ನಮ್ಮ ಮನೆಯಲೊಂದು...."ರಾಷ್ಟ್ರಕವಿ- ಕುವೆಂಪು"
ಅಡಿಬರಹದಡಿ 👇-
ವಿಶ್ವಮಾನವ ಸಂದೇಶದ ಮಹಾಚೇತನ ಡಾ!! ಕುವೆಂಪು ಕರ್ನಾಟಕದ ಮತ್ತು ಕನ್ನಡದ ಅನರ್ಘ್ಯ ರತ್ನ.ಅವರು ಈ ನಾಡು ಕಂಡ ಅತ್ಯಂತ ವಿಶಿಷ್ಟ ಕವಿ ಮತ್ತು ಮೇರು ಸಾಹಿತಿ. ತಮ್ಮ ಅತ್ಯಮೂಲ್ಯ ಕೃತಿರಚನೆಗಳಿಂದ ಅವರೊಬ್ಬ ರಸಋಷಿ ದಾರ್ಶನಿಕ ಕವಿ. ದೇಶ ಭಾಷೆಗಳ ಎಲ್ಲೇ ಮೀರಿ ನಿಂತ ಈ ಮಹಾನ್ ವ್ಯಕ್ತಿ ಮತ್ತು ಮಾನವ ಕುಲಕೋಟಿಗೆ ಸದಾ ಪ್ರೇರಣೆ..!
-
ಇಲ್ಲಿ
ಯಾರು ಮುಖ್ಯರಲ್ಲ
ಯಾರು ಅಮುಖ್ಯರಲ್ಲ
ಯಾವುದು ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ..!
ಇಲ್ಲಿ
ಎಲ್ಲದಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!
-
ಹತ್ತೊಂಬತ್ತನೇ ಶತಮಾನದ
ಅವತಾರ ಕವಿ ಪುಟ್ಟಪ್ಪ.
ಕುಪ್ಪಳ್ಳಿಯಲ್ಲಿ ಜನಿಸಿದೇಶದೆಲ್ಲಡೆ
ಪ್ರಚರಿಸಿತು ಇವರ ಮಟ್ಟಪ್ಪ.
ಕನ್ನಡಿಗರಿಗೆ ರಾಮಾಯಣವನ್ನು
ದರ್ಶನ ಗೈದ ವೆಂಕಟಪ್ಪ.
ರಾಷ್ಟ್ರ ಕವಿಯಾಗಿ ಮೆರೆದು
ಪದ್ಮ ವಿಭೂಷಣನಾದ ಕುವೆಂಪಪ್ಪ.
ಇವರ ಕುಪ್ಪಳ್ಳಿ ತಪ್ಪಲಿನ
ಪ್ರಕೃತಿಯ ನೀವಾಸದಲ್ಲಿನ ಕೆಂಪು
ಕರ್ನಾಟಕದೆಲ್ಲೆಡೆ ಹರಡಿ ಕಾವ್ಯ
ಮಯವಾಯಿತು ಸುಗಂಧದ ಕಂಪು.
ಜಯ ಭಾರತ ಜನನಿಯ ತನು
ಜಾತೇ ಜಯ ಹೇ ಕರ್ನಾಟಕ ಮಾತೇ
ಕನ್ನಡದಲ್ಲಿ ಮೊದಲ ರಾಷ್ಟ್ರ ಗೀತೆ ಹಾಡಿದ
ಕವಿವೆರೆಣ್ಯ.ದಿಗ್ಬ್ರಮೆ ಗೊಳಿಸಿತು
ಆ ಹಾಡಿನ ಜಾತೇ
ಕನ್ನಡ ಇರುವರೆಗೂ ನಿಮ್ಮ
ಹೆಸರು ಸ್ಥಿರ, ಕನ್ನಡಿಗರಿಗೆ
ನೀವೇ ಕಾವ್ಯಗಳ ಶಿಖರ-
ನಿನ್ನೆಡೆಗೆ ಬರುವಾಗ
ಸಿಂಗರದ ಹೊರೆಯೇಕೆ?
ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ
ಮಂತ್ರಗಳ ಮರೆಯೇಕೆ?
ಸಂಪ್ರದಾಯದ ಮರುಳು ಲಜ್ಜೆಯೇಕೆ?
