ್ಲುತ್ತವೆ...-
ಬದುಕಿನ ಬಿಳಿ ಹಾಳೆಯ ಮೇಲೆ ಅನುಮಾನದ ಅಡ್ಡಗೆರೆ ಎಳೆದರೆ ಬದುಕು ರದ್ದಿಯಾಗದೆ ಮತ್ತೇನಾದಿತ್ತು...?
-
ಸಂಬಂಧಗಳಲ್ಲಿ ಪ್ರಶ್ನೆಗಳ ಸೌಧವನ್ನು ಕಟ್ಟಿದ್ದರೆ,
ಅನುಮಾನ ಎಂಬ ಹೆಬ್ಬಾಗಿಲನ್ನು ಮನದಲ್ಲಿ ತೆರೆದಂತೆ....-
ಅನುಮಾನ ಎನ್ನುವುದು
ವಾಸಿ ಮಾಡಲಾಗದ ದೊಡ್ಡ ರೋಗವಿದ್ದಂತೆ
ಒಬ್ಬರ ಬಗ್ಗೆ ಗೊತ್ತಿಲ್ಲದೆ ಅನುಮಾನಿಸಿ
ಅವರನ್ನು ಕಳೆದುಕೊಳ್ಳಬೇಡಿ-
ಅವಳ ನಿಷ್ಕಲ್ಮಶ ಪ್ರೇಮಕ್ಕೆ ಅವನು ಅನುಮಾನದ ಬೆಲೆ ಏರಿದು ಅಲ್ಲದೆ, ಚುಚ್ಚು ಮಾತಿನ ಬಡ್ಡಿ ಕೂಡ ಸೇರಿಸಿದ್ದ....
-
ಜನರಲ್ಲಿ ಸಾಕಷ್ಟು ಇದೆ...
ಆದರೆ ಒಂದು ಸಮಸ್ಯೆಯೆಂದರೆ
ಭರವಸೆಯಲ್ಲಿ ಅನುಮಾನವಿದೆ,
ಅನುಮಾನದ ಮೇಲೆ ಭರವಸೆ ಇದೆ.-
ಅನುಮಾನಗಳ ನೆರಳಿನಲ್ಲಿರುವ ಸಂಬಂಧದ
ಜೊತೆಗೆ ಯಾವ ಚೌಕಾಸಿ ಮಾತುಗಳು ಕೂಡ ಬೇಡ,
ಅವರು ನಮ್ಮ ಯೋಗ್ಯತೆಗೂ ಯೋಗ್ಯರಲ್ಲ....-
ಹತ್ತಿರವಿದ್ದರೆ ಅನುಮಾನದ ಅಂತೆ ಕಂತೆ
ಬಣ್ಣದ ಬದುಕಿನ ಸಂತೆ
ಒಳಗೊಳಗೆ ಉರಿಯುವ ಕೆಂಡದಂತೆ
ಬರೀ ಮುಖವಾಡದ ಬದುಕಂತೆ
ಆದರೆ ದೂರವಿದ್ದಷ್ಟು ಬದುಕು ಸುಂದರತೆ
ಅದೇ ಪ್ರೀತಿ ಮಮತೆಯ ಸೊಗಸಂತೆ.-
ಅಣ್ಣ ತಮ್ಮಂದಿರೊಂದಿಗಾಚೆ ಹೋದರು ಅನುಮಾನಿಸಿ ನೋಡುವ ಜಗವಿದು. ತೀರಾ ಮರ್ಯಾದಸ್ಥರಾಗಿ ಬಾಳಲು ಹೋದರೆ, ಬಾವಿಯೊಳಗಿನ ಕಪ್ಪೆಯಾಗಬೇಕಾದೀತು ಎಚ್ಚರ.
-