ನಿನ್ನ ಗರ್ಭದಿ ಮಗುವಾಗಿ ಜನಿಸುವೆ
ಮುದ್ದಾಡು ನನ್ನನು, ತಲೆ ಸವರಿ ಮುತ್ತಿಡು!!!!
ನೆತ್ತೀಲಿ ನಿನ್ನ ಸಿಂದೂರವಾಗುವೆ
ದಿನ ಬೆಳಗೆ ನಿನ್ನ ಹಣೆಗೆ ನನ್ನನ್ನು ಒತ್ತಿಡು!!!!-
🚩ಕನ್ನಡ🚩
👣ಜೀವನ ಜೂಜಾಟವಯ್ಯ ಭಾರ್ಗವ.👣
🥀✨°●Unplugged●°✨🥀
🏅°●Reveur●°🏅
... read more
ಕಾಲ ಮರಳಿ ಬರುವುದು
ತಳಿರ ತಂಪ ತರುವುದು
ವಿರಳ ದುಃಖಗಳ ನಶಿಸಿ
ಸಪ್ಪಳ ಶಾಂತಿಯದ್ದೇ
ಇಲ್ಲಿ ನೆಲೆ ನಿಲ್ಲುವುದು
-
ನೂರು ಜನರು ಕೂಡಿಪ್ಪರು
ಕಳೆಬರದ ಸುತ್ತ
ಕಡಲ ನೀರ ಬೆಸುಗೆಗೆ
ಕಾಯುತಿಹುದು ಎಲುಬುಗಳ ಮೊತ್ತ
ಧಗಧಗಿಸಲು ಹವಣಿಸಿಹುದು
ದೀವಟಿಯ ಅಗ್ನಿಯ ಜ್ವಾಲೆ
ಕಳಚಿತಲ್ಲಿಗೆ ಬೇಕೆಂದರು ಸಿಗದ
ಭಾವನೆಗಳ ಹೊನ್ನ ಮಾಲೆ
-
ಬೇಂದ್ರೆಜ್ಜನ ಕವನ ನೀನು
ತಿಳಿ ಮಧುರ ಗಾನ ಶ್ರವಣ ನೀನು
ನಿದಿರೆಯಲಿ ಬಣ್ಣ ಕನಸ್ಸುಗಳ ಭ್ರಮಣ ನೀನು
ನನ್ನ ಪ್ರತಿ ನೋವ್ವ ಶಮನ ನೀನು
ನೀ ಇಳಿ ಸಂಧ್ಯೆಯ ಕೇಸರಿಯ ಬಾನು
ನಿನ್ನದೇ ಕಾತರುವಿಕೆಯಲ್ಲಿದೆ ಈ ತನು
ಬಾ ಇಲ್ಲಿ ನನ್ನೆಡೆಗೆ ನೀನು
-
ಬಿಳಿದಿಂಗಳನ ಕೇಳಿದೆ
ನಿನ್ನ ಹೊಳಪ ಮೂಲವೇನೆಂದು?
ಇಳಿ ಸಂಧ್ಯೆಯ ರವಿಯ ಕೇಳಿದೆ
ನೀ ಪ್ರಜ್ವಲಿಪ ಪರಿಗೆ ಪುಷ್ಟಿಯ್ಯೇನೆಂದು
ಹೊಳೆ ತೊರೆಗಳ ಕೇಳಿದೆ
ಹರಿಯುವದರ ರಭಸಕೆ ಶಕ್ತಿಯೇನೆಂದು
ಗಗನಾಂಬುಧಿಗಳ ದಿಗಂತಕೆ ಕೇಳಿದೆ
ನಿನ್ನ ರಮಣೀಯತೆಗೆ ರಾಯನಾರೆಂದು
ಎಲ್ಲರದುತ್ತರ ಇತ್ತು ಒಂದೇ
ಅವಳ್ ಜಗಕಾಂತಿಯ ಬೆಳಗೊ ನಂದೇ
ಹೆಸರಿತ್ತು ಎನ್ನವಳದಲ್ಲಿ!!
