ಜೋಡಿ - ಮೋಡಿ
ಬೆಳಗಾದರೆ ಪ್ರತಿದಿನ ಕೆಲಸದ ಮೋಡಿ
ಸೂರ್ಯ ನದಿಯಲಿ ಮುಳುಗಿದರೆ
ನಾವು ಸಂಜೆಯಲಿ ಕಾಫಿಯ ಜೋಡಿ.
- ಅ ನಾ-
ಕಣ್ಣಿರಿಗೂ ಮಳೆಗು ಉಂಟು ಸಂಬಂಧ
ದುಃಖದಿ ಹೊರ ಬರುವುದು ಒಂದು
ಆಕಾಶದಿ ಮೋಡದಿ ಸುರಿವುದು ಇನ್ನೊಂದು-
ಕೂತುಹಲಕೆ ತುಡಿಯಲಿ ನಮ್ಮ ಮನಸ್ಸು
ಯಶಸ್ಸಿನ ಹಸಿವು ನೀಗಿ ಆಗಲಿ ಸೊಗಸು.
ಜಗವಿದು ಸುಂದರ ಮಾಯೆಯ ಹಂದರ
ಹೊಸತನ ಸಂಸ್ಕಾರ ಪ್ರತಿದಿನ ಚಮತ್ಕಾರ.
-
ಕೂತುಹಲಕೆ ತುಡಿಯಲಿ ನಮ್ಮ ಮನಸ್ಸು
ಯಶಸ್ಸಿನ ಹಸಿವು ನೀಗಿ ಆಗಲಿ ಸೊಗಸು.
ಜಗವಿದು ಸುಂದರ ಮಾಯೆಯ ಹಂದರ
ಹೊಸತನ ಸಂಸ್ಕಾರ ಪ್ರತಿದಿನ ಚಮತ್ಕಾರ
- ಅ
-
ಮತ್ತೇ ಮತ್ತೇ ಹೇಳದಿರು
ಕತ್ತಲ ರಾತ್ರಿ ಕಾಡದಿರು
ಬೆಳಕ ಹರಸಿ ಹೊರಡುತಿರು
ಜೀವನ ದಾರಿ ಹುಡುಕಿಬಿಡು.-
ಸಂಧರ್ಭಗಳ ಪೊಣಿಸುತ್ತಾ ಕುಳಿತು
ಜೀವನ ಬಂಡಿ ಸಾಗಿಸುವುದ ಕಲಿತು
ಭೂಮಿಯ ಕತ್ತಲು-ಬೆಳಕಲಿ ಬೆರೆತು
ಅಂಧಕಾರದಿಂದ ಜ್ಞಾನದೆಡೆಗೆ ನಡೆದು
ಈ ದಿನ ಕಳೆದಿದ್ದೆ ಗೊತ್ತಾಗಲಿಲ್ಲ-
ಸದ್ದಿಲ್ಲದೇ ಶುರುವಾಯಿತು
ಗದ್ದಲದೊಳಗೆ ಮಾತು ಜೋರಾಯಿತು.
ಬದುಕಿನ ಬಂಡಿ ಸಾಗಿಸಲು,
ನಗುತಾ ಸಾಗುವ ಕಾರ್ಯ ಮುಂದಾಯಿತು.-
ಉಚಿತವಾಗಿ ದೊರೆತದ್ದೆಲ್ಲವೂ ಗೌಣ,
ದುಡಿದು ಉಳಿದಿದ್ದೆಲ್ಲವೂ ಮೌನ.
ಸಮಯ ಕಳೆವುದು ಎಲ್ಲರಿಗೂ ಸಮಾನ.
-
ಕ್ಷಮಿಸುವ ಶ್ರೇಷ್ಠ ಗುಣ ತೊರು,
ಜೀವನದ ಆಯಮಗಳ ಪರಿಚಯ ನೋಡು,
ಇದ್ದ ಹಾಗೇ ಇರದ ಪರಿಸ್ಥಿತಿಗಳ,
ಜೀವನದ ಆಗು-ಹೋಗುಗಳಲಿ ಕರಗಲು ಬಿಡು.
-