ಅತಿಯಾದ ನೋವು,
ವಿಪರೀತ ದುಃಖ,
ಸಹಿಸಲಾಗದ ನಿರಾಸೆ
ಗಳೆಲ್ಲವೂ ವಿನೋದವೇ...
ನೋಡಿ ನಗುವ,
ನಕ್ಕು ಸ್ವೀಕರಿಸುವ ಮನಸ್ಸಿದ್ದರೆ!.
-
ಕನ್ನಡಿಗ
ಖಡ್ಗವಾಗಲಿ ಕಾವ್ಯ - ಜನರ ನೋವಿಗೆ ಮಿಡಿವ ಪ್ರಾಣಮಿತ್ರ
Che❤️
ಅತಿಯಾದ ನೋವು,
ವಿಪರೀತ ದುಃಖ,
ಸಹಿಸಲಾಗದ ನಿರಾಸೆ
ಗಳೆಲ್ಲವೂ ವಿನೋದವೇ...
ನೋಡಿ ನಗುವ,
ನಕ್ಕು ಸ್ವೀಕರಿಸುವ ಮನಸ್ಸಿದ್ದರೆ!.
-
ಬದುಕುವುದನ್ನು
ಮಕ್ಕಳು ಕಲಿಸುವಷ್ಟು
ಸರಳವಾಗಿ, ಯಾವ
ಸಂತನೂ,ತತ್ವಜ್ಞಾನಿಯೂ
ಕಲಿಸಲಾರ!..-
ಅವಕಾಶವೊಂದು ಬೇಕಿದೆ
ಮಕ್ಕಳಂತಾಗಲು!
ಅಕಾರಣವಾಗಿ ನಗಲು,
ಅಲ್ಪಕೂ ಅಚ್ಚರಿ ಪಡಲು,
ಅಂಗಳದೊಳು ಕೂಡಿಆಡಲು,
ಅಂತರವಿಲ್ಲದೆ ಪ್ರೀತಿಸಲು...
-
ನಗುವಿನ ಮೊಗವೊಂದು
ಕಾಣದೆ ಮರೆಯಾಗಿ,
ಮಗುವೊಂದು ಅಳುತಿಹುದು.
ನಾಟ್ಯದ ಶಿವನಿಂದು
ಕುಣಿಯದೆ ಶಿಲೆಯಾಗಿ,
ವೇದಿಕೆಯೇ ಕುಸಿದಿಹುದು!.
ನಟಿಸುವ ಯುವರತ್ನ
ಮಣ್ಣಲಿ ಮಣ್ಣಾಗಿ,
ಕತ್ತಲೆಯೇ ಸುತ್ತಿಹುದು!.
ನಮ್ಮಲ್ಲರ ಈ ದೈವ
ಆ ದೈವಕೆ ಪ್ರಿಯವಾಗಿ,
ಹೊತ್ತೊಯ್ದ, ಮನದ ಗುಡಿಹೊಡೆದು!.-