ನೇವುರದ ಗೆಜ್ಜೆಗಳ
ಕಿಂಕಿಣಿಯ ದನಿ ನಿನ್ನ
ಸವಿಗೊರಳಿನಿಂಚರವ ಕೆಡಿಸದಿರಲಿ
ಸಿಂಗರದ ಜವನಿಕೆಯು ದೊರೆ ನಿನ್ನ
ಸಿರಿಮೆಯ ಸೌಂದರ್ಯವನು
ಮಬ್ಬುಗೊಳಿಸದಿರಲಿ
ನಗ್ನತೆಗೆ ನಾಚದೆಲೆ ಸಿರಿದಳಿರ
ತೆಕ್ಕೆಯಿಂ ಮೂಡಿಸುಗ್ಗಿಯನೊಲಿವ ಹೂವಿನಂತೆ
ಸಿಂಗರದ ಹೊರೆಯುಳಿದು
ಮಂತ್ರಗಳ ಮರೆಯುಳಿದು
ಪ್ರೇಮದಾರತಿ ಹಿಡಿದು ತೇಲಿ ಬರುವೆ.
ನಿನ್ನೆಡೆಗೆ ಬರುವಾಗ
ಸಿಂಗರದ ಹೊರೆಯೇಕೆ?
ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ
ಮಂತ್ರಗಳ ಮರೆಯೇಕೆ?
ಸಂಪ್ರದಾಯದ ಮರುಳು ಲಜ್ಜೆಯೇಕೆ?
ಕುವೆಂಪು...
-
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು |
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು ||
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು |
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||
ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ |
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು ||
ರಚನೆ : ಕುವೆಂಪು
-
ನಿಜ, 'ಕನ್ನಡ ಮನಸಲ್ಲಿದ್ರೆ ಸಾಕಾಗಲ್ಲ'
ಮತಿಯ ಮಾತಾಗಬೇಕು ಮುತ್ತಾಗಬೇಕು
ಎದೆಯ ಪ್ರೀತಿಯಾಗಬೇಕು! ಕನ್ನಡ
ಹೃದಯ ಜ್ಯೋತಿಯಾಗಬೇಕು!
ನೀತಿಯಾಗಬೇಕು ನಿರ್ಭೀತಿಯಾಗಬೇಕು
ಹೊತ್ತೊತ್ತಿನ ತುತ್ತಾಗಬೇಕು, ಸ್ವತ್ತಾಗಬೇಕು
ಯಾವೊತ್ತಿನ ಗೊತ್ತಾಗಬೇಕು ಗತ್ತಾಗಬೇಕು! ಕನ್ನಡ
ಕೊರಳ ಕತ್ತಾಗಬೇಕು ಕತ್ತಲೊಳಗಿನ ಕಿಚ್ಚಾಗಬೇಕು!
ಅನ್ನವಾಗಬೇಕು ಚಿನ್ನವಾಗಬೇಕು
ಭಿನ್ನವೆಣಿಸದ ಅವಿಚ್ಛಿನ್ನವಾಗಬೇಕು
ಕಣ್ಣಾಗಬೇಕು ಕಪ್ಪು ಮಣ್ಣಾಗಬೇಕು! ಕನ್ನಡ
ಬಣ್ಣ ಬಣ್ಣದ ಭಾವಬೆಳಕಾಗಬೇಕು!-
ಮಳೆಯ ಹನಿಯೇ ಧರೆಗೆ ಬಿದ್ದು
ಬೇರೆ ಬೇರೆ ಹನಿಗಳಾಗಿ ಚಿಮ್ಮುತ್ತಾ
ಹರಡಿ ಹೋಗುವಾಗ;
ಇನ್ನೂ ಮಾನವರದೇನು ಗ್ಯಾರಂಟಿ...?
ಭಾರ್ಗವ-
#ಗುಳಿಕೆನ್ನೆಯ ರಗಳೆ #
ನೋಡಬೇಡವೆ ಗೆಳತಿ,
ನೋಡಿದ್ದಷ್ಟು ಹತ್ತಿರ ಸೆಳೆಯಲ್ಪುಡುವೇನು ಒಡತಿ,
ಗುಳಿಕೆನ್ನೆ ನಗುವಾಗ ಮನಸ್ಸು ಸಮ್ಮನಿರುವುದೇನು,
ಹೃದಯದಿ ಕುಂತಿರುವಾಗ ಬಡಿತ ನಿಲ್ಲುವುದೇನು,
ಕಣ್ಣುಗಳೆರಡು ಮಿಲಾಯಿಸಿ ನಕ್ಕಾಗ-ಸಿಕ್ಕಾಗ ಕಂಪಿಸಿಬಿಡಬೇಕು.
ಜೀವನ ಸವಿಯೊಳು ಮಿಂದು ಕೂಡಿ ಬದುಕಿಬಿಡಬೇಕು,
ಏಲೇ,
ಗುಳಿಕೆನ್ನೆ ಹುಡುಗಿ ತಡಮಾಡದೇ ಸೇರಿಬಿಡು ನೀನು,
ವರ್ಣಿಸದೆ ಉಳಿದ ಪದಗಳ ರಗಳೆಯಲಿ ಸೋತಿರುವೆ ನಾನು.
-