ತನ್ನ ಬೆಳಕನು ಜಗಕ್ಕೂ ಚಲ್ಲಿ
ನಿಂತಿಹಳಲ್ಲಿ
ಎನ್ನ ಪ್ರೇಮದ ಬಳ್ಳಿ
ತಾನೇ!!!-
ನಿನ್ನ ಮುದ್ದು ಮೋರೆಯ
ಎನ್ನ ಅಂಗೈಯಲ್ಲಿಡುವೆ
ನಿನ್ನ ಕಣ್ಣ ಕಲರವಕೆ
ನನ್ನ ರಂಗನು ಸೇರಿಸುವೆ
ಮರೆತಿಲ್ಲಿ ಜಗವನು
ಬಾ ಇಲ್ಲಿ ನನ್ನೆಡೆಗೆ
ಬಿಳಿ ತಿಂಗಳನ
ಬೆಳಕಡಿಯಲಿ
ಪೀಯುಷ ವರುಷದಲಿ
ನೀ ನೆನೆದು ನಗುವುದನ
ಕಂಡು ನಾ ನಲಿವೆ-
ನಿನ್ನ ಮೌನದ ಮರೆಯ ಗಾನ ತರಂಗವ ನಾ ಬಲ್ಲೆ
ನಿನ್ನ ನಿದಿರೆಗೂ ಮೀರಿದ ಕನಸ್ಸ ನಾ ಬಲ್ಲೆ
ನಿನ್ನ ನಗುವ ಬಂದು ನನ್ನಲ್ಲಿಗೆ ಚಲ್ಲೇ!!
ಓಹ್ ಎನ್ನ ನಲ್ಲೇ!!
-
ಹಸಿರ ಬಯಲ
ಎಳೆ ಬಿಸಿಲ ಸಿರಿಯಲಿ
ಅಡಿಕೆ ಮೆಣಸ
ಕೆಮ್ಮಣ್ಣ ಬಸಿರಲಿ
ಇನನ ಇಷ್ಟ ಇಂದ್ರಪುರಿಯಲಿ
ತೋಟದಾ ಮನೆಯ
ಗದ್ದೆಯ ಬೆಳೆಯ ತೆನೆ ತೆನೆಯಲಿ
ಕವಿ ಕಲ್ಪನೆಯ ಕಾನನದಾಳದಲಿ
ಸುರಿದ ಮಳೆಗೆ ಹನಿಯ ಸೋನೆಯನೀವ
ಮನೆಯ ಮೇಲಣ ಕೆಂಪ ಹೆಂಚಿನಲಿ
ದಣಿದು ಬಂದು ಹರಿವ ಝರಿಗೆ
ಕಯ್ಯನೊಡ್ಡಿ ತೃಷೆಯ ತಣಿಸಿಕೊಳ್ಳೋ ಖುಷಿಯಲಿ
ತುಂಗೆಯ ಭದ್ರೆಯ ಶರಾವತಿಯ ಮನೋಜ್ಞದ
ರಭಸಕೆ ಸಿಲುಕಿ ಸಾಗರದಲ್ಲಿ ಉಪ್ಪಾಗಿ ಕರಗಿಹೆನ್
ಕನ್ನಡದ ಮಲೆನಾಡ ಮಾಡಿಲಲಿ
-
ಗಗನದಂಚ ಸೋಮನತ್ತ
ಕಯನೊಡ್ಡಿ ತಿನಿಸುವಳು ತುತ್ತ
ತೊಳಲೆತ್ತಿ ತಿರುಗಿಸುವಳು ಜಗದ ಸುತ್ತ
ರಾತ್ರಿ ಭಯದ ಬಲೆಗೆ ಬಿದ್ದಾಗ ಕೊಡುವಳಾಕೆ ಮುತ್ತಾ
ಗುಮ್ಮನಾಗಮನಕೆ ನಾನೋಡುವೆನು ಅವಳ ಸೆರಗಿನತ್ತ
ಅವಳದೋ ಪ್ರೀತಿಯಂಚುವ ಚಿತ್ತ
ಅವಳೇ ಮಾತೇ-ನನ್ನ ಹೆತ್ತ
ಅವಳೇ ಪ್ರಥಮ ಗುರು- ನನಗೆ ಅಕ್ಷರವನಿತ್ತ
-